ನವದೆಹಲಿ: Lord Hanuman Birth Place: ಶ್ರೀ ಆಂಜನೇಯ ಸ್ವಾಮಿಯ ಜನ್ಮಸ್ಥಾನದ ಕುರಿತು ಕರ್ನಾಟಕ (Karnataka) ಹಾಗೂ ಆಂಧ್ರಪ್ರದೇಶಗಳ (Andhra Pradesh)ನಡುವೆ ವಾದ ಸೃಷ್ಟಿಯಾಗಿದೆ. ಎರಡೂ ರಾಜ್ಯಗಳು ಆಂಜನೇಯನ ಜನ್ಮಸ್ಥಾನದ ಕುರಿತು ಹಕ್ಕು ಸಾಧಿಸುತ್ತಿವೆ. ಶಿವಮೊಗ್ಗ ಬಳಿ ಇರುವ ರಾಮಚಂದ್ರಾಪುರ ಮಠದ ಶ್ರಿಗಳಾಗಿರುವ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಆಂಜನೇಯನ ಜನ್ಮಸ್ಥಾನ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಎಂದು ವಾದಿಸಿದ್ದಾರೆ. ಇದಕ್ಕೂ ಮೊದಲು ಕೊಪ್ಪಳ (Koppla District) ಜಿಲ್ಲೆಯ ಕಿಷ್ಕಿಂದೆಯ (Kishkinda) ಬಳಿ ಇರುವ ಅಂಜನಾದ್ರಿ ಬೆಟ್ಟವೇ (Anjanadri Hill) ಹನುಮನ ಜನ್ಮಸ್ಥಾನ ಎಂದು ಕರ್ನಾಟಕ ಹೇಳಿಕೊಂಡಿತ್ತು. ಆದರೆ, ತಿರುಮಲ ಬೆಟ್ಟದ ಬೆಟ್ಟಗಳಲ್ಲಿ ಒಂದಾಗಿರುವ ಅಂಜನಾದ್ರಿ ಬೆಟ್ಟವೇ (Tirumala Anjanadri Hill) ಆಂಜನೇಯನ ಜನ್ಮಸ್ಥಾನ ಎಂದು ಆಂಧ್ರಪ್ರದೇಶ ಹೇಳಿದೆ.
ಆಂಗ್ಲಮಾಧ್ಯಮದ ವೃತ್ತ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಕರ್ನಾಟಕದ ಶಿವಮೊಗ್ಗ ಬಳಿ ಇರುವ ರಾಮಚಂದ್ರಾಪುರ ಮಠದ ಮುಖ್ಯಸ್ಥರಾಗಿರುವ ಶ್ರೀ ರಾಘವೆಶ್ವರ ಭಾರತಿ, " ರಾಮಾಯಣದಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಗೋಕರ್ಣ ಹನುಮನ ಜನ್ಮಸ್ಥಾನವಾಗಿದ್ದು, ಕೊಪ್ಪಳದ ಕಿಷ್ಕಿಂದೆಯ ಬಳಿ ಇರುವ ಅಂಜನಾದ್ರಿ ಬೆಟ್ಟ ಹನುಮನ ಕರ್ಮಭೂಮಿಯಾಗಿದೆ ಎನ್ನಲಾಗಿದೆ" ಎಂದು ಹೇಳಿದ್ದಾರೆ.
ಸಮಿತಿ (Fact Finding Committee)ನೀಡಲಿದೆ ವರದಿ
ಈ ಗುಟ್ಟನ್ನು ಬಿಡಿಸಲು ತಿರುಮಲದ ದೇವಸ್ಥಾನ ತಜ್ಞರ ಸತ್ಯ ಶೋಧನಾ ಸಮಿತಿ ರಚಿಸಿತ್ತು. ಈ ಸಮೀತಿ ಏಪ್ರಿಲ್ 21 ರಂದು ತನ್ನ ವರದಿ ಸಲ್ಲಿಸಲಿದೆ. ಈ ಸಮಿತಿಯಲ್ಲಿ ವೈದಿಕ ವಿಷಯಗಳ ತಜ್ಞರು, ಪುರಾತತ್ವ ವಿಭಾಗದ ಅಧಿಕಾರಿಗಳು ಹಾಗೂ ISRO ವಿಜ್ಞಾನಿಯೊಬ್ಬರು ಶಾಮೀಲಾಗಿದ್ದಾರೆ. ಏತನ್ಮಧ್ಯೆ TTD ದೇವಸ್ಥಾನ ಆಡಳಿತ ಏಪ್ರಿಲ್ 13 ರಂದು ಅಂದರೆ ತೆಲಗು ಹೊಸವರ್ಷಾಚರಣೆಯ ಸಂದರ್ಭದಲ್ಲಿ ಈ ಕುರಿತಾದ ಪುಸ್ತಕವೊಂದನ್ನು ಅನಾವರಣಗೊಳಿಸಲು ಯೋಜನೆ ರೂಪ್ಸಿದೆ. ಇದರಿಂದ ತಿರುಮಲದ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾಗಿರುವ ಅಂಜನಾದ್ರಿ ಬೆಟ್ಟದಲ್ಲಿಯೇ ಆಂಜನೇಯನ ಜನ್ಮವಾಗಿದೆ ಎಂದು ಸಾಬೀತಾಗುತ್ತದೆ ಎನ್ನಲಾಗಿದೆ.
ತಿರುಪತಿ ತಿರುಮಲ ದೇವಸ್ಥಾನನ ವಾದ ಏನು?
TTD ಟ್ರಸ್ಟ್ ಮಂಡಳಿಯ ಪ್ರಮುಖ ಕಾರ್ಯಕಾರಿ ಅಧಿಕಾರಿಯಾಗಿರುವ ಎಸ್. ಜವಾಹರ ರೆಡ್ಡಿ ಅವರ ಹೇಳಿಕೆಯ ಪ್ರಕಾರ ಅವರ ಬಳಿ ಪುರಾಣಿಕ ಹಾಗೂ ಪುರಾತತ್ವ ಇಲಾಖೆಯ ದಾಖಲೆಗಳಿವೆ ಎಂದು ಹೇಳಿಕೊಂಡಿದ್ದಾರೆ. ಇವುಗಳ ಆಧಾರದ ಮೇಲೆ ತಿರುಮಲದ ಅಂಜನಾದ್ರಿ ಬೆಟ್ಟವೇ ಆಂಜನೇಯನ (Lord Hanuman) ನಿಜವಾದ ಜನ್ಮಸ್ಥಾನ ಎಂದು ಸಾಬೀತುಪಡಿಸಬಹುದು ಎಂದಿದ್ದಾರೆ.
ಕರ್ನಾಟಕದಲ್ಲಿ ಯೋಜನೆಯೊಂದರ ಮೇಲೆ ಕಾರ್ಯ ಆರಂಭಗೊಂಡಿದೆ.
ಕರ್ನಾಟಕ ಕೊಪ್ಪಳ ಬಳಿ ಇರುವ ಕಿಷ್ಕಿಂದೆಯ ಅಂಜನಾದ್ರಿಯಲ್ಲಿ ಯೋಜನೆಯೊಂದರ ಮೇಲೆ ಕಾರ್ಯಾರಂಭ ಮಾಡಿದೆ. ಶ್ರೀ ರಾಮ ಚಂದ್ರ ಜನಿಸಿದ್ದು ಇಲ್ಲಿಯೇ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಇದರ ಹಿಂದಿನ ಉದ್ದೇಶವಾಗಿದೆ. ರಾಮಾಯಣದಲ್ಲಿ ಹಂಪಿಗೆ ಹೊಂದಿಕೊಂಡಂತೆ ಇರುವ ಕಿಷ್ಕಿಂದೆಯ ಉಲ್ಲೇಖವಿದೆ. ಇಲ್ಲಿಯೇ ಶ್ರೀರಾಮ ಹಾಗೂ ಲಕ್ಷಮಣರು ಮೊಟ್ಟಮೊದಲ ಬಾರಿಗೆ ಭೇಟಿಯಾಗಿದ್ದರು ಎನ್ನಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕೊಪ್ಪಳ ಜಿಲ್ಲಾ ಶಾಸಕ ಬಿ.ಸಿ ಪಾಟೀಲ್ "ನಾವು ಈ ಪ್ರದೇಶವನ್ನು ಶ್ರೀ ಆಂಜನೇಯ ಸ್ವಾಮಿಯ ಜನ್ಮಸ್ಥಾನ ಎಂದು ಘೋಷಿಸಿ ಅದನ್ನು ತೀರ್ಥಕ್ಷೇತ್ರದ ರೂಪದಲ್ಲಿ ಅಭಿವೃದ್ಧಿ ಪಡಿಸುವೆವು" ಎಂದಿದ್ದಾರೆ.
