'ಸಿಂಬಾ' ಅಭಿಮಾನಿಗಳಿಗೆ 'ಜೂ.ಸರ್ಜಾ'ರನ್ನು ಪರಿಚಯಿಸಿದ ಮೇಘನಾ ರಾಜ್.!

ಇವತ್ತು ವಾಲೈಂಟಿನ್ ಡೇ . ಪ್ರೇಮಿಗಳ ದಿನ.  ಪ್ರೇಮಿಗಳ ದಿನದಂದೇ ಕನ್ನಡದ ಜನಪ್ರಿಯ ನಟರಾಗಿದ್ದ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್  ಮೊದಲ ಬಾರಿಗೆ ತಮ್ಮ ಪುಟ್ಟ ಮಗುವಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ.   

Written by - Ranjitha R K | Last Updated : Feb 14, 2021, 11:22 AM IST
  • ಮೊದಲ ಬಾರಿಗೆ ತಮ್ಮ ಪುಟ್ಟ ಮಗುವಿನ ವಿಡಿಯೋ ಪೋಸ್ಟ್ ಮಾಡಿದ ಮೇಘನಾ ರಾಜ್
  • ಅಕ್ಟೋಬರ್ 22ರಂದು ಜೂನಿಯರ್ ಚಿರಂಜೀವಿ ಜನನವಾಗಿತ್ತು
  • ಫೆ. 14 ಅಂದರೆ, ಪ್ರೇಮಿಗಳ ದಿನದಂದೇ ಚಿರು ಮತ್ತು ಮೇಘನಾ ನಿಶ್ಚಿತಾರ್ಥ ನಡೆದಿತ್ತು.
  • ಜೂ. ಚಿರುಗೆ ಅಭಿಮಾನಿಗಳ ಶುಭ ಹಾರೈಕೆ
'ಸಿಂಬಾ' ಅಭಿಮಾನಿಗಳಿಗೆ 'ಜೂ.ಸರ್ಜಾ'ರನ್ನು ಪರಿಚಯಿಸಿದ ಮೇಘನಾ ರಾಜ್.! title=
ಮಗುವಿನ ವಿಡಿಯೋ ಪೋಸ್ಟ್ ಮಾಡಿದ ಮೇಘನಾ ರಾಜ್ (Photo instagram)

ಬೆಂಗಳೂರು: ಇವತ್ತು ವಾಲೈಂಟಿನ್ ಡೇ (Valentin Day). ಪ್ರೇಮಿಗಳ ದಿನ.  ಪ್ರೇಮಿಗಳ ದಿನದಂದೇ ಕನ್ನಡದ ಜನಪ್ರಿಯ ನಟರಾಗಿದ್ದ ದಿವಂಗತ ಚಿರಂಜೀವಿ ಸರ್ಜಾ (Chiranjeevi  Sarja) ಅವರ ಪತ್ನಿ ಮೇಘನಾ ರಾಜ್ (Meghana Raj Sarja) ಮೊದಲ ಬಾರಿಗೆ ತಮ್ಮ ಪುಟ್ಟ ಮಗುವಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪ್ರೇಮಿಗಳ ದಿನದಂದು ಜೂನಿಯರ್ ಚಿರುವಿನ (Jr. Chiru)ವಿಡಿಯೋ ಹಂಚಿಕೊಳ್ಳವುದಾಗಿ ಮೇಘನಾರಾಜ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹೇಳಿಕೊಂಡಿದ್ದರು. 

ಈ ಮೊದಲು ಹೇಳಿದಂತೆ, ಮೇಘನಾ (Meghna Raj)ಇಂದು,  ಇನ್ ಸ್ಟಾಗ್ರಾಂನಲ್ಲಿ (Instagram) ಜೂನಿಯರ್ ಚಿರುವಿನ ಮುದ್ದಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಕ್ಟೋಬರ್ 22ರಂದು  ಜೂನಿಯರ್ ಚಿರಂಜೀವಿ ಜನನವಾಗಿತ್ತು ಆದರೆ, ಇಲ್ಲಿಯ ತನಕ ಮಗುವಿನ ವಿಡಿಯೋ ಬಹಿರಂಗವಾಗಿರಲಿಲ್ಲ. 

 
 
 
 

 
 
 
 
 
 
 
 
 
 
 

A post shared by Meghana Raj Sarja (@megsraj)

 

 

ಇದನ್ನೂ ಓದಿ : OMG! Deepika Padukone ಧರಿಸಿರುವ ಮಾಸ್ಕ್ ಬೆಲೆ ಕೇಳಿದರೆ ಶಾಕ್ ಆಗ್ತೀರ

ಜೂನಿಯರ್ ಸರ್ಜಾಗೆ ಅಭಿಮಾನಿಗಳ ಹಾರೈಕೆ.!
ಜೂನಿಯರ್ ಸರ್ಜಾ ವಿಡಿಯೋಗೆ ಅಭಿಮಾನಿಗಳು (Chiru Fans) ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಜೂನಿಯರ್ ಚಿರುವನ್ನು ನೋಡಿ ಚಿರಂಜೀವಿ ಸರ್ಜಾ (Chiranjeevi Sarja) ಮರುಹುಟ್ಟು ಪಡೆದು ಬಂದಿದ್ದಾರೆ ಎಂದು ಅಭಿಮಾನಿಗಳು ನಂಬಿದ್ದಾರೆ. ಕುಟುಂಬಸ್ಥರೂ ಇದನ್ನೇ ಹೇಳುತ್ತಿದ್ದಾರೆ.  ಕಳೆದ ವರ್ಷ, ಕನ್ನಡ ಚಿತ್ರರಂಗ (Kannada Film Industry) ಪ್ರತಿಭಾನ್ವಿತ ನಾಯಕ ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿತ್ತು.
 
`ನಮ್ಮ ಸಿಂಬಾ.! ಐ ಲವ್ ಯು ಆಲ್..!
ಇನ್ ಸ್ಟಾಗ್ರಾಂನಲ್ಲಿ  (Instagram) ಜೂ. ಚಿರುವಿನ ಸುಂದರ ವಿಡಿಯೋ ಪೋಸ್ಟ್ ಮಾಡಿರುವ ಮೇಘನಾ (Meghna Raj), ಪುಟ್ಟ ಯುವರಾಜನನ್ನು ಪರಿಚಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.  ನಮ್ಮ ಸಿಂಬಾ (Our Simba) ಅಂತಲೂ ಹೇಳಿದ್ದಾರೆ. ಅಪ್ಪ ಅಮ್ಮನ ಪ್ರೀತಿ, ಬೆಂಬಲ ನಿನ್ನೊಂದಿಗಿದೆ. ನೀನೇ ಪರಿವಾರ ಮತ್ತು ಪರಿವಾರ ನಿನ್ನನ್ನು ಬೇಷರತ್ ಪ್ರೀತಿಸುತ್ತದೆ. ಇವನು ನಮ್ಮ ಸಿಂಬಾ, ಐ ಲವ್ ಯು ಆಲ್ (Simba, I Love you all) ಎಂದು ಮೇಘನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ರೈತ ಪ್ರತಿಭಟನೆ ಬಗ್ಗೆ ಭಾವುಕರಾಗಿ ಕವನ ಓದಿದ ಸೋನಾಕ್ಷಿ ಸಿನ್ಹಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News