Daily Horoscope: ದಿನಭವಿಷ್ಯ 11-04-2021 Today astrology

ಶ್ರೀ ಕೊರಗಜ್ಜನನ್ನು ನೆನೆಯುಯುತ್ತಾ ಇಂದಿನ ನಿಮ್ಮ ಭವಿಷ್ಯ ನೋಡಿ..

Written by - ZH Kannada Desk | Last Updated : Apr 11, 2021, 07:47 AM IST
  • ಮೇಷ ರಾಶಿಯವರು ವಿವಾದ ಮೈಮೇಲೆ ಎಳೆದುಕೊಳ್ಳಲು ಹೋಗಬೇಡಿ
  • ಮಿಥುನ ರಾಶಿಯವರಿಗೆ ಅಣ್ಣತಮ್ಮಂದಿರ ಮಧ್ಯೆ ಹಣಕಾಸಿನ ವಿಷಯಕ್ಕೆ ಭಿನ್ನಾಭಿಪ್ರಾಯ ಮೂಡಿ ಬರಲಿದೆ
  • ತುಲಾ ರಾಶಿಯವರು ಮಾಡುವ ಕೆಲಸಗಳಿಗೆ ಪ್ರಶಂಸೆ ದೊರೆಯಲಿದೆ
Daily Horoscope: ದಿನಭವಿಷ್ಯ 11-04-2021 Today astrology

ಬೆಂಗಳೂರು : ಶ್ರೀ ಕೊರಗಜ್ಜ ಸ್ವಾಮಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ಹೀಗಿರಲಿದೆ..

ಮೇಷ: ಯಾವುದೇ ಕಾರಣಕ್ಕೂ ಹೊಸ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಹೋಗಬೇಡಿ ನಿಮ್ಮ ಈ ದಿನ ಅಷ್ಟೇನೂ ಶುಭವಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ದಿನ ನೀವು ಹನುಮಾನ್ ದಂಡಕ ಪಾರಾಯಣ ಮಾಡಿದರೆ ವಿಶೇಷ ಫಲ ಪಡೆಯುತ್ತೀರಿ. 

ವೃಷಭ: ಈ ದಿನ ಭೂ ಲಾಭ ಆಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಕಿರಿ ಕಿರಿ ಮತ್ತು ಹೆಚ್ಚಿನ ಗೊಂದಲ ಇರುತ್ತದೆ. ಅನಗತ್ಯ ಮಾತುಗಳ ಮೇಲೆ ಹೆಚ್ಚಿನ ಹಿಡಿತವಿರಲಿ. ಯುವಕರ ವಿದ್ಯೆಯಲ್ಲಿ ಹೆಚ್ಚಿನ ಅಭಿವೃದ್ದಿ ಆಗುತ್ತದೆ. ಕುಟುಂಬ ಜನರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ. 

ಮಿಥುನ: ಈ ದಿನ ಅಣ್ಣತಮ್ಮಂದಿರ ಮಧ್ಯೆ ಹಣಕಾಸಿನ ವಿಷಯಕ್ಕೆ ಭಿನ್ನಾಭಿಪ್ರಾಯ ಮೂಡಿ ಬರುವ ಸಾಧ್ಯತೆ ಇದೆ. ಬೆಳ್ಳಗೆ 11 ಗಂಟೆ ನಂತರ ಶುಭ ಸುದ್ದಿ ಬರುವ ಸಾಧ್ಯತೆ ಇದೆ. ಸಂಜೆ ಸಮಯದಲ್ಲಿ ಗೋವಿಗೆ ಬಾಳೆ ಹಣ್ಣು ಮತ್ತು ಕಡಲೆ ತಿನ್ನಿಸಿರಿ ಇದರಿಂದ ನಿಮಗೆ ಶುಭ ಫಲ. 

ಇದನ್ನೂ ಓದಿ : Vastu Tips: ನಿಮ್ಮ ಮನೆಯಲ್ಲೂ ಈ ವಸ್ತು ಇದ್ದರೆ ಆಗಲಿದೆ ಭಾರೀ ಧನ ಪ್ರಾಪ್ತಿ

ಕರ್ಕಾಟಕ: ಈ ದಿನ ನೀವು ಗುರು ಹಿರಿಯರಿಗೆ ಹೆಚ್ಚಿನ ಭಕ್ತಿ ಮತ್ತು ಶ್ರದ್ದೆ ತೋರಿಸುತ್ತೀರಿ. ನಿಮ್ಮ ಸ್ನೇಹಿತರ ವಾಹನ ಪಡೆದುಕೊಂಡಿದ್ದರೆ ನಿಮಗೆ ಅನಗತ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಸಂಜೆ ನಂತರ ಮನಸಲ್ಲಿ ತಳಮಳ ಕ್ರಿಯಾಶೀಲತೆಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಈ ದಿನದ ಹನುಮಾನ್ ದಂಡಕ ಒಳ್ಳೆಯದು. 

