SBI Multi-Option Deposit Scheme - ಬ್ಯಾಂಕ್ FD ಯೋಜನೆಯ ಅತಿ ದೊಡ್ಡ ಸಮಸ್ಯೆ ಎಂದರೆ, ಒಂದು ವೇಳೆ ನಿಮಗೆ ಸಣ್ಣ ಪ್ರಮಾಣದ ಹಣದ ಅವಶ್ಯಕತೆ ಇದ್ದರೂ ಕೂಡ ನೀವು ಸಂಪೂರ್ಣ FD ಮುರಿಯಬೇಕಾಗುತ್ತದೆ. ಇದಲ್ಲದೆ ನಿಮಗೆ ಸಿಗುವ ಬಡ್ಡಿದರದಲ್ಲಿಯೂ ಕೂಡ ಇಳಿಕೆಯಾಗುತ್ತದೆ ಹಾಗೂ ನೀವು ಪೆನಾಲ್ಟಿ ಕೂಡ ಪಾವತಿಸಬೇಕು. ಈ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡಲು SBI ವಿಶೇಷ SB ಯೋಜನೆ ಜಾರಿಗೆ ತಂದಿದೆ.
ನವದೆಹಲಿ: SBI Multi-Option Deposit Scheme - ಎಲ್ಲಾ ರೀತಿಯ ಉಳಿತಾಯ ಯೋಜನೆಗಳಲ್ಲಿ, ಸ್ಥಿರ ಠೇವಣಿಗಳು ಜನರ ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆಯಾಗಿವೆ. ಎಲ್ಲಾ ವಯಸ್ಸಿನ ಜನರು ಈ ಉಳಿತಾಯ ವಿಧಾನವನ್ನು ಇಷ್ಟಪಡುತ್ತಾರೆ. ಇದಕ್ಕೆ ದೊಡ್ಡ ಕಾರಣವೆಂದರೆ ಇದು ಇತರ ಯೋಜನೆಗಳಿಗಿಂತ ಸುರಕ್ಷಿತ ಮತ್ತು ಕಡಿಮೆ ಅಪಾಯಕಾರಿಯಾಗಿದೆ. ಒಬ್ಬರು ಅಲ್ಪಾವಧಿಗೆ ದೀರ್ಘಾವಧಿಯವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ FD ಯೋಜನೆಯ ಅತಿ ದೊಡ್ಡ ಸಮಸ್ಯೆ ಎಂದರೆ, ಒಂದು ವೇಳೆ ನಿಮಗೆ ಸಣ್ಣ ಪ್ರಮಾಣದ ಹಣದ ಅವಶ್ಯಕತೆ ಇದ್ದರೂ ಕೂಡ ನೀವು ಸಂಪೂರ್ಣ FD ಮುರಿಯಬೇಕಾಗುತ್ತದೆ. ಇದಲ್ಲದೆ ನಿಮಗೆ ಸಿಗುವ ಬಡ್ಡಿದರದಲ್ಲಿಯೂ ಕೂಡ ಇಳಿಕೆಯಾಗುತ್ತದೆ ಹಾಗೂ ನೀವು ಪೆನಾಲ್ಟಿ ಕೂಡ ಪಾವತಿಸಬೇಕು. ಈ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡಲು SBI ವಿಶೇಷ SB ಯೋಜನೆ ಜಾರಿಗೆ ತಂದಿದೆ.
ಇದನ್ನೂ ಓದಿ-ದುಬಾರಿಯಾಯಿತು SBI ಹೋಂ ಲೋನ್, ಆಟೋ ಲೋನ್ ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಏನಿದು Multi-Option Deposit Scheme? - ಭಾರತೀಯ ಸ್ಟೇಟ್ ಬ್ಯಾಂಕ್ ನ Multi-Option Deposit Scheme (MODS) ನಿಂದ ನೀವು FD ಮುರಿಯದೆ ನಿಮಗೆ ಅವಶ್ಯಕತೆ ಇರುವ ಹಣವನ್ನು ನೀವು ವಾಪಸ್ ಪಡೆಯಬಹುದು.
