ನವದೆಹಲಿ: ಪುಣೆಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ತಂಡಕ್ಕೆ ಇಂಗ್ಲೆಂಡ್ ಬ್ಯಾಟಿಂಗ್ ಅವಕಾಶ ನೀಡಿತು.
Jonny Bairstow brings up his fifty with a FOUR!
This is his 14th half-century in ODIs.#INDvENG | https://t.co/8Dw1dxYDEK pic.twitter.com/yXSqhW0gxC
— ICC (@ICC) March 23, 2021
ಭಾರತದ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ 98, ಕೊಹ್ಲಿ 56, ಕೆ.ಎಲ್.ರಾಹುಲ್ 62, ಕ್ರುನಾಲ್ ಪಾಂಡ್ಯ 58 ರನ್ ಗಳಿಸಿದರು.ವಿಶೇಷವೆಂದರೆ ಮೊದಲ ಏಕದಿನ ಪಂದ್ಯದಲ್ಲಿ ವೇಗದ ಅರ್ಧಶತಕವನ್ನು ಗಳಿಸಿದ ಸಾಧನೆಯನ್ನು ಅವರು ಈ ಪಂದ್ಯದಲ್ಲಿ ನಿರ್ಮಿಸಿದರು. ಕೇವಲ 26 ಎಸೆತಗಳಲ್ಲಿ ಅವರು ತಮ್ಮ ಅರ್ಧಶತಕವನ್ನು ಸಿಡಿಸಿ ಕೊನೆಗೆ ಅಜೇಯರಾಗಿ ಉಳಿದರು.
ಈಗ ಭಾರತ ತಂಡವು ನೀಡಿದ 318 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಈಗ 14.2 ಓವರ್ ಗಳಲ್ಲಿ 135 ರನ್ ಗಳನ್ನು ಗಳಿಸಿದೆ.ಇಂಗ್ಲೆಂಡ್ ತಂಡದ ಜೇಸನ್ ರಾಯ್ ಅವರು 46, ಹಾಗೂ ಜಾನ್ ಬೇರ್ ಸ್ಟೋ 81 ರನ್ ಗಳಿಸುವ ಮೂಲಕ ಭದ್ರ ಬುನಾದಿ ಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