ಸಿಂಹ: ಈ ದಿನ ಹಲವು ಜನರ ಮನಸನ್ನು ಗೆಲ್ಲುತ್ತೀರಿ. ದಾಂಪತ್ಯದಲ್ಲಿ ವಿರಸ ಇದ್ದರೆ ಅದು ಮುಂದುವರೆಯಲಿದೆ. ಪ್ರಭಾವಿ ಜನರ ಜೊತೆಗೆ ಒಂದಿಷ್ಟು ಒಡನಾಟ ಇಂದು ಬೇಡವೇ ಬೇಡ. ಅವರಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ಕೆಲಸ ಕಾರ್ಯದಲ್ಲಿ ವೇಗ ಪಡೆಯಲು ಆರೋಗ್ಯ ಸಮಸ್ಯೆ ಕಡಿಮೆ ಆಗಲು ಹನುಮಾನ್ ಚಾಲೀಸ ಪಾರಾಯಣ ಉತ್ತಮ. 

ಕನ್ಯಾ: ಈ ದಿನ ನೀವು ಮಾಡುವ ಒಳ್ಳೆಯ ಕೆಲಸ ಕಾರ್ಯದ ಮೇಲೆ ಕೆಟ್ಟ ಜನರ ಕಣ್ಣು ಬೀಳುವ ಸಾಧ್ಯತೆ ಇದೆ. ಆದರೆ ನೀವು ಯಾರನ್ನು ಹೆಚ್ಹು ನಂಬಲು ಹೋಗಬೇಡಿ. ಈ ದಿನ ಎಲ್ಲ ರೀತಿಯ ಸರ್ಕಾರಿ ಕೆಲಸದಲ್ಲಿ ನಿಮಗೆ ವಿಳಂಭ ಆಗಲಿದೆ. ಈ ದಿನದ ಅದೃಷ್ಟ ಸಂಖ್ಯೆ 8. 

ಇದನ್ನೂ ಓದಿ : Two Days Amavasya This Month: ಈ ತಿಂಗಳು ಎರಡು ದಿನ ಅಮಾವಾಸ್ಯೆ,, ನಿಮ್ಮನ್ನಗಲಿದವರಿಗಾಗಿ ಈ ಕೆಲಸ ಮಾಡಿ

ತುಲಾ: ನೀವು ಮಾಡುವ ಉನ್ನತ ಕೆಲಸ ಕಾರ್ಯಗಳಿಗೆ ಹಿರಿಯ ಜನರಿಂದ ಪ್ರಶಂಶೆ ಸಿಗಲಿದೆ. ಆರ್ಥಿಕ ಬಿಕ್ಕಟ್ಟು ಸರಿ ಆಗಿಲ್ಲ ಅಂದ್ರೆ ಮಹಾ ಲಕ್ಷ್ಮಿ ದೇವಿಯ ಅನುಷ್ಟಾನ ಮಾಡಿರಿ. ಅಣ್ಣ ತಮ್ಮಂದಿರ ಮಧ್ಯೆ ಆಸ್ತಿ ವಿಷಯಕ್ಕೆ ಗಲಾಟೆ ಆಗುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ನಿಮ್ಮ ಸಾಮಾನ್ಯ ನೆಮ್ಮದಿಗೆ ದಕ್ಕೆ ಬರುವ ಎಲ್ಲ ಲಕ್ಷಣ ಇದೆ. 

ವೃಶ್ಚಿಕ: ನಿಮ್ಮ ಈ ದಿನದ ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣುತ್ತೀರಿ. ಆಕಸ್ಮಿಕ ಧನ ಲಾಭ ಕುಟುಂಬ ಜನಕ್ಕೂ ಮತ್ತು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ಆದರೆ ವ್ಯಸನಕ್ಕೆ ಒಳಗಾದ ಒಂದಿಷ್ಟು ಜನಕ್ಕೆ ತೀವ್ರ ರೀತಿಯ ಆರೋಗ್ಯದ ಸಮಸ್ಯೆ ಕಾಡುತ್ತದೆ ಜಾಗ್ರತೆ ಇರಲಿ. 