ಆಂಧ್ರಪ್ರದೇಶದಲ್ಲಿಯೇ ವ್ಯಕ್ತವಾದ ವಿರೋಧ
ಆಂಜನೇಯ ಸ್ವಾಮಿಯ ಜನ್ಮಸ್ಥಾನ ತಿರುಮಲದ ಅಂಜನಾದ್ರಿ ಬೆಟ್ಟ ಎಂಬ TTD ವಾದಕ್ಕೆ ಆಂಧ್ರಪ್ರದೇಶದಲ್ಲಿಯೇ ತಜ್ಞರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಹ ಹಸ್ತ ಪ್ರತಿ ಮಿಶನ್ ನ ಮಾಜಿ ನಿರ್ದೇಶಕರಾಗಿರುವ ಪ್ರೊ. ವೆಂಕಟರಮಣ ರೆಡ್ಡಿ, ದೇವತೆಗಳ ಜನ್ಮಸ್ಥಳಗಳ ಕುರಿತಾದ ಇಂತಹ ಸಂಶೋಧನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಿರುಮಲ ದೇವಸ್ಥಾನದ ಮುಖ್ಯ ಅರ್ಚಕರಾಗಿರುವ ಎ.ವಿ ರಮಣ ದೀಕ್ಷಿತರನ್ನು ಪ್ರಶ್ನಿಸಲಾಗಿ, ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಶ್ರೀ ರಾಘವೇಶ್ವರ ಬಾರತಿ ಸ್ವಾಮೀಜಿಗಳ ವಾದ ಏನು?
ಆಂಜನೇಯ ಸ್ವಾಮಿಯ ಜನ್ಮಭೂಮಿ ಗೋಕರ್ಣ ಎನ್ನುವುದಕ್ಕೆ ವಾಲ್ಮೀಕಿ ಅವರು ರಚಿಸಿರುವ ರಾಮಾಯಣವೇ ಸಾಕ್ಷಿಯಾಗಿದೆ ಎಂಬುದು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ವಾದ. ಇದಕ್ಕಾಗಿ ಸುಂದರಕಾಂಡದ ಶ್ಲೋಕವೊಂದನ್ನು ಉಲ್ಲೇಖಿಸಿರುವ ಶ್ರೀಗಳು, ಆಂಜನೇಯ ಸ್ವಾಮಿಯನ್ನು ಮೊಟ್ಟಮೊದಲ ಬಾರಿಗೆ ಸೀತಾಮಾತೆಯನ್ನು ಭೇಟಿಯಾದಾಗ ತನ್ನ ಪರಿಚಯವನ್ನು ಹೇಳಿಕೊಳ್ಳುತ್ತಾರೆ ಎಂದಿದ್ದಾರೆ. ಅವರು ಹೇಳಿಕೊಂಡ ಪರಿಚಯದ ಪ್ರಕಾರ, "ಮೌಲ್ಯವಾನ್ನಾಂ ವೈದೇಹಿ ಗಿರೀಣಾಮುತ್ತಮೋ ಗಿರಿಃ , ತತೋ ಗಚ್ಛತಿ ಗೋಕರ್ಣಂ ಪರ್ವತಂ ಕೇಸರಿ ಹರಿಃ , ಸ ಚ ದೇವರ್ಷಿಭಿರ್ದಿಷ್ಥಃ ಪಿತಾ ಮಾಮ ಮಹಾಕಪಿಹ್, ತೀರ್ಥೆ ನದಿಪತೇಹ್ ಪುಣ್ಯೇ ಶಂಬಸಾಧನಮುದ್ಧರತ್, ತಸ್ಯಾಹಂ ಪರಿಣ ಕ್ಷೇತ್ರೇ ಜಾತೋ ವಾತೇನ್ ಮೈಥಿಲಿ ಹತೇ ಸುರೇ, ಸಂಯತಿ ಶಂಬಸಾದನೇ ಕಪಿಪ್ರವಿರೇಣ ಮಹರ್ಷಿಚೋದನಾತ್ ತತೊಸ್ಮಿವಾಯುಭ್ರವೋಹಿ, ಮೇಥಿಲಿ ಪ್ರಭಾವಸ್ತಪ್ರತಿಮಶ್ಚವಾನರಃ" ಎಂದು ಉಲ್ಲೇಖಿತವಾಗಿದೆ ಎಂದಿದ್ದಾರೆ.
