Sun Transit 2021: ಮೇಷ ರಾಶಿ ಪ್ರವೇಶಿಸಿರುವ ಸೂರ್ಯ; ರಾಶಿಯವರಿಗೆ ಭಾರೀ ಶುಭ ಫಲ

ಏಪ್ರಿಲ್ 14ರಂದು,  ಸೂರ್ಯ  ತನ್ನ ರಾಶಿಚಕ್ರವನ್ನು ಬದಲಾಯಿಸಿದ್ದಾನೆ. ಮೀನ ರಾಶಿಯಿಂದ  ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ

ನವದೆಹಲಿ: ಏಪ್ರಿಲ್ 14 ರ ಸಂಕ್ರಾಂತಿಯಂದು ಸೂರ್ಯ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಇನ್ನು  ಮುಂದಿನ ಒಂದು ತಿಂಗಳು ಅಂದರೆ ಮೇ 14 ರವರೆಗೆ ಸೂರ್ಯ ಮೇಷ ರಾಶಿಯಲ್ಲಿ ಉಳಿಯಲಿದ್ದಾನೆ. ಮೇಷ ರಾಶಿಯಲ್ಲಿ ಸೂರ್ಯ ಅತ್ಯಂತ ಶಕ್ತಿಶಾಲಿಯಾಗಿರುತ್ತಾನೆ  ಎಂದು ಪರಿಗಣಿಸಲಾಗುತ್ತದೆ. ಸೂರ್ಯದೇವನ ಈ  ಪಥ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /12

ಸೂರ್ಯನ  ಪಥ ಬದಲಾವಣೆ  ಮೇಷ ರಾಶಿಯವರಿಗೆ ಅತ್ಯಂತ ಶುಭ ಫಲ ನೀಡಲಿದೆ. ಈ ರಾಶಿಯವರ ಗೌರವ, ಪ್ರತಿಷ್ಠೆ ಹೆಚ್ಚುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಅವಕಾಶವಿದೆ.  ಜನಪ್ರಿಯತೆ ಹೆಚ್ಚಾಗುತ್ತದೆ. ಎಲ್ಲಾ , ಕ್ಷೇತ್ರಗಳಲ್ಲೂ ಯಶಸ್ಸು ಸಿಗುತ್ತದೆ. ಕಂಕಣ ಭಾಗ್ಯ ಕೂಡಿ ಬರಲಿದೆ.  

2 /12

ಹಳೆಯ ವ್ಯವಹಾರಗಳು ಮತ್ತು ಬಾಕಿ ಇರುವ ಕೆಲಸಗಳು ಇತ್ಯರ್ಥಗೊಳ್ಳುತ್ತವ.  ಹಣಕಾಸಿನ ಹೂಡಿಕೆಯ ಸಾಧ್ಯತೆ ಇರುತ್ತದೆ. ಸಂಬಂಧಗಳು ಸುಧಾರಿಸುತ್ತವ.  ಈ ಸಮಯದಲ್ಲಿ ನೀವು ಆಸ್ತಿಯನ್ನು ಖರೀದಿಸಬಹುದು. ಆರೋಗ್ಯದತ್ತ ಗಮನ ಹರಿಸಿ.  

3 /12

ಮಿಥುನ ರಾಶಿಯವರು ಆರ್ಥಿಕವಾಗಿ ಉನ್ನತಸ್ಥಾನಕ್ಕೆ ಏರಬಹುದು. ಆದರೂ ಕೂಡಾ ಖರ್ಚನ್ನು ನಿಯಂತ್ರಿಸುವ ಅಗತ್ಯವಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ  ಬರಲು ಬಿಡಬೇಡಿ.  ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.  ಪ್ರೀತಿಗೆ ಸಂಬಂಧಿಸಿದ ವಿಷಯಗಳು ಅಸಡ್ಡೆ ಇರುತ್ತದೆ.   

4 /12

ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ.  ಪದೋನ್ನತಿಯಾಗಲಿದೆ. ಧನ ಲಾಭವಾಗುವ ಸಂಭವವಿದೆ. ಆದರೆ ಖರ್ಚು ಕೂಡಾ ಹೆಚ್ಚಾಗಬಹುದು. ಖರ್ಚಿನ ಮೇಲೆ ನಿಯಂತ್ರಣವಿರಲಿ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ಪೋಷಕರ ಆರೋಗ್ಯದತ್ತ ಹೆಚ್ಚಿನ ಗಮನ ವಹಿಸಿ ..   