ಧನಸು: ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೇ ಈಗಾಗಲೇ ಮಾಡಿರುವ ಮತ್ತು ಈಗಾಗಲೇ ಆಗಿರುವ ಪ್ರಸಂಗದ ಬಗ್ಗೆ ಚಿಂತೆ ಬಿಟ್ಟು ಬಿಡಿ. ಶೀತ ಸಂಬಂಧಕ್ಕೆ ಒಂದಿಷ್ಟು ರೋಗ ನಿಮ್ಮನು ಕಾಡುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ವಿರಾಮ ಕೊಟ್ಟು ಸಂಜೆ ಸಮಯ ಹನುಮಂತ ದೇವರ ದರ್ಶನ ಪಡೆಯಿರಿ. 

ಇದನ್ನೂ ಓದಿ : Your Nails Tell Your Fortune: ನಿಮ್ಮ ಬೆರಳಿನ ಉಗುರುಗಳು ಕೂಡ ಹೇಳುತ್ತವೆ ನಿಮ್ಮ ಭವಿಷ್ಯ ಗೊತ್ತಾ?

ಮಕರ: ನಿಮ್ಮ ಬುದ್ದಿ ಸಾಮರ್ಥ್ಯಕ್ಕೆ ತಕ್ಕ ಹಾಗೇ ಕೆಲವೊಂದು ಸೂಕ್ಷ್ಮ ವಿಚಾರಗಳು ತೆಗೆದುಕೊಳ್ಳುವಲ್ಲಿ ವಿಫಲತೆ ಕಾಣಿಸುತ್ತದೆ. ಬೆಲೆ ಬಾಳುವ ವಸ್ತುಗಳ ಕಡೆಗೆ ಮನಸು ಆಕರ್ಷಣೆ ಆಗಲಿದೆ. ಸ್ತ್ರೀ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರುವುದು ತುಂಬಾ ಒಳ್ಳೆಯದು. 

ಕುಂಭ: ಈ ದಿನದ ಎಲ್ಲ ರೀತಿಯ ವ್ಯವಹಾರ ಏರುಪೇರು ಆಗುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರ ಅಷ್ಟೇನೂ ಹೊಂದಾಣಿಕೆ ಇರೋದಿಲ್ಲ. ದಿನವನ್ನು ಶಾಂತಿ ಮತ್ತು ನೆಮ್ಮದಿಯಿಂದ ಕೆಳೆಯಲು ಬಯಸುತ್ತೀರಿ ಆದರು ನಿಮಗೆ ಶತ್ರುಗಳು ಒಂದಿಷ್ಟು ಕಿರಿ ಕಿರಿ ಮಾಡುತ್ತಾರೆ. ಈ ದಿನ ನೀವು ಸಂಜೆ 6 ಗಂಟೆ ಒಳಗೆ ಗಣಪತಿಗೆ ಗರಿಕೆ ಹುಲ್ಲು ಅರ್ಪಣೆ ಮಾಡಿರಿ. 

ಮೀನ: ಈ ದಿನ ವೆಚ್ಚಗಳಿಗೆ ಒಂದಿಷ್ಟು ಕಡಿವಾಣ ಹಾಕಿರಿ. ಯಾವುದನ್ನು ಬೇಗ ನಂಬಲು ಹೋಗಬೇಡಿ, ಪುನರ್ ಪರಿಶೀಲನೆ ತುಂಬಾ ಅಗತ್ಯ ಇದೆ. ಹೊಸ ವ್ಯವಹಾರಕ್ಕೆ ಬಂಡವಾಳ ಹಾಕುವುದು ಅಷ್ಟೇನೂ ಉತ್ತಮ ದಿನ ಅಲ್ಲವೇ ಅಲ್ಲ. ಈ ದಿನ ನೀವು ಸಂಜೆ ೭ ಗಂಟೆ ಒಳಗೆ ಗಣಪತಿಗೆ ಗರಿಕೆ ಹುಲ್ಲು ಅರ್ಪಣೆ ಮಾಡಿರಿ.

ಇದನ್ನೂ ಓದಿ : Vastu Tips: ನೌಕರಿ ಸಿಗುತ್ತಿಲ್ಲವೇ? ಈ ವಾಸ್ತುಶಾಸ್ತ್ರ ಸಲಹೆಗಳನ್ನು ಅನುಸರಿಸಿ ನೋಡಿ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News