ರಾಜ್ ಠಾಕ್ರೆ 'ಮೋದಿ ಮುಕ್ತ ಭಾರತ್' ಕರೆಗೆ ಗುಜರಾತಿ ಅಂಗಡಿಗಳ ಮೇಲೆ ದಾಳಿ

     

Last Updated : Mar 19, 2018, 02:41 PM IST
ರಾಜ್ ಠಾಕ್ರೆ 'ಮೋದಿ ಮುಕ್ತ ಭಾರತ್' ಕರೆಗೆ ಗುಜರಾತಿ ಅಂಗಡಿಗಳ ಮೇಲೆ ದಾಳಿ title=

ಮುಂಬೈ: ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಮರಾಠಿಯ ಹೊಸ ವರ್ಷ ಗುಡಿ ಪಡ್ವಾ ದಿನದಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ ಮುಕ್ತ ಭಾರತಕ್ಕೆ ಕರೆ ನೀಡಿದ್ದರು.

ಈಗ ಈ ಹೇಳಿಕೆ ನೀಡಿದ ಬೆನ್ನಲ್ಲೇ ಮುಂಬೈ-ಅಹಮದಾಬಾದ್ ಹೆದ್ದಾರಿ ಬಳಿ ಇರುವ ಗುಜರಾತಿ ಡಾಭಾಗಳ ಭಾನುವಾರ ರಾತ್ರಿ ದಾಳಿ ಮಾಡಿದ್ದಾರೆ.

ಎಂಎನ್ಎಸ್ ಈ ಹಿಂದೆ 2017ರ ಜುಲೈನಲ್ಲಿ ದಾದರನಲ್ಲಿರುವ ಗುಜರಾತಿ ಜ್ಯುವೇಲರ್ ಶಾಪ್ ಹೋಟೆಲ್ ಗಳ ಮೇಲೆ ಗುಜರಾತಿ ಭಾಷೆಯಲ್ಲಿರುವ ಅಂಗಡಿ ಫಲಕಗಳನ್ನು ಕಿತ್ತೊಗೆಯಲು ಪ್ರತಿಭಟನೆ ಮಾಡಿದ್ದರು.

ಸದ್ಯ ರಾಷ್ಟ್ರವ್ಯಾಪಿ ಪ್ರಾದೇಶಿಕ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದು, ಈ ಹಿನ್ನಲೆಯಲ್ಲಿ ರಾಜ್ ಠಾಕ್ರೆ ಮೋದಿ ಮುಕ್ತ ಭಾರತಕ್ಕೆ ಕರೆ ನೀಡಿರುವುದು ಮುಂದಿನ ರಾಜಕೀಯ ಬೆಳವಣಿಗೆಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ ಎಂದು ಹೇಳಬಹುದು.

Trending News