ಇಲ್ಲಿನ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ..!

ದೇಶಾದ್ಯಂತ ಶಿವನ ಇಂತಹ ಅನೇಕ ದೇವಾಲಯಗಳಿವೆ. ಈ ದೇವಾಲಯಗಳೊಂದಿಗೆ ಪುರಾಣದ ಕತೆಯೂ ಬೆಸೆದುಕೊಂಡಿದೆ.  ಅಂತಹ ಒಂದು ದೇವಾಲಯ ರಾಜಸ್ಥಾನದ ಮೌಂಟ್ ಅಬುವಿನಲ್ಲಿದೆ. ಅಲ್ಲಿ ಶಿವನ ಹೆಬ್ಬೆರಳಿಗೆ ಪೂಜೆ ಮಾಡಲಾಗುತ್ತದೆ.

Written by - Ranjitha R K | Last Updated : Feb 23, 2021, 04:53 PM IST
  • ಮೌಂಟ್ ಅಬುವಿನಲ್ಲಿದೆ ಶಿವನ 108 ದೇವಾಲಯಗಳು
  • ಅಚಲೇಶ್ವರ ಮಹಾದೇವ ದೇವಾಲಯದಲ್ಲಿ ಶಿವನ ಕಾಲಹೆಬ್ಬೆರಳಿಗೆ ಪೂಜೆ
  • ಇಲ್ಲಿನ ಶಿವಲಿಂಗ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ
ಇಲ್ಲಿನ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ..!  title=
ಅಚಲೇಶ್ವರ ಮಹಾದೇವ ದೇವಾಲಯದಲ್ಲಿ ಶಿವನ ಕಾಲಹೆಬ್ಬೆರಳಿಗೆ ಪೂಜೆ (file photo)

ನವದೆಹಲಿ :  ರಾಜಸ್ಥಾನದ ಏಕೈಕ ಗಿರಿಧಾಮವಾದ ಮೌಂಟ್ ಅಬುವಿನಲ್ಲಿ ಶಿವನ ಒಟ್ಟು 108 ದೇವಾಲಯಗಳಿವೆ (Shiva Temple). ಪುರಾಣಗಳಲ್ಲಿ, ಮೌಂಟ್ ಅಬುವನ್ನು ಅರ್ಧ ಕಾಶಿ ಎಂದೂ ಕರೆಯುತ್ತಾರೆ. ಸ್ಕಂದ ಪುರಾಣದ ಪ್ರಕಾರ, ಕಾಶಿ ಅಥವಾ ವಾರಣಾಸಿಯನ್ನ (Varanasi) ಶಿವ ನಗರ ಎಂದು ಕರೆಯಲಾಗುತ್ತದೆ. ಮೌಂಟ್ ಅಬು ಭೋಲೇಶಂಕರನ ಉಪನಗರ ಎಂದೇ ಪ್ರಸಿದ್ದಿ.  ಮೌಂಟ್ ಅಬುವಿನಲ್ಲಿರುವ ಶಿವ ದೇವಾಲಯಗಳಲ್ಲಿ ಒಂದಾದ ಅಚಲೇಶ್ವರ ಮಹಾದೇವ ದೇವಾಲಯವು (Achaleshwara Mahadev Temple) ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ.

ಇಲ್ಲಿ ಈಶ್ವರನ ಹೆಬ್ಬೆರಳನ್ನು ಪೂಜಿಸಲಾಗುತ್ತದೆ :
ಅಚಲೇಶ್ವರ ಮಹಾದೇವ ದೇವಾಲಯವು (Achaleshwara Mahadev Temple) ಅಚಲ್ ಘಡ್ ಕೋಟೆಯ ಬಳಿ ಅಚಲ್ಘಡ್  ಬೆಟ್ಟಗಳ ಮೇಲಿದೆ.  ಮೌಂಟ್ ಅಬುವಿನಿಂದ ಸುಮಾರು  11 ಕಿ.ಮೀ ದೂರದಲ್ಲಿದೆ ಈ ದೇವಾಲಯ. ಈ ದೇವಾಲಯದಲ್ಲಿ ಶಿವಲಿಂಗವನ್ನು (Shivalinga) ಪೂಜಿಸಲಾಗುತ್ತದೆ. ಅಲ್ಲದೆ ಇಲ್ಲಿ ಶಿವನ ಕಾಲಿನ ಹೆಬ್ಬೆರಳಿಗೆ ಪೂಜೆ ಸಲ್ಲಿಸಲಾಗುತ್ತದೆ.  ಇಲ್ಲಿ ಪೂಜಿಸಲ್ಪಡುವ ಹೆಬ್ಬೆರಳು ಸಾಕ್ಷಾತ್ ಈಶ್ವರನ ಹೆಬ್ಬೆರಳು ಎಂಬ ನಂಬಿಕೆಯಿದೆ. ಇಡೀ ಅಬು ಪರ್ವತವೇ ಶಿವನ ಹೆಬ್ಬೆರಳಿನಿಂದಾಗಿಯೇ ಸ್ಥಿರವಾಗಿ ನಿಂತಿದೆ ಎನ್ನಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪುರಾಣ ಕತೆಯೂ ಇದೆ. 

