ನವದೆಹಲಿ: World Radio Day 2021 - ಇಂದು ವಿಶ್ವ ರೇಡಿಯೋ ದಿನ (World Radio Day 2021). ಈ ದಿನದ ಅಂಗವಾಗಿ ಓಡಿಷಾದ ಪುರಿ ಜಿಲ್ಲೆಯ (Odisha's Puri) ಕಲಾವಿದನೊಬ್ಬ 3000 ಕ್ಕೂ ಹೆಚ್ಚು ಬೆಂಕಿಕಡ್ಡಿಗಳನ್ನು (Matchsticks) ಬಳಸಿ 1980ರ (1980s radio) ದಶಕದ ರೇಡಿಯೋ ಪ್ರತಿಕೃತಿ ತಯಾರಿಸಿದ್ದಾನೆ. ಪ್ರತಿ ವರ್ಷ ಫೆಬ್ರುವರಿ 13 ರಂದು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತದೆ. ರೇಡಿಯೋ ಪ್ರತಿಕೃತಿ ಕುರಿತು ಮಾಹಿತಿ ನೀಡಿರುವ ಕಲಾವಿದ ಸಾಸ್ವತ್ ರಂಜನ್ ಸಾಹೂ (Saswat Ranjan Sahoo), ತಾವು ಸುಮಾರು ನಾಲ್ಕು ದಿನಗಳ ಪರಿಶ್ರಮದಿಂದ 3130 ಬೆಂಕಿಕಡ್ಡಿಗಳನ್ನು ಉಪಯೋಗಿಸಿ ಈ ರೇಡಿಯೋ ತಯಾರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ- World Cancer Day 2020: ಈ ಪಾನೀಯದಿಂದ ಕ್ಯಾನ್ಸರ್ ಅಪಾಯ ಕಡಿಮೆ
ಪ್ಯಾನಾಸೋನಿಕ್ ಸ್ಟೀರಿಯೋನ (Panasonic stereo) ಪ್ರತಿಕೃತಿಯಾಗಿರುವ ಈ ರೇಡಿಯೋದಲ್ಲಿ ಒಟ್ಟು 3130 ಬೆಂಕಿಕಡ್ಡಿಗಳನ್ನು ಬಳಸಲಾಗಿದ್ದು, 4 ದಿನಗಳಲ್ಲಿ ಈ ಪ್ರತಿಕೃತಿ ತಯಾರಾಗಿದೆ ಎಂದು ಸಾಸ್ವತ್ ರಂಜನ್ ಹೇಳಿದ್ದಾರೆ. "ನಾನು ಪ್ರತಿಯೊಂದು ರೇಡಿಯೋ ಕಾರ್ಯಕ್ರಮಗಳನ್ನು ಬೆಂಬಲಿಸುತ್ತೇನೆ ಮತ್ತು ಎಲ್ಲರು ರೇಡಿಯೋ ಆಲಿಸಬೇಕು ಎಂದು ನಾನು ಕೋರುತ್ತೇನೆ ಎಂದು ಸಾಸ್ವತ್ ರಂಜನ್ ಹೇಳುತ್ತಾರೆ.
ಇದನ್ನು ಓದಿ- World Food Day 2020: ವಿಶ್ವ ಆಹಾರ ದಿನದ ಇತಿಹಾಸ ಮತ್ತು ಮಹತ್ವ
Odisha: To mark World Radio Day on February 13, an artist in Puri has made a replica of radio by using matchsticks.
"I used 3,130 matchsticks and worked for four days to make this replica," Saswat Ranjan Sahoo said yesterday. pic.twitter.com/bREzfn3xae
— ANI (@ANI) February 13, 2021
ಪ್ರತಿ ವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನಾಚರಣೆಯನ್ನು ಆಚರಿಸಲಾಗುತ್ತದೆ. ರೇಡಿಯೋ ಮಾಧ್ಯಮದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವತಿಯಿಂದ ನಡೆಸಲಾಗುವ ' ಮನ್ ಕೀ ಬಾತ್' (Mann Ki Baat) ರೇಡಿಯೋ ಕಾರ್ಯಕ್ರಮ ಕೆಲವೇ ವರ್ಷಗಳಲ್ಲಿ ಭಾರಿ ಜನಪ್ರೀಯತೆ ಗಿಟ್ಟಿಸಿರುವುದು ಇಲ್ಲಿ ಗಮನಾರ್ಹ
ಇದನ್ನು ಓದಿ- ಯುಎನ್ 75ನೇ ವಾರ್ಷಿಕೋತ್ಸವದಲ್ಲಿ 'ವಾಸುದೈವ ಕುಟುಂಬಕಂ' ಮಹತ್ವವನ್ನು ಜಗತ್ತಿಗೇ ವಿವರಿಸಿದ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.