ನವದೆಹಲಿ: ಪ್ರಸ್ತುತ ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಸಿಬಿಎಸ್ ಸಿ ಬೋರ್ಡ್ ಇತ್ತೀಚಿಗೆ 10 ನೇ ತರಗತಿ ಬೋರ್ಡ್ ಎಕ್ಸಾಮ್ ಗಳನ್ನ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದ್ರೆ ಈಗ ಐಸಿಎಸ್ಇ (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್) ಕೂಡ 10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿ ಸೋಮವಾರ (ಏಪ್ರಿಲ್ 19, 2021) ಆದೇಶ ಹೊರಡಿಸಿದೆ.
ಆದ್ರೆ, ಐಸಿಎಸ್ಇ(Indian School Certificate Examinations) 12 ನೇ ತರಗತಿ ಪರೀಕ್ಷೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಸಿಎಸ್ಇ ತಿಳಿಸಿದೆ.
ಇದನ್ನೂ ಓದಿ : Coronavirus : ಕೇಂದ್ರ ಸರ್ಕಾರದಿಂದ ಮುನ್ನೆಚ್ಚರಿಕಾ ಕ್ರಮ : ಸರ್ಕಾರ ನೌಕರರಿಗೂ ನಿರ್ದೇಶನ ಜಾರಿ
ಕೊರೋನಾ(COVID-19)ದಿಂದ ಸಧ್ಯ ಹದಗೆಟ್ಟಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಐಸಿಎಸ್ಇ (10ನೇ ತರಗತಿ) 2021 ಪರೀಕ್ಷೆಯನ್ನು ರದ್ದುಗೊಳಿಸಲು ಐಸಿಎಸ್ಇ ನಿರ್ಧರಿಸಿದೆ. 2021 ರ ಏಪ್ರಿಲ್ 16 ರ ಹಿಂದಿನ ಸುತ್ತೋಲೆಯಲ್ಲಿ ನೀಡಲಾದ ಆಯ್ಕೆಗಳು ಈಗ ಹಿಂತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ಅಧಿಕೃತ ಹೇಳಿಕೆಯಲ್ಲಿ.
ಇದನ್ನೂ ಓದಿ : Former PM Tested Covid-19 Positive - ಮಾಜಿ ಪ್ರಧಾನಿ ಮನಮೋಹನ್ ಸಿಂಗ್ Corona Positive, AIIMSಗೆ ದಾಖಲು
ನಮ್ಮ ವಿದ್ಯಾರ್ಥಿಗಳು(Students) ಮತ್ತು ಬೋಧನಾ ಅಧ್ಯಾಪಕರ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆ ಎಂದು ಐಸಿಎಸ್ಇ ಹೇಳಿದೆ.
ಇದನ್ನೂ ಓದಿ : Remdesivir Not Magic Bullet: ರೆಮ್ದೆಸಿವಿರ್ ಕೊರೊನಾ ಸೋಂಕಿಗೆ ಮ್ಯಾಜಿಕ್ ಚಿಕಿತ್ಸೆ ಅಲ್ಲ - AIIMS ನಿರ್ದೇಶಕ
ಈ ಹಿಂದೆ ಹೇಳಿದಂತೆ 'ನ್ಯಾಯಯುತ ಮತ್ತು ಪಕ್ಷಪಾತವಿಲ್ಲದ ಮಾನದಂಡ'ವನ್ನು ರೂಪಿಸಲು ಬದ್ಧವಾಗಿದೆ ಎಂದು ಐಸಿಎಸ್ಇ ಹೇಳಿದೆ. ಐಸಿಎಸ್ಇ (10 class) ವಿದ್ಯಾರ್ಥಿಗಳಿಗೆ ಯಾವ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ ಮತ್ತು ಫಲಿತಾಂಶ ಘೋಷಣೆಯ ದಿನಾಂಕವನ್ನು ನಂತರ ಸಿಐಎಸ್ಸಿಇ ಪ್ರಕಟಿಸುತ್ತದೆ.
ಇದನ್ನೂ ಓದಿ : Latest News On Corona Vaccination: May 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೂಡ ಲಸಿಕೆ, ಮಾರುಕಟ್ಟೆಯಲ್ಲಿಯೂ ಸಿಗಲಿದೆ ಲಸಿಕೆ
ಹನ್ನೆರಡನೇ ತರಗತಿ ಪ್ರವೇಶ ಮತ್ತು ಈ ವಿದ್ಯಾರ್ಥಿಗಳಿಗೆ ತರಗತಿಗಳ ಪ್ರಾರಂಭ:
ಎಲ್ಲಾ ಐಸಿಎಸ್ಇ ಅಂಗಸಂಸ್ಥೆ ಶಾಲೆಗಳಿಗೆ (ಐಎಸ್ ಸಿ ವಿಭಾಗವನ್ನು ಹೊಂದಿರುವ) ಈಗಾಗಲೇ ಪ್ರಾರಂಭಿಸದಿದ್ದರೆ ಹನ್ನೆರಡನೇ ತರಗತಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಇದಲ್ಲದೆ, ಇಂತಹ ಎಲ್ಲಾ ಶಾಲೆಗಳಿಗೆ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಬೇಗನೆ ಪ್ರಾರಂಭಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ನಿರ್ದೇಶಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.