ಅಹಮದಾಬಾದ್ : ಗುಜರಾತಿನ ದೇವಾಲಯವೊಂದು (Gujarat Temple) ಸಣ್ಣ ಬಟ್ಟೆಗಳನ್ನು ಧರಿಸುವ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಯಾರಾದರೂ ಸಣ್ಣ ಬಟ್ಟೆಗಳನ್ನು ಧರಿಸಿ ಬಂದರೆ, ಇಲ್ಲಿ ಪ್ರವೇಶ ಕಲ್ಪಿಸುವುದಿಲ್ಲ.
ತುಂಡು ಬಟ್ಟೆ ಬರ್ಮುಡಾ ಧರಿಸಿದರೆ ಪ್ರವೇಶವಿಲ್ಲ :
ಗುಜರಾತ್‌ನ ಅರಾವಳ್ಳಿ ಜಿಲ್ಲೆಯ ಶಮ್ಲಾಜಿ ಮಂದಿರ (Shamlaji mandir) ಟ್ರಸ್ಟ್ ಸಣ್ಣ ಬಟ್ಟೆ ಧರಿಸಿದ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದೆ. ದೇವಾಲಯದಲ್ಲಿ ಸಣ್ಣ ಬಟ್ಟೆ (Short dress) ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಟ್ರಸ್ಟ್ ಹೇಳಿದೆ. ಇಲ್ಲಿ ಬರ್ಮುಡ ಧರಿಸಿಕೊಂಡು ಬಂದರೂ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಿಲ್ಲ.
ಇದನ್ನೂ ಓದಿ : "ನಮಗೆ ದುರ್ಯೋಧನ, ದುಶ್ಯಾಸನ ಬೇಕಿಲ್ಲ"
ಇದರೊಂದಿಗೆ ಶಮ್ಲಾಜಿ ಮಂದಿರ ಟ್ರಸ್ಟ್ ಕೂಡಾ ದೇವಾಲಯದ ಹೊರಗೆ ಬೋರ್ಡ್ ಹಾಕಿ ಈ ಬಗ್ಗೆ ಮಾಹಿತಿ ನೀಡಿದೆ. ದರ್ಶನಕ್ಕಾಗಿ ಬರುವವರು ಸಣ್ಣ ಬಟ್ಟೆ, ಬರ್ಮುಡಾ ಧರಿಸಿಕೊಂಡು ದೇವಾಲಯಕ್ಕೆ ಪ್ರವೇಶ ಮಾಡುವಂತಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಅಲ್ಲದೆ ಈ ಮಂದಿರದ ಒಳ ಪ್ರವೇಶಿಸ ಬೇಕಾದರೆ ಮಾಸ್ಕ್ (Mask) ಧರಿಸುವುದು ಕೂಡಾ ಅಗತ್ಯವಾಗಿದೆ.
ಶ್ರೀಹರಿಯ ಎಂಟನೇ ಅವತಾರವಾದ ಶ್ಯಾಮಲ ಸ್ವರೂಪದ ಕೃಷ್ಣನನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಈ ಪವಿತ್ರ ದೇವಾಲಯವು (Temple) ಅರವಳ್ಳಿ ಪರ್ವತ ಶ್ರೇಣಿಯ ಬೆಟ್ಟಗಳ ಮೇಲೆ ಮೆಶ್ವೊ ನದಿಯ ಶ್ಯಾಮ್ ಸರೋವರದ ತಟದಲ್ಲಿದೆ.
ಇದನ್ನೂ ಓದಿ : Kerala Assembly Election: ಕೇರಳ LDF ಸರ್ಕಾರದ ವಿರುದ್ಧ ಡಿಸಿಎಂ ವಾಗ್ಧಾಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.