Bus strike: ಸಾರಿಗೆ ನೌಕರರ ಮುಷ್ಕರ; ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದ ಸಿಎಂ!

ನಿನ್ನೆಯಿಂದ ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ ಎಂದು ಸಿಎಂ ಬಿಎಸ್ ಯಡಿಯುರಪ್ಪ ತಿಳಿಸಿದ್ದಾರೆ.

Last Updated : Apr 8, 2021, 04:36 PM IST
  • ನಿನ್ನೆಯಿಂದ ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ
  • ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್ ಯಡಿಯುರಪ್ಪ ಸಭೆ
  • ನಾನು ಎರಡು ದಿನಗಳ ಕಾಲ ಬೆಳಗಾವಿಯಲ್ಲಿದ್ದೆ ಮತ್ತು ಕ್ಷೇತ್ರದ ವಾತಾವರಣ ಬಿಜೆಪಿ ಪರವಾಗಿದೆ
Bus strike: ಸಾರಿಗೆ ನೌಕರರ ಮುಷ್ಕರ; ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದ ಸಿಎಂ! title=

ಹುಬ್ಬಳ್ಳಿ: ನಿನ್ನೆಯಿಂದ ರಾಜ್ಯ ರಾಜಧಾನಿಯಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ ಎಂದು ಸಿಎಂ ಬಿಎಸ್ ಯಡಿಯುರಪ್ಪ ತಿಳಿಸಿದ್ದಾರೆ.

ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಸ್ ಬಂದಿರುವವುದರಿಂದ ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿ-ಕ್ಯಾಬ್‌ಗಳು ಹೆಚ್ಚಿನ ದರ ಪಡೆಯುತ್ತಿರುವುದರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯುರಪ್ಪ(BS Yediyurappa), ಖಾಸಗಿ ವಾಹನ ಮಾಲೀಕರಿಗೆ ಸರ್ಕಾರ ನಿಗಧಿ ಪಡಿಸಿದ. ಅದಕ್ಕಿಂತಲೂ ಹೆಚ್ಚಿನ ಅದರ ದರ ಪಡೆದರೆ  ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Bus Strike: 'ಮುಷ್ಕರ ನಿರತ ಸಾರಿಗೆ ನೌಕರರನ್ನ ಮಾತುಕತೆಗೆ ಕರೆಯುವುದಿಲ್ಲ'

ಮುಷ್ಕರದ(Bus Strike) ಹಿನ್ನೆಲೆಯಲ್ಲಿ ಅವಧಿ ಮೀರಿದ ವಿಮೆ ಮತ್ತು ಪರವಾನಿಗೆ ಅವಧಿ ಮುಗಿದಿರುವ ಖಾಸಗಿ ವಾಹನಗಳು ರಾಜ್ಯದಲ್ಲಿ ಓಡಿ ಸುತ್ತಿರುವ ಕುರಿತು ಕೇಳಿದಾಗ ಸಿಎಂ, "ಜನರ ಸುರಕ್ಷತೆಯ ಜವಾಬ್ದಾರಿ ನಮ್ಮ ಮೇಲಿದೆ ಮತ್ತು ಸರ್ಕಾರವನ್ನು ಹೇಗೆ ನಡೆಸುವುದು ಎಂದು ನಮಗೆ ಗೊತ್ತಿದೆ. ಆದ್ದರಿಂದ, ಮಾಧ್ಯಮ ಮಿತ್ರರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ" ಎಂದು ಹೇಳಿದರು. 

ಇದನ್ನೂ ಓದಿ : KSRTC Strike: ಇಂದಿನಿಂದ ಸಾರಿಗೆ ನೌಕರರ ಮುಷ್ಕರ, ಬಸ್ ಸಂಚಾರದಲ್ಲಿ ವ್ಯತ್ಯಯ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ(By Eelection) ಕುರಿತು ಮಾತನಾಡಿದ ಯಡಿಯುರಪ್ಪ, "ನಾನು ಎರಡು ದಿನಗಳ ಕಾಲ ಬೆಳಗಾವಿಯಲ್ಲಿದ್ದೆ ಮತ್ತು ಕ್ಷೇತ್ರದ ವಾತಾವರಣ ಬಿಜೆಪಿ ಪರವಾಗಿದೆ. ಪಕ್ಷದ ಅಭ್ಯರ್ಥಿ ಮಂಗಳ ಅಂಗಡಿ ಅವರು ಸುರೇಶ್ ಅಂಗಡಿಯವರಿಗಿಂತ ಹೆಚ್ಚಿನ ಅಂತರದಲ್ಲಿ ಜಯಶಾಲಿಯಾಗುತ್ತಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ : Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ' 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News