2. ಈ ಸೌಕರ್ಯಗಳು ಸಿಗುತ್ತವೆ - SBI MODS ಯೋಜನೆ ಒಂದು ಟರ್ಮ್ ಡಿಪಾಸಿಟ್ ಮಾದರಿಯ ಯೋಜನೆಯಾಗಿದೆ. ಆದರೆ, ಇದು ಖಾತೆದಾರರ ಉಳಿತಾಯ ಖಾತೆ ಅಥವಾ ಕರೆಂಟ್ ಅಕೌಂಟ್ ನ ಜೊತೆಗೆ ಲಿಂಕ್ ಹೊಂದಿರುತ್ತದೆ. ಇದರ ಲಾಭ ಏನೆಂದರೆ, ನಿಮಗೆ ಅವಶ್ಯಕತೆ ಬಿದ್ದಾಗಲೆಲ್ಲಾ ನೀವು ಇದರಿಂದ ಹಣವನ್ನು ಪಡೆಯಬಹುದು. ಅಂದರೆ ಇದರಲ್ಲಿ ಪ್ರೀಮ್ಯಾಚ್ಯುರ್ಡ್ ವಿಥ್ ಡ್ರಾ ವಲ್ ಸೌಲಭ್ಯವಿರಲಿದೆ. ಆದರೆ, ಇದರಲ್ಲಿನ ಹೂಡಿಕೆಗೆ ನೀವು TDS ಪಾವತಿಸಬೇಕಾಗುತ್ತಿದೆ. ಒಂದು ವೇಳೆ ಈ ಖಾತೆಯಲ್ಲಿ ಹಣ ಹೂಡಿಕೆ ಮಾಡುವವರು ಹಣವನ್ನು ಹಿಂಪಡೆಯಲು ಬಯಸುತ್ತಿದ್ದರೆ, ಹಾಗೂ ಹೂಡಿಕೆದಾರರು ತಮ್ಮ ಲಿಂಕ್ ಮಾಡಲಾಗಿರುವ ಖಾತೆಯಿಂದ ಹಣವನ್ನು ಹಿಂಪಡೆಯಲು ಬಯಸುತ್ತಿದ್ದು, ಅವರ ಲಿಂಕ್ ಖಾತೆಯಲ್ಲಿ ಬೇಕಾಗುವಷ್ಟು ಹಣ ಇಲ್ಲದಿದ್ದರೆ, MODS ನಿಂದ ಅವರು ಹಣವನ್ನು ಹಿಂಪಡೆಯಬಹುದು. 1000 ರೂ. ಅಥವಾ ಅದರ ಮಲ್ಟಿಪಲ್ ರೂಪದಲ್ಲಿ ಹಣವನ್ನು ಹಿಂಪಡೆಯಬಹುದು.
3. ಈ ಸ್ಕೀಮ್ ವೈಶಿಷ್ಟ್ಯತೆ ಏನು? - i)SBIನ ಮಲ್ಟಿ ಆಪ್ಶನ್ ಡಿಪಾಸಿಟ್ ಸ್ಕೀಮ್ ನಲ್ಲಿ ನೀವು ಕನಿಷ್ಠ ಅಂದರೆ, ರೂ.10000 ಹೂಡಿಕೆ ಮಾಡಬೇಕು. ಬಳಿಕ ಇದರಲ್ಲಿ ನೀವು 1000 ರೂ.ಗಳ ಮಲ್ಟಿಪಲ್ ನಲ್ಲಿ ಇನ್ನೂ ಅಧಿಕ ಹೂಡಿಕೆ ಮಾಡಬಹುದು. ಇದರಲ್ಲಿ ನೀವು ಮಾಡುವ ಹೂಡಿಕೆಯೇ ಯಾವುದೇ ರೀತಿಯ ಮಿತಿ ಇಲ್ಲ ii) SBI MOD ಯೋಜನೆಯಲ್ಲಿನ ಹಣವನ್ನು ನೀವು ATM ಮೂಲಕ ಹಿಂಪಡೆಯಬಹುದು. ಎಂಓಡಿಯಿಂದ ಹಣ ಹಿಂಪಡೆದ ಬಳಿಕ, ಉಳಿದ ಹಣಕ್ಕೆ ನಿಮಗೆ FD ಮೇಲೆ ಸಿಗುವ ಬಡ್ಡಿದರವೇ ಸಿಗಲಿದೆ iii)SBIನ ಇತರ FD ಯೋಜನೆಗಳಿಗೆ ಸಿಗುವಷ್ಟು ಬಡ್ಡಿ ದರ MOD ಖಾತೆಗೂ ಸಿಗುತ್ತದೆ ಎಂಬುದು ಇಲ್ಲಿ ಗಮನಾರ್ಹ iv) ಇದರಲ್ಲಿ ಲೋನ್, ನಾಮಿನಿ ಸೌಲಭ್ಯ ಕೂಡ ಇದೆ. ಈ ಖಾತೆಯನ್ನು ನೀವೂ SBIನ ಒಂದು ಬ್ರಾಂಚ್ ನಿಂದ ಇನ್ನೊಂದು ಬ್ರಾಂಚ್ ಗೆ ವರ್ಗಾಯಿಸಬಹುದು v)MOD ಮಾಡಬಯಸುವ ಗ್ರಾಹಕರು ತಮ್ಮ ಲಿಂಕ್ಡ್ ಉಳಿತಾಯ ಖಾತೆಯಲ್ಲಿ ಕನಿಷ್ಠ ತಿಂಗಳ ಬ್ಯಾಲೆನ್ಸ್ ಕಾಯುವುದು ಅನಿವಾರ್ಯ. ಇದರಲ್ಲಿ ನೀವು ಕನಿಷ್ಠ 3000 ರೂ.ಮಿನಿಮಮ್ ಬ್ಯಾಲೆನ್ಸ್ ಹೊಂದಬೇಕು. ಬ್ಯಾಲೆನ್ಸ್ ಕಡಿಮೆಯಾದರೆ, MOD ಮುರಿದು ನಿಮ್ಮ ಉಳಿತಾಯ ಖಾತೆಗೆ ಹಣ ಹಾಕಲಾಗುತ್ತದೆ ಎಂಬುದನ್ನು ನೆನಪಿಡಿ vi)ಈ ಯೋಜನೆಯಡಿ ವೈಯಕ್ತಿಕ, ಜಂಟಿ, ಮೈನರ್, ಫರ್ಮ್, ಕಂಪನಿ, ಲೋಕಲ್ ಬಾಡಿ ಯಾರಾದರು ಕೂಡ ಹೂಡಿಕೆ ಮಾಡಬಹುದು. vii)SBIನ FD ಯೋಜನೆಯತೆ ಇಲ್ಲಿಯೂ ಕೂಡ ನೀವು ಶೇ.2.9 ರಿಂದ ಶೇ.5.9 ರಷ್ಟು ಬಡ್ಡಿ ಸಿಗಲಿದೆ. ಈ ನೂತನ ದರಗಳು ಜನವರಿ 8, 2021ರಿಂದ ಜಾರಿಯಲ್ಲಿವೆ viii)5 ಲಕ್ಷ ರೂ.ಗಳ ವರೆಗಇನ FD ಮೇಲೆ ಒಂದು ವೇಳೆ ನೀವೂ ಅವಧಿಗೂ ಮುನ್ನ FD ಮುರಿದರೆ, ನಿಮಗೆ ಶೇ.0.50 ರಷ್ಟು ಪೆನಾಲ್ಟಿ ಬೀಳುತ್ತದೆ. 5 ಲಕ್ಷ ರೂ.ಗಳಿಂದ 1 ಕೋಟಿ ರೂ. ಹೂಡಿಕೆಯ ಮೇಲೆ ಈ FD ಪೆನಾಲ್ಟಿ ಶೇ.1ರಷ್ಟು ಇರಲಿದೆ. 7 ದಿನಕ್ಕಿಂತ ಕಡಿಮೆ ಅವಧಿಯ ಹೂಡಿಕೆಯ ಮೇಲೆ ಯಾವುದೇ ಬಡ್ಡಿ ಸಿಗುವುದಿಲ್ಲ.