Former PM Tested Covid-19 Positive - ಮಾಜಿ ಪ್ರಧಾನಿ ಮನಮೋಹನ್ ಸಿಂಗ್ Corona Positive, AIIMSಗೆ ದಾಖಲು

Former PM Tested Covid-19 Positive - ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Written by - Nitin Tabib | Last Updated : Apr 19, 2021, 10:26 PM IST
  • ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊರೊನಾ ಪಾಸಿಟಿವ್.
  • AIIMS ದೆಹಲಿಯಲ್ಲಿ ದಾಖಲು.
  • ಮಾಜಿ ಪ್ರಧಾನಿಗೆ ಈಗಾಗಲೇ ಕೊರೊನಾ ಲಸಿಕೆಯ ಮೊದಲ ಪ್ರಮಾಣ ನೀಡಲಾಗಿದೆ.
Former PM Tested Covid-19 Positive - ಮಾಜಿ ಪ್ರಧಾನಿ ಮನಮೋಹನ್ ಸಿಂಗ್ Corona Positive, AIIMSಗೆ ದಾಖಲು title=
Former PM Tested Covid Positive (File Photo)

ನವದೆಹಲಿ: Former PM Tested Covid-19 Positive - ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮನಮೋಹನ್ ಸಿಂಗ್ ಅವರಿಗೆ ಈಗಾಗಲೇ  ಕರೋನಾ ಲಸಿಕೆ ನೀಡಲಾಗಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ ಮತ್ತು ಅದರಿಂದ ಅವರು ಕರೋನಾವನ್ನು ಸುಲಭವಾಗಿ ಸೋಲಿಸಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಾರ್ಚ್ 4 ರಂದು, ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರ್ಷರನ್ ಕೌರ್ ಏಮ್ಸ್ ಗೆ ಭೇಟಿ ನೀಡುವ ಮೂಲಕ ಕರೋನಾ ಲಸಿಕೆಯ (Corona Vaccine) ಮೊದಲ ಪ್ರಮಾಣವನ್ನು ಪಡೆದುಕೊಂಡಿದ್ದರು.

ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಡಾ. ಮನಮೋಹನ್ ಸಿಂಗ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಜ್ವರವಿದೆ ಹಾಗೂ ಆರಂಭಿಕ ತನಿಖೆಯಲ್ಲಿ ಅವರು ಕೊರೊನಾ (Coronavirus) ಸೋಂಕಿಗೆ ಗುರಿಯಾಗಿರುವುದು ದೃಢಪಟ್ಟಿದೆ. ಸದ್ಯ ಅವರು ನುರಿತ ವೈದ್ಯರ ನಿಗಾದಲ್ಲಿದ್ದಾರೆ. ಕಳೆದ ವರ್ಷ ನೊಸ ಔಷಧಿಯ ಕಾರಣ ರಿಯಾಕ್ಷನ್ ಹಾಗೂ ಜವರದ ಬಳಿಕ ೮೭ ವರ್ಷದ ಸಿಂಗ್ ಅವರನ್ನು AIIMS ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

ಇದನ್ನೂ ಓದಿ- Remdesivir Not Magic Bullet: ರೆಮ್ದೆಸಿವಿರ್ ಕೊರೊನಾ ಸೋಂಕಿಗೆ ಮ್ಯಾಜಿಕ್ ಚಿಕಿತ್ಸೆ ಅಲ್ಲ - AIIMS ನಿರ್ದೇಶಕ

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರಿಗೆ ಪತ್ರ ಬರೆದಿದ್ದ ಡಾ. ಸಿಂಗ್, ಕೊರೊನಾ ಮಹಾಮಾರಿಯನ್ನು ಸೋಲಿಸಲು ಐದು ಸಲಹೆಗಳನ್ನು ನೀಡಿದ್ದರು. ತಮ್ಮ ಪತ್ರದಲ್ಲಿ ಅವರು ಲಸಿಕಾಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಲು ಅವರು ಕೇಂದ್ರಕ್ಕೆ ಸಲಹೆ ನೀಡಿದ್ದರು. ಡಾ. ಮನಮೋಹನ್ ಸಿಂಗ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದು, ರಾಜಸ್ಥಾನದಿಂದ ರಾಜ್ಯಸಭೆಯ ಸದಸ್ಯರೂ ಆಗಿದ್ದಾರೆ. 

ಇದನ್ನೂ ಓದಿ- Latest News On Corona Vaccination: May 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಕೂಡ ಲಸಿಕೆ, ಮಾರುಕಟ್ಟೆಯಲ್ಲಿಯೂ ಸಿಗಲಿದೆ ಲಸಿಕೆ

2004 ರಿಂದ 2014 ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ  ದೇಶದ ಪ್ರಧಾನ ಮಂತ್ರಿಯಾಗಿದ್ದರು. ಇದಕ್ಕೂ ಮೊದಲು ಅವರು ವಿದೇಶಾಂಗ ಸಚಿವರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮನಮೋಹನ್ ಸಿಂಗ್ ದೇಶದ ಮತ್ತು ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಯರಲ್ಲಿ ಒಬ್ಬರಾಗಿದ್ದಾರೆ. 

ಇದನ್ನೂ ಓದಿ-Coronavirus Airborne - ಗಾಳಿಯ ಮೂಲಕ ಹರಡುತ್ತಿದೆ ಕೊರೊನಾ, ಮೊಟ್ಟಮೊದಲ ಬಾರಿಗೆ ಇದನ್ನು ಒಪ್ಪಿಕೊಂಡ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News