5 /12

 ಸಿಂಹ ರಾಶಿಯವರು ಬಾಕಿ ಉಳಿಸಿಕೊಂಡಿದ್ದ ಕಾರ್ಯಗಳು ಪೂರ್ಣಗೊಳ್ಳಲಿದೆ. ಆರ್ಥಿಕ ಲಾಭದ ಸಾಧ್ಯತೆಯೂ ಇದೆ. ಕೋಪದ ಮೇಲೆ ನಿಯಂತ್ರಣವಿರಲಿ. ಅದೃಷ್ಟ ಮೇಲುಗೈ ಸಾಧಿಸುತ್ತದೆ ಮತ್ತು ನಿಮಗೆ ಬೆಂಬಲ ನೀಡುತ್ತದೆ.

6 /12

ಕನ್ಯಾರಾಶಿ ಜನರಿಗೆ ಆರೋಗ್ಯದ ಜೊತೆಗೆ ಆರ್ಥಿಕ ತೊಂದರೆಗಳೂ ಇರಬಹುದು. ಮದುವೆಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದ.  ವಿವಾಹಿತ ಜೀವನದಲ್ಲಿಯೂ ಸಮಸ್ಯೆಗಳು ಉಂಟಾಗಬಹುದು. ಸಾಧ್ಯವಾದಷ್ಟು ಜಗಳ ಮತ್ತು ವಿವಾದಗಳಿಂದ ದೂರವಿರಿ.

7 /12

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಗಂಡ ಹೆಂಡತಿಯರಲ್ಲಿ ಯಾರೊಬ್ಬರ ಆರೋಗ್ಯವೂ ಕೆಡಬಹುದು.  ಈ ಸಮಯವು ಆರ್ಥಿಕವಾಗಿ ಉತ್ತಮವಾಗಿರುತ್ತದೆ.  ಹಣ ಸಂಪಾದಿಸಲು ಉತ್ತಮ ಅವಕಾಶಗಳಿವೆ.  

8 /12

ಉದ್ಯೋಗ ಮತ್ತು ಉದ್ಯೋಗದ ಬಗ್ಗೆ ಇಲ್ಲಿಯವರೆಗೆ ಇದ್ದ ಸಮಸ್ಯೆಗಳು ಕಡಿಮೆಯಾಗುತ್ತವೆ. ಶತ್ರುಗಳು ಸೋಲೋಪ್ಪಿಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪುಗಳು ನಿಮ್ಮ ಪರವಾಗಿ ಬರುತ್ತವೆ.   ಆದಾಯದ ವಿಧಾನಗಳು ಹೆಚ್ಚಾಗುತ್ತವೆ.  ಕೋಪದ ಮೇಲೆ ನಿಯಂತ್ರಣವಿರಲಿ. 

9 /12

ಧನು ರಾಶಿ ಜನರಿಗೆ ಸಾಕಷ್ಟು ಯಶಸ್ಸು ಮತ್ತು ಗೌರವ ಸಿಗುತ್ತದೆ. ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಯಾಗಬಹುದು.  ಭಾರೀ ಲಾಭವಾಗಲಿದೆ. ಹಿರಿಯ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಿ. 

10 /12

ಇಲ್ಲಿವರೆಗೆ ಎದುರಿಸುತ್ತಿದ್ದ ಸಮಸ್ಯೆಗಳು ಕೊನೆಯಾಗುತ್ತವೆ. ಅನೇಕ ಅನಿರೀಕ್ಷಿತ ಫಲಿತಾಂಶಗಳು ಕಂಡುಬರುತ್ತವೆ. ಈ ಸಮಯದಲ್ಲಿ, ನೀವು ಏರಿಳಿತಗಳನ್ನು ಎದುರಿಸಬೇಕಾಗಬಹುದು.  ಕೌಟುಂಬಿಕ ಭಿನ್ನಾಭಿಪ್ರಾಯ ಮತ್ತು ಮಾನಸಿಕ ತೊಂದರೆ ಉಂಟಾಗಬಹುದು. ಕೆಲವು ಅಹಿತಕರ ಸುದ್ದಿಗಳನ್ನು ಕೇಳಬೇಕಾಗಬಹುದು.  

11 /12

ಆರ್ಥಿಕವಾಗಿ ಯಶಸ್ಸು ಸಿಗಲಿದೆ. ನೀವು ಶತ್ರುಗಳ ಮೇಲೆ ವಿಜಯವನ್ನು ಪಡೆಯಲು ಸಾಧ್ಯವಾಗುತ್ತದೆ.  ಧರ್ಮ ಮತ್ತು ದಾನ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.  ನಿಮ್ಮ ಯೋಜನೆಗಳನ್ನು ಗೌಪ್ಯವಾಗಿರಿಸಿಕೊಳ್ಳಿ.

12 /12

ಮೀನ ರಾಶಿಯಿಂದಲೇ ಸೂರ್ಯ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ.  ಮೀನ ರಾಶಿಯವರ ಆದಾಯ ಹೆಚ್ಚಾಗಬಹುದು. ಆದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವಿವಾದಗಳಿಂದ ದೂರವಿರಿ, ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ.  

You May Like

Sponsored by Taboola