ಭೂತ-ಪಿಶಾಚಿಗಳೇ ಅಥವಾ ದೇವ-ದೇವತೆಗಳೇ? ಅಶ್ವತ್ಥ ಮರದ ಮೇಲೆ ಯಾರ ಅಧಿಪತ್ಯ ?

Facts Related To Ashvattha Tree - ಪೂಜೆ ಹಾಗೂ ಅರ್ಚನೆ ಮಾಡುವಾಗ ತುಳಸಿಯ ಪ್ರಯೋಗ ಸರ್ವಶ್ರೇಷ್ಠ ಎನ್ನಲಾಗುತ್ತದೆ.  ಇದೆ ರೀತಿ ವೃತ ವಿಧಾನಗಳಿಗೆ ಅಶ್ವತ್ಥಮರ, ಬೇವಿನ ಮರ ಹಾಗೂ ಆಲದ ಮರಗಳ ವಿಶೇಷ ಮಹತ್ವವಿದೆ. ಅಶ್ವತ್ಥ ಮರದ ಮೇಲೆ ದೇವತೆಗಳ ವಾಸವಿರುತ್ತದೆ. ಹೀಗಾಗಿ ಅಶ್ವತ್ಥ ಮರದ ಕೆಳಗೆ ದೀಪ ಉರಿಸಿ ಬರುವಾಗ ಹಿಂದಿರುಗಿ ನೋಡಬಾರದು ಎನ್ನಲಾಗುತ್ತದೆ.

ನವದೆಹಲಿ: Facts Related To Ashvattha Tree - ಹಾರರ್ (Horror) ಚಿತ್ರಗಳನ್ನು ನೋಡುವಾಗ ಅಥವಾ ಹಿರಿಯ್ತರಿಂದ ಭೂತ-ಪ್ರೇತದ ಕಥೆಗಳನ್ನು ಕೇಳುವಾಗ ಅದರಲ್ಲಿ ಆಲದ ಮರದ ಉಲ್ಲೇಖ ಇದ್ದೆ ಇರುತ್ತದೆ. ಇದೆ ಕಾರಣದಿಂದ ಜನರು ಅಶ್ವತ್ಥ ಮರದ (Peepal Tree)ಮೇಲೆ ಭೂತಗಳ ವಾಸವಿರುತ್ತದೆ (Ghost Place Peepal) ಎಂದು ನಂಬುತ್ತಾರೆ. ಆದರೆ ನಿಜಾಂಶ ಬೇರೆಯೇ ಇದೆ. ಈ ಮರದ ಮೇಲೆ ದೆವ್ವಗಳ ವಾಸ ಇರುವುದಿಲ್ಲ ಮತ್ತು ಈ ಮರದ ಮೇಲೆ ದೇವ ದೇವತೆಗಳ ವಾಸವಿರುತ್ತದೆ.

 

ಇದನ್ನು ಓದಿ-Marriage Planet Venus Setting - ನಾಳೆಯಿಂದ ಶುಕ್ರಾಸ್ತ ಆರಂಭವಾಗಲಿದೆ, ವಿವಾಹ-ಶುಭಕಾರ್ಯಗಳಿಗೆ ಬ್ರೇಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಅಶ್ವತ್ಥ ಮರದ (Ashvattha Tree) ಮೇಲೆ ದೆವ್ವಗಳ ವಾಸವಿರುತ್ತದೆ ಎನ್ನಲಾಗುತ್ತದೆ. ಆದರೆ, ಆ ದೇವಗಳನ್ನು ಇದುವರೆಗೆ ಯಾರು ನೋಡಿಲ್ಲ. ಹಲವು ಜನರು ಈ ಮರದ ಕೆಳಗೆ   ದೀಪ ಉರಿಸುತ್ತಾರೆ. ಹೀಗಿರುವಾಗ ದೆವ್ವಗಳನ್ನು ಖುಷಿಪಡಿಸಲು ಅವರು ಈ ದೀಪ ಉರಿಸುತ್ತಾರೆಯೇ? ಎಂಬಿತ್ಯಾದಿ ಸವಾಲುಗಳು ಏಳುತ್ತವೆ. ಅಶ್ವತ್ಥ ಮರದ ಕುರಿತು ಇಂತಹುದೇ ಕೆಲ ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ.

