ಚೆನ್ನೈ: Ind Vs Eng: Chennai Test - ಚೆನ್ನೈನ ಟರ್ನಿಂಗ್ ಪಿಚ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ (India Vs England) ಪಂದ್ಯದಲ್ಲಿ ಶತಕದ ಆಟ ಆಡಿದ ಭಾರತದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ (RavichandranAshwin) ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಬಾರಿ ಶತಕ ಮತ್ತು ಐದು ವಿಕೆಟ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೂರು ಬಾರಿ ಒಂದೇ ಮ್ಯಾಚ್ ನಲ್ಲಿ ಐದು ವಿಕೆಟ್ ಹಾಗೂ ಶತಕ ಬಾರಿಸಿದ್ದಾರೆ. ಗ್ಯಾರಿ ಸೋಬರ್ಸ್ ಮತ್ತು ಜ್ಯಾಕ್ ಕಾಲಿಸ್ ಅವರಂತಹ ಕ್ರಿಕೆಟ್ ದಂತಕಥೆಗಳ ದಾಖಲೆಯನ್ನು ಅಶ್ವಿನ್ ಚೆನ್ನೈ ಶತಕದಿಂದ ಮುರಿದಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಮಾಜಿ ಆಲ್ ರೌಂಡರ್ ಇಯಾನ್ ಬೋಥಮ್ ಇದ್ದು, ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು ಐದು ಬಾರಿ ಈ ಸಾಧನೆಯನ್ನು ಮಾಡಿದ್ದಾರೆ.
ಅಷ್ಟೇ ಅಲ್ಲ, ಅಶ್ವಿನ್ ತಮ್ಮ ತವರು ಮೈದಾನದಲ್ಲಿ 106 ರನ್ ಭರ್ಜರಿ ಶತಕ ಬಾರಿಸುವ ಮೂಲಕ, ಚೆಪಾಕ್ ಮೈದಾನದಲ್ಲಿ (Chepauk Stadium) ಶತಕ ಗಳಿಸಿದ ತಮಿಳುನಾಡಿನ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ 1986–87ರಲ್ಲಿ ಪಾಕಿಸ್ತಾನದ ವಿರುದ್ಧ 123 ರನ್ ಗಳಿಸುವ ಮೂಲಕ ಚೆನ್ನೈನ ಕ್ರೀಡಾಂಗಣದಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ- Ind Vs Eng: Chennai Test ನಲ್ಲಿ Harbhajan Singh ದಾಖಲೆ ಮುರಿದ Ravichandran Ashwin
ಇದಕ್ಕೂ ಮೊದಲು ರವಿಚಂದ್ರನ್ ಅಶ್ವಿನ್ ಒಂದೇ ಟೆಸ್ಟ್ ಮ್ಯಾಚ್ ನಲ್ಲಿ 5 ವಿಕೆಟ್ ಕಬಳಿಸಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಮಹಾನ್ ಆಲ್ ರೌಂಡರ್ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನು ಸಮನಾಗಿಸಿದ್ದರು. ಅಶ್ವಿನ್ ಒಟ್ಟು ಆರು ಬಾರಿ ಒಂದೇ ಟೆಸ್ಟ್ ಮ್ಯಾಚ್ ನಲ್ಲಿ 5 ವಿಕೆಟ್ ಕಬಳಿಸಿ 50 ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಂದಾಗಿದ್ದ ಸರ್ ರಿಚರ್ಡ್ ಹ್ಯಾಡ್ಲಿ ಕೂಡ ತಮ್ಮ ವೃತ್ತಿಜೀವನದಲ್ಲಿ ಆರು ಬಾರಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ- ಈ ತಂತ್ರದಿಂದಲೇ ಕೊಹ್ಲಿಯನ್ನು ಔಟ್ ಮಾಡುವುದಾಗಿ ಹೇಳಿದ ಇಂಗ್ಲೆಂಡ್ ತಂಡ...!
ಈ ಪಟ್ಟಿಯಲ್ಲಿ ಇಂಗ್ಲೆಂಡ್ ನ ಮಾಜಿ ನಾಯಕ ಇಯಾನ್ ಬಾಥಮ್ ಮುಂಚೂಣಿಯಲ್ಲಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಒಟ್ಟು 11 ಬಾರಿ ಈ ಸಾಧನೆಯನ್ನು ಮಾಡಿದ್ದಾರೆ. ಸದ್ಯದ ಕ್ರಿಕೆಟ್ ಆಡುತ್ತಿರುವವರಲ್ಲಿ ಬಾಂಗ್ಲಾದೇಶದ ಕ್ರಿಕೆಟ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಇದುವರೆಗೆ 9 ಬಾರಿ ಈ ಸಾಧನೆ ಮಾಡಿದ್ದಾರೆ. ಇದಾದ ಬಳಿಕ ಹೆಡ್ಲಿ ಹಾಗೂ ಅಶ್ವಿನ್ ಹೆಸರಿದೆ. ಈ ಪಟ್ಟಿಯ ಐದನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಮಹಾನ್ ವೇಗಿ ಮಾಲ್ಕಂ ಮಾರ್ಷಲ್ ಹೆಸರಿದೆ. ಮಾರ್ಷಲ್ ಒಟ್ಟುಐದು ಬಾರಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ- Ind vs Eng: ಚೆನ್ನೈನಲ್ಲಿ ಇತಿಹಾಸ ರಚಿಸಲಿದೆಯೇ Team India
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.