Mercury Transit 2021 - ಮೇಷ ರಾಶಿಯಲ್ಲಿ ಈಗಾಗಲೇ ಸೂರ್ಯ ಹಾಗೂ ಶುಕ್ರ ಗ್ರಹಗಳ ಪ್ರವೇಶವಾಗಿದೆ. ಇದೀಗ ಗ್ರಹಗಳ ರಾಜ ಕುಮಾರ ಎಂದೇ ಕರೆಯಲಾಗುವ ಬುಧ ಕೂಡ ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ಬುದ್ಧಿಯ ಅಧಿಪತಿ ಎಂದೂ ಹೇಳಲಾಗುವ ಬುಧನ ಈ ರಾಶಿ ಪರಿವರ್ತನೆ ಇತರ ರಾಶಿಗಳ ಪಾಲಿಗೆ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ.
ನವದೆಹಲಿ: Mercury Transit 2021 - ಏಪ್ರಿಲ್ 12 ರಿಂದ ಹಿಡಿದು ಈ ವಾರ ಇದುವರೆಗೆ ಮೂರು ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸಿವೆ. ಏಪ್ರಿಲ್ 14 ರಂದು ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ತನ್ನ ರಾಶಿ ಪರಿವರ್ತಿಸಿ ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಇನ್ನೊಂದೆಡೆ ಗ್ರಹಗಳ ಅಧಿಪತಿ ಎಂದೇ ಕರೆಯಲಾಗುವ ಸೂರ್ಯ ಕೂಡ ಏಪ್ರಿಲ್ 14ರಂದು ರಂದು ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ಹೀಗಿರುವ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ಗ್ರಹ ಕೂಡ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಸೂರ್ಯನ ರೀತಿಯೇ ಬುಧ ಕೂಡ ಮೀನರಾಶಿಯನ್ನು ತೊರೆದು ಮೇಷರಾಶಿಗೆ ಪ್ರವೇಶಿಸಿದ್ದಾನೆ.
ಇದನ್ನೂ ಓದಿ- Sun Transit 2021: ಮೇಷ ರಾಶಿ ಪ್ರವೇಶಿಸಿರುವ ಸೂರ್ಯ; ರಾಶಿಯವರಿಗೆ ಭಾರೀ ಶುಭ ಫಲ
ಮೇಷ ರಾಶಿಯಲ್ಲಿ ಏಕಕಾಲಕ್ಕೆ ಮೂರು ಗ್ರಹಗಳ ಪ್ರವೇಶ
ಮಂಗಳ ಮೇಷ ರಾಶಿಯ ಅಧಿಪತಿ ಹಾಗೂ ಭುಧ ಹಾಗೂ ಸೂರ್ಯ ಎರಡು ಗ್ರಹಗಳು ಕೂಡ ಏಕಲಾಲಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿವೆ. ಶುಕ್ರ ಏಕಕಾಲಕ್ಕೆ ಮೇಷರಾಶಿಯಲ್ಲಿದ್ದಾನೆ. ಹೀಗಾಗಿ ಮೇಷ ರಾಶಿಯಲ್ಲಿ ಒಟ್ಟು ಮೂರು ಗ್ರಹಗಳ ಯೋಗ ನಿರ್ಮಾಣಗೊಳ್ಳುತ್ತಿದೆ. ಸೂರ್ಯ ಹಾಗೂ ಬುಧಗ ಗ್ರಹಗಳು ಒಟ್ಟಿಗೆ ಬರುವುದರಿಂದ ಬುಧ-ಆದಿತ್ಯ ಅಂದರೆ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಮೇಷ ರಾಶಿಯ ಜಾತಕದ ಜನರಿಗೆ ಹಲವು ಕ್ಷೇತ್ರಗಳಲ್ಲಿ ಲಾಭ ಸಿಗಲಿದೆ. ಬುಧನನ್ನು ಬುದ್ಧಿ, ವಾಣಿ, ಲೇಖನ, ಸ್ನೇಹಿತ ಇತ್ಯಾದಿಗಳಿಗೆ ಕಾರಕ ಗ್ರಹನಾಗಿದ್ದಾನೆ. ಬುಧನ ರಾಶಿ ಪರಿವರ್ತನೆ ಕೂಡ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಸೂಚನೆಗಳು ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿವೆ. ಝೀ ಹಿಂದೂಸ್ತಾನ ಕನ್ನಡ ಇದನ್ನು ಪುಷ್ಟೀಕರಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಮೇಷ- ಸೂರ್ಯ ಹಾಗೂ ಶುಕ್ರರು ಈಗಾಗಲೇ ನೆಲೆಸಿರುವ ರಾಶಿಗೆ ಬುಧ ಪ್ರವೇಶಿಸಿದ್ದಾನೆ. ಇದರಿಂದ ನಿಮಗೆ ಒಳ್ಳೆಯ ಪರಿಣಾಮಗಳು ಸಿಗಲಿದ್ದು, ಕೀರ್ತಿ ಹೆಚ್ಚಾಗಲಿದೆ. ವ್ಯವಸಾಯ ಉತ್ತಮ ರೀತಿಯಲ್ಲಿ ಸಾಗಲಿದೆ. ಆರೋಗ್ಯ ಸುಧಾರಣೆಯಾಗಲಿದೆ. ಆದರೆ, ಸ್ಥಿತಿಪ್ರಜ್ಞೆಯಿಂದ ಕಾರ್ಯನಿರ್ವಹಿಸಿ.
2. ವೃಷಭ- ಶುಭ ಪರಿಣಾಮ ಸಿಗಲಿದೆ, ಆದಾಯದ ಮೂಲಗಳು ಹೆಚ್ಚಾಗಲಿವೆ, ಭಾಗ್ಯ ನಿಮಗೆ ಸಾಥ್ ನೀಡಲಿದೆ, ವ್ಯವಸಾಯ ಕೂಡ ಉತ್ತಮ ರೀತಿಯಲ್ಲಿ ಸಾಗಲಿದೆ. ಖರ್ಚಿನ ಮೇಲೆ ಅಂಕುಶವಿರಲಿ, ಆರೋಗ್ಯದ ಕಾಳಜಿವಹಿಸಿ.
3.ಮಿಥುನ-ಬುಧ ಮಿಥುನ ರಾಶಿಗೆ ಅಧಿಪತಿ. ಹೀಗಾಗಿ ಈ ರಾಶಿಯ ಜಾತಕದವರಿಗೂ ಕೂಡ ಬುಧನ ರಾಶಿ ಪರಿವರ್ತನೆಯಿಂದ ಲಾಭ ಸಿಗಲಿದೆ. ಆರೋಗ್ಯ ಸುಧಾರಣೆ, ವ್ಯವಸಾಯ ಹಾಗೂ ಉದ್ಯೋಗದಿಂದ ಲಾಭ ಸಿಗಲಿದೆ. ವಿವಾದಗಳಿಂದ ದೂರವಿರಿ ಇಲ್ಲದೆ ಹೋದಲ್ಲಿ ಆಗುವ ಕೆಲಸಗಳು ಕೂಡ ನಿಂತುಹೋಗಲಿವೆ.
4. ಕರ್ಕ- ಮಿಶ್ರ ಫಲಗಳು ಸಿಗಲಿವೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಶುಭ ಸಮಾಚಾರ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಆದರೆ, ವಾದ-ವಿವಾದ ಗಳಿಂದ ದೂರ ಉಳಿಯಿರಿ.
5. ಸಿಂಹ ರಾಶಿ: ಬುಧನ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯ ಜಾತಕದವರವೈವಾಹಿಕ ಅಡಚಣೆಗಳು ದೂರಾಗಲಿವೆ. ಆರೋಗ್ಯ ಸುಧಾರಿಸಲಿದೆ. ವ್ಯಾಪಾರದ ಜೊತೆಗೆ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಕೌಟುಂಬಿಕ ಸಂತಸ ಸಿಗಲಿದೆ. ಆರೋಗ್ಯದ ಕಾಳಜಿವಹಿಸಿ.