2 /6

ವೈದಿಕ ನಂಬಿಕೆಗಳ (Spiritual News) ಪ್ರಕಾರ ಕೆಲ ಮರ ಹಾಗೂ ಸಸ್ಯಗಳಿಗೆ ಧರ್ಮ ಮತ್ತು ಕರ್ಮದಲ್ಲಿ ವಿಶೇಷ ಸ್ಥಾನ ಕಲ್ಪಿಸಲಾಗಿದೆ.   ಪೂಜೆ ಹಾಗೂ ಅರ್ಚನೆ ಮಾಡುವಾಗ ತುಳಸಿಯ ಪ್ರಯೋಗ ಸರ್ವಶ್ರೇಷ್ಠ ಎನ್ನಲಾಗುತ್ತದೆ.  ಇದೆ ರೀತಿ ವೃತ ವಿಧಾನಗಳಿಗೆ ಅಶ್ವತ್ಥಮರ, ಬೇವಿನ ಮರ ಹಾಗೂ ಆಲದ ಮರಗಳ ವಿಶೇಷ ಮಹತ್ವವಿದೆ. ಅಶ್ವತ್ಥ ಮರದ ಮೇಲೆ ದೇವತೆಗಳ ವಾಸವಿರುತ್ತದೆ. ಹೀಗಾಗಿ ಅಶ್ವತ್ಥ ಮರದ ಕೆಳಗೆ ದೀಪ ಉರಿಸಿ ಬರುವಾಗ ಹಿಂದಿರುಗಿ ನೋಡಬಾರದು ಎನ್ನಲಾಗುತ್ತದೆ. ಸ್ಕಂದ ಪುರಾಣದಲ್ಲಿ ಅಶ್ವಸ್ಥ ಮರದಲ್ಲಿ ಶ್ರೀವಿಷ್ಣು ವಾಸವಾಗಿದ್ದಾನೆ ಎಂಬ ಉಲ್ಲೇಖವಿದೆ. ಈ ವೃಕ್ಷವನ್ನು ಅಕ್ಷಯ ವೃಕ್ಷ ಎಂದೂ ಕೂಡ ಕರೆಯಲಾಗುತ್ತದೆ. ಈ ಮರದ ಎಳೆಗಳು ಎಂದಿಗೂ ಖಾಲಿಯಾಗುವುದಿಲ್ಲ ಎನ್ನಲಾಗುತ್ತದೆ.

3 /6

ಜ್ಯೋತಿಷ್ಯಶಾಸ್ತ್ರದಲ್ಲಿಯೂ ಕೂಡ ಅಶ್ವತ್ಥ ಮರದ ಮಹಿಮೆಯ ಕುರಿತು ಉಲ್ಲೇಖಿಸಲಾಗಿದೆ. ಶನಿಗೆ ಸಂಭಂಧಿಸಿದ ಸಮಸ್ಯೆಗಳ ನಿವಾರಣೆಗೆ ಅಶ್ವತ್ಥ ಮರ ಬೆಳೆದು ಅದಕ್ಕೆ ನೀರನ್ನು ಅರ್ಪಿಸಲು ಹೇಳಾಗುತ್ತದೆ. ಈ ಮರ ಹಗಲು ಮತ್ತು ರಾತ್ರಿ ಆಕ್ಸಿಜನ್ ನೀಡುವ ಮರವಾಗಿದೆ. ಈ ಮರದ ಬುಡಕ್ಕೆ ಎಷ್ಟು ನೀರು ಹಾಕಲಾಗುವುದೋ, ಇದು ಅಷ್ಟೇ ಆಕ್ಸಿಜನ್ ಹೊರಹಾಕುತ್ತದೆ. ಇದೆ ಕಾರಣದಿಂದ ಈ ಗಿಡಕ್ಕೆ ನೀರನ್ನು ಅರ್ಪಿಸುವುದು ಶುಭ ಎಂದು ಹೇಳಲಾಗುತ್ತದೆ. ಇದು ಪ್ರಕೃತಿ ದೃಷ್ಟಿಯಿಂದಲೂ ಕೂಡ ಉತ್ತಮ. ಈ ಮರಕ್ಕೆ ನೀರು ಅರ್ಪಿಸುವ ವ್ಯಕ್ತಿಯ ಜನ್ಮ-ಜನ್ಮಗಳ ಪಾಪಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ.