ಇದನ್ನೂ ಓದಿ : Vastu Tips: ಮಲಗುವಾಗ ಈ ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗಿಡಿ, ಅದೃಷ್ಟ ಬದಲಾಗುತ್ತೆ

ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ : 
ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ, ಈ ದೇವಾಲಯದಲ್ಲಿ ಸ್ಥಾಪಿಸಲಾದ ಶಿವಲಿಂಗ ದಿನಕ್ಕೆ 3 ಬಾರಿ ಅದರ ಬಣ್ಣವನ್ನು ಬದಲಾಯಿಸುತ್ತದೆ.  ಶಿವಲಿಂಗ ನೋಡಲು ಸಾಮಾನ್ಯ ಶಿವಲಿಂಗದಂತೆಯೇ ಕಾಣುತ್ತದೆ. ಆದರೆ, ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬೇರೆ ಬೇರೆ ಬಣ್ಣಗಳಿಗೆ ಮಾರ್ಪಾಡಾಗುವುದನ್ನು (Colour change) ನೋಡಿ ಭಕ್ತರು ಬೆರಗಾಗುತ್ತಾರೆ.  ಇಲ್ಲಿಯ ಶಿವಲಿಂಗ ಬೆಳಿಗ್ಗಿನ ಹೊತ್ತು ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತಿರುತ್ತದೆ. ಮಧ್ಯಾಹ್ನದ ವೇಳೆಗೆ ಬಿಳಿ ಬಣ್ಣ ಕೇಸರಿ ಬಣ್ಣಕ್ಕೆ ತಿರುಗುತ್ತದೆ. ಇನ್ನು ರಾತ್ರಿ ಕಪ್ಪು ಬಣ್ಣಕ್ಕೆ ಮಾರ್ಪಾಡಾಗುತ್ತದೆ.  ಇನ್ನು ಈ ದೇವಾಲಯದಲ್ಲಿ ಪಂಚಧಾತುವಿನಿಂದ ಮಾಡಿದ ನಂದಿ ಪ್ರತಿಮೆಯೂ ಇದೆ.

ಪುರಾಣ ಏನು ಹೇಳುತ್ತೆ: 
ದೇವಾಲಯದ ಹಿಂದೆ ಪುರಾಣದ ಕತೆಯಿದೆ. ಒಮ್ಮೆ ಅರ್ಬುದ್ ಪರ್ವತದ ಮೇಲಿರುವ ನಂದೀವರ್ಧನ್ ಇದ್ದಕ್ಕಿದ್ದಂತೆ ನಡುಗಲು ಪ್ರಾರಂಭಿಸಿತ್ತಂತೆ. ಈ ಪರ್ವತ ನಡುಗುವ ರೀತಿಗೆ ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದ ಭಗವಾನ್ ಶಂಕರ್ (Lord Shiv) ತಪ್ಪಸ್ಸೂ ಭಂಗವಾಗಿತ್ತಂತೆ.  ಇದೇ ಪರ್ವತದಲ್ಲಿ ಶಿವನ ನೆಚ್ಚಿನ ಗಣ ನಂದಿಯೂ ಇತ್ತು. ಇಡೀ ಪರ್ವತವು ಇದ್ದಕ್ಕಿದ್ದಂತೆ ಅಲುಗಾಡಲು ಆರಂಭಿಸಿದಾಗ ನಂದಿಯನ್ನು ಕಾಪಾಡಬೇಕಿತ್ತು. ಇದಕ್ಕಾಗಿ ಶಿವ ತನ್ನ ಕಾಲಿನ ಹೆಬ್ಬೆರಳನ್ನು (Toe) ಚಾಚುತ್ತಾನಂತೆ. ಶಿವನ ಬೆರಳಿನ ಆಧಾರದಿಂದ ಪರವತ ಕುಸಿಯದೇ ಸ್ಥಿರವಾಗಿ ನಿಲ್ಲುತ್ತದೆ. ಇಂದು ಈ ದೇವಾಲಯದಲ್ಲಿ (Temple) ಕಾಣುವ ಹೆಬ್ಬೆರಳು ಶಿವ ಅಂದು ಚಾಚಿರುವ ಬೆರಳೇ ಆಗಿದೆ ಎನ್ನುವುದು ನಂಬಿಕೆ. 

ಇದನ್ನೂ ಓದಿ Mercury Planet And Skin Problems: ಬುಧ ಅಶುಭನಾದರೆ ತ್ವಚೆಗೆ ಸಂಬಂಧಿಸಿದ ವ್ಯಾಧಿಗಳು ಬರುತ್ತವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News