ಬೇಸಿಗೆ ಬಂದಾಯ್ತು. ಬೇಸಿಗೆ ಕಾಲದಲ್ಲಿ ಕೆಲ ಹಾರಗಳನ್ನು ಸೇವಿಸುವುದರಿಂದ ರೋಗ್ಯವನ್ನು ಕಾಪಾಡಿಕೊಳ್ಳಬಹುದು,. ಆ ಆಹಾರಗಳು ಯಾವುವು ಎಂಬ ಮಾಹಿತಿ ಇಲ್ಲಿದೆ..
ಬೆಂಗಳೂರು : ಇನ್ನೇನು ಬೇಸಿಗೆ ಶುರುವಾಯ್ತು. ಈಗ ನಿಮ್ಮ ಡಯಟ್ ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅಜಾಗರೂಕತೆಯಿಂದ ವರ್ತಿಸಿದರೆ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ ಅನೇಕರಿಗೆ ಡಿಹೈಡ್ರೇಶನ್ ಸಮಸ್ಯೆ ಕಾಡುತ್ತದೆ. ವಿಟಮಿನ್, ಮಿನರಲ್ಸ್ ಕೊರತೆಯೂ ದೇಹದಲ್ಲಿ ಕಂಡು ಬರುತ್ತದೆ. ಹಾಗಿದ್ದರೆ ಬೇಸಿಗೆಯಲ್ಲಿ ಯಾವ ಆಹಾರಗಳನ್ನು ಸೇವಿಸಬೆಕು ನೋಡೋಣ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಟೊಮ್ಯಾಟೋ ನಲ್ಲಿ ಆಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಕ್ಯಾನ್ಸರ್ ನಂತಹ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಲು ಇದು ಸಹಕಾರಿಯಾಗಿದೆ.
ಬೇಸಿಗೆಯಲ್ಲಿ ಹಿರೇಕಾಯಿ ಸೇವನೆ ಬಹಳ ಮುಖ್ಯವಾಗಿದೆ. ಹಿರೇಕಾಯಿ ಹೆಚ್ಚಿನ ಪ್ರಮಾಣದ ಫೈಬರ್ ಒಳಗೊಂಡಿದೆ. ಇದು ಹೃದ್ರೋಗ ತಡೆಯುವಲ್ಲಿಯೂ ಸಹಕಾರಿಯಾಗಿದೆ. ಕೊಲೆಸ್ಟ್ರಾಲನ್ನು ಕೂಡಾ ಇದು ಕಡಿಮೆ ಮಾಡುತ್ತದೆ
ಪ್ರೋಟೀನ್ ಹೇರಳವಾಗಿರುವ ಮೊಸರು ಬೇಸಿಗೆಯಲ್ಲಿ ದೇಹ ತಂಪಾಗಿಡಲು ಸಹಕರಿಸುತ್ತದೆ. ಮೊಸರಿನಲ್ಲಿರುವ ಪ್ರೊಬಯೋಟಿಕ್ ಅಂಶ ಜೀರ್ಣಕ್ರಿಯೆಯನ್ನು ಸಹಾ ಉತ್ತಮಗೊಳಿಸುತ್ತದೆ.
ಕಲ್ಲಂಗಡಿ ಹಣ್ಣು ಬೇಸಿಗೆ ಬೇಗೆಯಲ್ಲಿ ನಮ್ಮ ದೇಹ ತಂಪಾಗಿಡಲು ಸಹಕಾರಿಯಾಗಿರುತ್ತದೆ. ಅಲ್ಲದೆ ಡಿಹೈಡ್ರೆಶನ್ ದೂರ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುತ್ತದೆ. ಹೀಗಾಗಿ, ಇದನ್ನು ತಿಂದ ನಂತರ ಸುಮಾರು ಹೊತ್ತಿನವರೆಗೆ ಹಸಿವಾಗುವುದಿಲ್ಲ. ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಫಿನ್ ಬಿಸಿಲಿನ ಕಾರಣ ಚರ್ಮದ ಮೇಲಾಗುವ ಕೆಟ್ಟ ಪರಿಣಾಮಗಳನ್ನು ತಡೆಯುತ್ತದೆ.
ಬೇಸಿಗೆಯಲ್ಲಿ ಹಸಿರು ತರಕಾರಿಗಳಿರುವ ಸಲಾಡ್ ಸೇವನೆ ಬಹಳ ಮುಖ್ಯವಾಗಿದೆ. ಹಸಿರು ತರಕಾರಿಗಳಲ್ಲಿ ವಿಟಮಿನ್ ಎ ಇರುತ್ತದೆ. ಇದು ಬಿಸಿಲಿನ ಕಾರಣದಿಂದ ಚರ್ಮಕ್ಕಾಗುವ ಸಮಸ್ಯೆಗಳಿಂದ ಕಾಪಾಡುತ್ತದೆ.