6. ಕನ್ಯಾ- ಮಿಶ್ರ ಫಲ, ಆರೋಗ್ಯದ ದುರ್ಲಕ್ಷ ಬೇಡ. ಮದುವೆ ನಿಶ್ಚಯವಾಗುವ ಯೋಗ. ಉದ್ಯೋಗ-ವ್ಯಾಪಾರದಲ್ಲಿ ಅಡಚಣೆ ಎದುರಾಗಲಿದೆ. ಆತ್ಮವಿಶ್ವಾಸದಿಂದಿರಿ.
7. ತುಲಾ ರಾಶಿ- ಬುಧನ ರಾಶಿ ಪರಿವರ್ತನೆ ತುಲಾ ರಾಶಿಯ ಜಾತಕದವರ ಪಾಲಿಗೆ ಲಾಭ ತರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ಆದಾಯದಲ್ಲಿ ಹೆಚ್ಚಳ. ಹೂಡಿಕೆಯಿಂದ ಲಾಭ ಬರಲಿದೆ.
8. ವೃಶ್ಚಿಕ- ಮಿಶ್ರ ಫಲ. ಆರೋಗ್ಯದ ಕಾಳಜಿವಹಿಸಿ. ಒತ್ತಡದ ಸ್ಥಿತಿ ನಿರ್ಮಾಣಗೊಳ್ಳಲಿದೆ. ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಸಂತಾನ ಪಕ್ಷದಿಂದ ಒಳ್ಳೆಯ ಸಮಾಚಾರ ಸಿಗಲಿದೆ.
9. ಧನು- ಬುಧನ ಮೇಷ ರಾಶಿ ಗೋಚರ ಧನು ರಾಶಿಯ ಜಾತಕದವರ ಪಾಲಿಗೆ ಉತ್ತಮ ಫಲ ನೀಡಲಿದೆ. ವ್ಯಾಪಾರಕ್ಕಾಗಿ ಇದು ಸಕಾಲ. ಆರೋಗ್ಯದಲ್ಲಿ ಸುಧಾರಣೆ. ಬಡ್ತಿ ಸಿಗುವ ಸಾಧ್ಯತೆ. ಜನರ ಸಹಕಾರ ಸಿಗಲಿದೆ.
10. ಮಕರ- ಬುಧನ ರಾಶಿ ಪರಿವರ್ತನೆ ಮಕರ ರಾಶಿಯ ಜಾತಕದವರಿಗೆ ಸಾಮಾನ್ಯ ಪರಿಣಾಮಗಳನ್ನು ತರಲಿದೆ. ಆರೋಗ್ಯ ಸುಧಾರಣೆ, ವ್ಯಾಪಾರದಲ್ಲಿ ಉತ್ತಮ ಸ್ಥಿತಿ. ಒತ್ತಡ ಹಾಗೂ ವಿವಾದಗಳಿಂದ ದೂರವಿರಿ.
11. ಕುಂಭ- ಕುಂಭ ರಾಶಿಯ ಜಾತಕದವರು ತಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು. ಅವಸರಗಳ ಲಾಭ ಸಿಗಲಿದೆ. ಶತ್ರುಗಳ ಆಟ ನಡೆಯಲ್ಲ. ವ್ಯಾಪಾರ ಉತ್ತಮವಾಗಿರಲಿದೆ.
12. ಮೀನ- ಬುಧನ ಮೇಷ ರಾಶಿ ಗೋಚರ ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರಗೊಲಿಸಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಲಾಭದ ಜೊತೆಗೆ ಒಳ್ಳೆಯ ಕಾಲ ಕೂಡಿ ಬರಲಿದೆ. ಜನರ ಸಹಕಾರ ಲಭಿಸಲಿದೆ