ಇದನ್ನೂ ಓದಿ- ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?
ಅರ್ಥಾತ್ - ಮೌಲ್ಯವಂತ ಶ್ರೇಷ್ಠವಾದ ಪರ್ವತ. ಕಪೀಶ್ವರ ಹೆಸರಿನ ವಾನರ ಅಲ್ಲಿಂದ ಗೋಕರ್ಣದ ಶತಶೃಂಗ ಪರ್ವತಕ್ಕೆ ತೆರಳಿದೆ. ಅಲ್ಲಿ ಪುಣ್ಯಕ್ಷೇತ್ರವಾದ ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದ ಭಾವಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಶಂಬಸಾದನ ಹೆಸರಿನ ರಾಕ್ಷೆಸನನ್ನು ಸಂಹರಿಸುವಂತೆ ನೀಡಲಾಗಿದ್ದ ದೇವರ್ಷಿಗಳ ಆಜ್ಞೆಯನ್ನು ಪಾಲಿಸಿ ರಾಕ್ಷೆಸನನ್ನು ಸಂಹರಿಸಿದೆ ಮತ್ತು ನಂತರ ಅಲ್ಲಿನ ವೀರ ಪರಾಕ್ರಮಿ ಕೇಸರಿ ಪತ್ನಿ ಅಂಜನಾದೇವಿಯಿಂದ ಜನ್ಮ ಪಡೆದೆ. ತನ್ನ ಈ ಪರಾಕ್ರಮದಿಂದ ತಾನು ಲೋಕದಲ್ಲಿ ಹನುಮಾನ್ ಎಂಬ ಹೆಸರಿಂದ ಪ್ರಖ್ಯಾತಿ ಪಡೆದೆ ಎನ್ನುತ್ತಾನೆ.
ಇದನ್ನೂ ಓದಿ- Panchamukhi Hanuman ಹನುಮನ ಪೂಜೆಯಿಂದ ಸಿಗುತ್ತೆ ಅಪಾರ ಲಾಭ
ಕರ್ನಾಟಕದ ಯೋಜನೆಗೆ ಕೇಂದ್ರಸರ್ಕಾರದ ಒಪ್ಪಿಗೆ
TTD ದೇವಸ್ಥಾನದ ಸತ್ಯಸಂಶೋಧನಾ ಸಮಿತಿಯ ವರದಿಗ ಕುರಿತು ಇತಿಹಾಸಕಾರರು ಹಾಗೂ ಪುರಾತತ್ವ ತಜ್ಞರು ವ್ಯಾಪಕ ಆಕ್ರೋಶವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಕೊಪ್ಪಳದಲ್ಲಿರುವ ಶ್ರೀ ಆಂಜನೇಯನ ಜನ್ಮಸ್ಥಾನದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಜಂಟಿಯಾಗಿ ಮಾಸ್ಟರ್ ಪ್ಲಾನ್ ರೂಪಿಸಿವೆ. ಹೀಗಿರುವಾಗ TTD ದೇವಸ್ಥಾನದ ಆಡಳಿತ ಮಂಡಳಿಯ ಕ್ಯಾತೆಗೆ ನಾಡಿನ ಜನತೆಯ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ- ಅಮೇರಿಕಾದಲ್ಲಿ ಸ್ಥಾಪನೆಯಾದ 25 ಅಡಿ ಎತ್ತರದ ಆಂಜನೇಯ ಮೂರ್ತಿ, ತಯಾರಾಗಿದ್ದು ಎಲ್ಲಿ ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.