IPL 2021: ಈ ಬಾರಿ ಲೆಗ್ ಸ್ಪಿನ್ ಜೊತೆಗೆ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ Amit Mishra

ದೆಹಲಿ ಕ್ಯಾಪಿಟಲ್ಸ್‌ನ ಸ್ಟಾರ್ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಈ ಬಾರಿ ಬೌಲಿಂಗ್ ಮಾಡುವುದರ ಜೊತೆಗೆ ಈ ಹೊಸ ಜವಾಬ್ದಾರಿಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.  

Written by - Yashaswini V | Last Updated : Apr 1, 2021, 08:30 AM IST
  • ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ, ಈ ವರ್ಷ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ
  • ದೆಹಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮುಂಬೈನಲ್ಲಿ ತಮ್ಮ ಋತುವನ್ನು ಪ್ರಾರಂಭಿಸಲಿದೆ
  • ದೆಹಲಿ ತಂಡವು ಈಗಾಗಲೇ ಮುಂಬೈ ತಲುಪಿದೆ ಮತ್ತು ತಂಡದ ಅನೇಕ ಆಟಗಾರರು ತಮ್ಮ ಅಭ್ಯಾಸಕ್ಕಾಗಿ ಮಂಗಳವಾರ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಗೆ ಆಗಮಿಸಿದ್ದಾರೆ
IPL 2021: ಈ ಬಾರಿ ಲೆಗ್ ಸ್ಪಿನ್ ಜೊತೆಗೆ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ Amit Mishra title=
Image courtesy: Amit Mishra © Delhi Capitals

ನವದೆಹಲಿ: ಐಪಿಎಲ್‌ನ ಹೊಸ ಋತುಮಾನ ಪ್ರಾರಂಭವಾಗಲು ಸ್ವಲ್ಪ ಸಮಯ ಮಾತ್ರ ಉಳಿದಿದೆ. ಈ ಬಾರಿಯ  ಐಪಿಎಲ್‌ನಲ್ಲಿ ಹಲವು ತಂಡಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. ಅದರಲ್ಲಿಯೂ ಮುಖ್ಯವಾಗಿ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಈ ಬಾರಿ ತಂಡದ ಕ್ಯಾಪ್ಟನ್ ನಿಂದ ಹಿಡಿದು ಹಲವು ವಿಷಯಗಳು ಬದಲಾಗಲಿವೆ. ಮೊದಲಿಗೆ ಶ್ರೇಯಸ್ ಅಯ್ಯರ್ (Shreyas Iyer) ಅನುಪಸ್ಥಿತಿಯಲ್ಲಿ, ಈ ವರ್ಷ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ದೆಹಲಿ ಕ್ಯಾಪಿಟಲ್ಸ್ ತಂಡವನ್ನು  ಮುನ್ನಡೆಸಲಿದ್ದಾರೆ. ಇದಲ್ಲದೆ ಅಮಿತ್ ಮಿಶ್ರಾ ಅವರ ತೀಕ್ಷ್ಣವಾದ ಲೆಗ್ ಸ್ಪಿನ್ ಜೊತೆಗೆ ಉತ್ತಮ ಬ್ಯಾಟ್ಸ್‌ಮನ್ ಆಗುವ ಕಾರ್ಯವನ್ನು ಹೊಂದಿದ್ದಾರೆ. 