4 /6

ಈ ವೃಕ್ಷವನ್ನು ಎಂದಿಗೂ ಕಡಿಯಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದರಿಂದ ಪಿತೃದೋಷ ಆಂಟಿಕೊಳ್ಳುತ್ತದೆ ಎಂಬ ಆಧ್ಯಾತ್ಮಿಕ ನಂಬಿಕೆ. ಇದೆ ಕಾರಣದಿಂದ ಈ ಮರದ ಕೆಳಗೆ ದೀಪ ಉರಿಸಿ ಬರುವಾಗ ಹಿಂದಿರುಗಿ ನೋಡಬಾರದು ಎಂದು ಹೇಳುತ್ತಾರೆ. ಹೀಗಾಗಿ ಈ ಮರಗಳ ಕೊಂಬೆಗಳ ಮೇಲೆ ಆತ್ಮಗಳು ವಾಸಿಸುತ್ತವೆ ಎಂಬುದರ ಹಿಂದಿನ ಕಾರಣ ಕೂಡ ಇದೆ ಆಗಿರಬಹುದು. ಅಂತಿಮ ಸಂಸ್ಕಾರದ ಬಳಿಕ ಅಸ್ಥಿಗಳನ್ನು ಮನೆಗೆ ತರಲಾಗುವುದಿಲ್ಲ ಹಾಗೂ ಅವುಗಳನ್ನು ಅಶ್ವತ್ಥ ಮರದ ಕೊಂಬೆಗೆ ನೇತುಹಾಕಲಾಗುತ್ತದೆ. ಇದೆ ಕಾರಣದಿಂದ ಜನಮಾನಸದಲ್ಲಿ ಮಡಿದ ವ್ಯಕ್ತಿಗಳ ಆತ್ಮ ಈ ಮರದ ಕೊಂಬೆಗಳಲ್ಲಿ ವಾಸವಾಗಿರುತ್ತದೆ ಎಂಬುದು ಪ್ರಚಲಿತದಲ್ಲಿದೆ.

5 /6

ಅಶ್ವತ್ಥ ಮರವನ್ನು ಅತ್ಯಂತ ಶುಭ ವೃಕ್ಷ ಎಂದು ಪರಿಗಣಿಸಲಾಗುತ್ತದೆ. ಶ್ರೀಕೃಷ್ಣನ ಅತ್ಯಂತ ಪ್ರೀತಿಯ ವೃಕ್ಷ ಇದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ 'ವೃಕ್ಷಗಳಲ್ಲಿ ಅಶ್ವತ್ಥ ವೃಕ್ಷ ನಾನು' ಎಂದು ಹೇಳುತ್ತಾರೆ. ಶಾಸ್ತ್ರಗಳಲ್ಲಿ ಈ ಮರವನ್ನು ದೈವೀಯ ವೃಕ್ಷ ಎಂದು ಕರೆಯಲಾಗಿದೆ.

6 /6

ಪೂಜೆ ಹಾಗೂ ಅರ್ಚನೆ ಮಾಡುವಾಗ ತುಳಸಿಯ ಪ್ರಯೋಗ ಸರ್ವಶ್ರೇಷ್ಠ ಎನ್ನಲಾಗುತ್ತದೆ.  ಇದೆ ರೀತಿ ವೃತ ವಿಧಾನಗಳಿಗೆ ಅಶ್ವತ್ಥಮರ, ಬೇವಿನ ಮರ ಹಾಗೂ ಆಲದ ಮರಗಳ ವಿಶೇಷ ಮಹತ್ವವಿದೆ. ಅಶ್ವತ್ಥ ಮರದ ಮೇಲೆ ದೇವತೆಗಳ ವಾಸವಿರುತ್ತದೆ. ಹೀಗಾಗಿ ಅಶ್ವತ್ಥ ಮರದ ಕೆಳಗೆ ದೀಪ ಉರಿಸಿ ಬರುವಾಗ ಹಿಂದಿರುಗಿ ನೋಡಬಾರದು ಎನ್ನಲಾಗುತ್ತದೆ.