ವೈನಾಡು: ಇಡೀ ವಿಶ್ವ ಭಾರತೀಯ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನೋಡುತ್ತಿದೆ ಆದರೆ, ಕೇಂದ್ರ ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇರಳದ ವೈನಾಡು ಪ್ರದೇಶ ಮುತ್ತಿಲ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ(Rahul Gandhi), ರೈತರ ಪರಿಸ್ಥಿತಿ ಬಗ್ಗೆ ಪಾಪ್ ಸ್ಟಾರ್ ಗಳು ಟೀಕೆ ಮಾಡುತ್ತಿದ್ದಾರೆ. ಆದರೆ, ಭಾರತ ಸರ್ಕಾರ ಮಾತ್ರ ಆಸಕ್ತಿ ತೋರುತ್ತಿಲ್ಲ ಎಂದರು.
Latest Onion Rate - ಅಡುಗೆ ಮನೆಗೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಈರುಳ್ಳಿ ಬೆಲೆ ಎಷ್ಟು ಗೊತ್ತಾ?
ವಿವಾದಾತ್ಮಕ ಕೃಷಿ ಕಾನೂನು(Farm Laws)ಗಳನ್ನು ಹಿಂತೆಗೆದುಕೊಳ್ಳದಿರಲು ಪ್ರಬಲವಾದ ಕಾರಣವಿದೆ. ಅದೇ ಕಾರಣದಿಂದ ಮೂರು ಕಾನೂನುಗಳಿಂದ ದೇಶದ ಕೃಷಿ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಅಲ್ಲದೇ, ವ್ಯವಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಎರಡ್ಮೂರು ಗೆಳೆಯರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸರ್ಕಾರಿ ನೌಕರಿ ಹುಡುಕುತಿದ್ದೀರಾ..? ಇಲ್ಲಿದೆ ನಿಮಗೊಂದು ಛಾನ್ಸ್..!
ದೇಶದ ಬಹುತೇಕ ಜನರು ಕೃಷಿ ಮೇಲೆಯೆ ಅವಲಂಬನೆಯಾಗಿದ್ದಾರೆ. ಕೆಲ ಇನ್ನಿತರ ಕೆಲ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಕೇವಲ ಎರಡ್ಮೂರು ಜನರಿಗೆ ಅನುಕೂಲ ಮಾಡಿಕೊಡಲು ಮತ್ತು ದೇಶದ ಕೃಷಿ ಕ್ಷೇತ್ರವನ್ನು ನಿಯಂತ್ರಣ ಮಾಡಲು ಈ ಕಾನೂನು(Laws)ಗಳನ್ನು ಮಾಡಲಾಗಿದೆ ಎಂದು ಅವರು ಟೀಕಿಸಿದರು.
Air travel new guidelines: ವಾಯುಯಾನ ನಿಯಮಗಳಲ್ಲಿ ಭಾರೀ ಬದಲಾವಣೆ
ಸರ್ಕಾರದಲ್ಲಿನ ಇಬ್ಬರು ವ್ಯಕ್ತಿಗಳು, ಹೊರಗಿನ ಇಬ್ಬರು ವ್ಯಕ್ತಿಗಳೊಂದಿಗೆ ಪಾಲುದಾರರಾಗಿರುವುದಾಗಿ ಸಂಸತ್ ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾಗಿ ರಾಹುಲ್ ಗಾಂಧಿ ತಿಳಿಸಿದರು.
Puducherry Political Crisis: ಕಾಂಗ್ರೆಸ್ ನ ದಕ್ಷಿಣದ ಕಟ್ಟಕಡೆಯ ಕೋಟೆಯೂ ಪತನ..! ಸಿಎಂ ನಾರಾಯಣ ಸ್ವಾಮಿ ರಾಜೀನಾಮೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.