ಹೌದು, ದೆಹಲಿ ಕ್ಯಾಪಿಟಲ್ಸ್ (Delhi Capitals) ತಾರೆ ಅಮಿತ್ ಮಿಶ್ರಾ (Amit Mishra)ಗೆ ಅವರ ಕೋಚ್ ತೀಕ್ಷ್ಣವಾದ ಲೆಗ್ ಸ್ಪಿನ್ ಜೊತೆಗೆ ಉತ್ತಮ ಬ್ಯಾಟ್ಸ್‌ಮನ್ ಜವಾಬ್ದಾರಿಯನ್ನು ನೀಡಿದ್ದಾರೆ. 38 ವರ್ಷದ ಮಿಶ್ರಾ ಇದಕ್ಕಾಗಿ ಸಿದ್ಧರಾಗಿದ್ದಾರೆ ಮತ್ತು ಈಗ ಅವರು ಬ್ಯಾಟಿಂಗ್ ಸುಧಾರಿಸಲು ಅಭ್ಯಾಸ ಮಾಡುತ್ತಿದ್ದಾರೆ. ಮಿಶ್ರಾ ಅವರಿಗೆ ಬ್ಯಾಟಿಂಗ್ ಕೊಡುಗೆ ನೀಡಲು ಅವಕಾಶ ಸಿಕ್ಕರೆ ಅವರು ಹಿಂದೆ ಸರಿಯಬಾರದು ಎಂಬಂತಹ ಪರಿಸ್ಥಿತಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ದೆಹಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮುಂಬೈನಲ್ಲಿ ತಮ್ಮ ಋತುವನ್ನು ಪ್ರಾರಂಭಿಸಲಿದೆ. ದೆಹಲಿ ತಂಡವು ಈಗಾಗಲೇ ಮುಂಬೈ ತಲುಪಿದೆ ಮತ್ತು ತಂಡದ ಅನೇಕ ಆಟಗಾರರು ತಮ್ಮ ಅಭ್ಯಾಸಕ್ಕಾಗಿ ಮಂಗಳವಾರ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಗೆ ಆಗಮಿಸಿದ್ದಾರೆ.

ಇದನ್ನೂ ಓದಿ - IPL 2021: ಈ ಆಟಗಾರನ ಹೆಗಲಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿಶ್ರಾ, ಎಲ್ಲಾ ಆಟಗಾರರು ಮೊದಲ ಪಂದ್ಯಕ್ಕಾಗಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಎಲ್ಲರೂ ತಂಡದ ಗೆಲುವಿಗಾಗಿ ಶ್ರಮವಹಿಸುತ್ತಿದ್ದಾರೆ. ಅದರಲ್ಲೂ ಯುವಕರ ಉತ್ಸಾಹ ಕಂಡು ಬಹಳ  ಸಂತೋಷವಾಗಿದೆ.  ವೈಯಕ್ತಿಕವಾಗಿ ಹೇಳುವುದಾದರೆ ನಾನು ನನ್ನ ಬೌಲಿಂಗ್ ಅನ್ನು ತೀಕ್ಷ್ಣಗೊಳಿಸುವುದರ ಜೊತೆಗೆ, ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸುವತ್ತಲೂ ಗಮನ ಹರಿಸಿದ್ದೇನೆ ಎಂದು ಹೇಳಿದರು. 

ಇದನ್ನೂ ಓದಿ - BCCI ನಿಂದ IPL 2021ರ ಅಧಿಕೃತ ವೇಳಾಪಟ್ಟಿ ಘೋಷಣೆ, ಏಪ್ರಿಲ್ 9 ರಂದು ಆರಂಭ, ಮೇ 30ಕ್ಕೆ ಅಹ್ಮದಾಬಾದ್ ನಲ್ಲಿ ಫೈನಲ್

ನಾನು ನನ್ನ ಬ್ಯಾಟಿಂಗ್‌ನಲ್ಲೂ ಕೆಲಸ ಮಾಡುತ್ತಿದ್ದೇನೆ. ನಾನು 25 ರಿಂದ 30 ರನ್ ಆಡಬೇಕಾದಾಗ ಪಂದ್ಯದ ಸಂದರ್ಭಗಳು ಇರಬಹುದು ಎಂದು ತರಬೇತುದಾರರು ನನ್ನನ್ನು ಬ್ಯಾಟಿಂಗ್ ಅಭ್ಯಾಸ ಮಾಡಲು ಸೂಚಿಸಿದ್ದಾರೆ. ಅದರಂತೆಯೇ ನಾನು ಅಭ್ಯಾಸ ಕೈಗೊಂಡಿದ್ದೇನೆ ಎಂದು ಅಮಿತ್ ಮಿಶ್ರಾ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News