IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ

ಮೂರು ಬಾರಿಯ ಚಾಂಪಿಯನ್ ಸೂಪರ್‌ಕಿಂಗ್ಸ್ , ಐಪಿಎಲ್ 14ರ ಸೀಜನ್ ಅನ್ನು ಕಳಪೆ ಮಟ್ಟದಲ್ಲಿ ಆರಂಭಿಸಿದೆ.  ರಿಷಭ್ ಪಂತ್ (Rishab Pant) ನೇತೃತ್ವದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್  ಏಳು ವಿಕೆಟ್‌ಗಳಿಂದ ಸೋಲು ಕಂಡಿದೆ.  

Written by - Ranjitha R K | Last Updated : Apr 11, 2021, 11:27 AM IST
  • ಮೊದಲ ಪಂದ್ಯದಲ್ಲಿ ಸೋಲಿನ ನಂತರ ಧೋನಿಗೆ ಹೊಸ ಕಂಟಕ
  • ಚೆನ್ನೈ ನಾಯಕ ಧೋನಿಗೆ ದಂಡ ವಿಧಿಸಿದ ಬಿಸಿಸಿಐ
  • 7 ವಿಕೆಟ್‌ಗಳಿಂದ ಚೆನ್ನೈ ತಂಡವನ್ನು ಮಣಿಸಿತದ ದೆಹಲಿ ಕ್ಯಾಪಿಟಲ್ಸ್
IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ title=
ಚೆನ್ನೈ ನಾಯಕ ಧೋನಿಗೆ ದಂಡ ವಿಧಿಸಿದ ಬಿಸಿಸಿಐ (photo twitter)

ಮುಂಬೈ: ಐಪಿಎಲ್ 2021 (IPL 2021) ರ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ನಂತರ  ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಮತ್ತೊಂದು ಸಂಕಟ ಎದುರಾಗಿದೆ. ಹೌದು ಮಹೇಂದ್ರ ಸಿಂಗ್ ಧೋನಿಗೆ ಬಿಸಿಸಿಐ (BCCI) ದಂಡ ವಿಧಿಸಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಸ್ಲೋ ಓವರ್ ರೇಟ್ ಗಾಗಿ (Slow over rate) ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ 12 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. 

ಮೂರು ಬಾರಿಯ ಚಾಂಪಿಯನ್ ಸೂಪರ್‌ಕಿಂಗ್ಸ್ , ಐಪಿಎಲ್ (IPL-2021)14ರ ಸೀಜನ್ ಅನ್ನು ಕಳಪೆ ಮಟ್ಟದಲ್ಲಿ ಆರಂಭಿಸಿದೆ.  ರಿಷಭ್ ಪಂತ್ (Rishab Pant) ನೇತೃತ್ವದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್  (Chennai Super Kings) ಏಳು ವಿಕೆಟ್‌ಗಳಿಂದ ಸೋಲು ಕಂಡಿದೆ. ಏಪ್ರಿಲ್ 10 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ  ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ (Delhi Capitals) ಸೂಪರ್ ಕಿಂಗ್ಸ್ ವಿರುದ್ಧ ಜಯ ಗಳಿಸಿದೆ. ಈ ಪಂದ್ಯದಲ್ಲಿ ಸ್ಲೋ ಓವರ್ ರೇಟ್  ಬೌಲಿಂಗ್ ಗಾಗಿ  ಚೆನ್ನೈ  ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ದಂಡ ವಿಧಿಸಲಾಗಿದೆ. ಈ ಬಗ್ಗೆ  ಐಪಿಎಲ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

ಇದನ್ನೂ ಓದಿ : ಯಂಗ್ ಟರ್ಕ್ಸ್ ದೆಹಲಿ ಕ್ಯಾಪಿಟಲ್ಸ್ ಆರ್ಭಟಕ್ಕೆ ಮಂಕಾದ ಚೆನ್ನೈ ಸೂಪರ್ ಕಿಂಗ್ಸ್

ಮೊದಲ ಪಂದ್ಯದಲ್ಲೇ  ಸೋಲು : 
ಹೇಳಿಕೆಯ ಪ್ರಕಾರ, 'ಇದು ಐಪಿಎಲ್ (IPL)ನೀತಿ ಸಂಹಿತೆಯಡಿ ಓವರ್ ಸ್ಪೀಡ್ ಗೆ ಸಂಬಂಧಿಸಿದಂತೆ, ಈ ಸೀಸನ್‌ನ ಮೊದಲ ಅಪರಾಧವಾಗಿದೆ. ಹಾಗಾಗಿ, ತಂಡದ ಕ್ಯಾಪ್ಟನ್ ಧೋನಿಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ  ಚೆನ್ನೈ ಸೂಪರ್ ಕಿಂಗ್ಸ್ ದೆಹಲಿಗೆ 189 ರನ್ ಗಳ ಟಾರ್ಗೆಟ್ ನೀಡಿತ್ತು.  ಇದಕ್ಕೆ ಪ್ರತಿಯಾಗಿ ದೆಹಲಿ (Delhi)ಮೂರು ವಿಕೆಟ್ ಕಳೆದುಕೊಂಡು ಇನ್ನೂ ಎಂಟು ಎಸೆತಗಳು ಬಾಕಿಯಿರುವಾಗಲೇ ಜಯ ಸಾಧಿಸಿತ್ತು.  

ಇದನ್ನೂ ಓದಿ : IPL 2021: ಧೋನಿ ಸಿಎಸ್ಕೆ ಟೀಮ್ ಗೆ ದೆಹಲಿ ಕ್ಯಾಪಿಟಲ್ಸ್ ನ ಯಂಗ್ ಟರ್ಕ್ ಸವಾಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News