ನವದೆಹಲಿ: ಮುಂಬೈನ ವಾಂಖೇಡ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021 ಟೂರ್ನಿಯ 16 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನದ ವಿರುದ್ಧ ಭರ್ಜರಿ 10 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ : RCB vs KKR:ಅಬ್ಬರಿಸಿದ ಎಬಿಡಿ, ಮ್ಯಾಕ್ಸ್ ವೆಲ್, ಆರ್ಸಿಬಿಗೆ 38 ರನ್ ಗಳ ಗೆಲುವು
That's a CENTURY for @devdpd07 🔥🔥
His maiden 💯 in #VIVOIPL
Live - https://t.co/qQv53pVLyV #RCBvRR #VIVOIPL pic.twitter.com/m2LG7t4zKO
— IndianPremierLeague (@IPL) April 22, 2021
ಇದನ್ನೂ ಓದಿ: RCB vs KKR: ಎಬಿಡಿ, ಮ್ಯಾಕ್ಸ್ ವೆಲ್ ಸ್ಪೋಟಕ ಬ್ಯಾಟಿಂಗ್, ಆರ್ಸಿಬಿ 204/4
ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು.ಇನ್ನೊಂದೆಡೆಗೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳನ್ನು ಗಳಿಸಿತು. ಶಿವಂ ದುಭೆ 46, ಹಾಗೂ ರಾಹುಲ್ ತೆವಾತಿಯಾ 40 ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.ಬೆಂಗಳೂರು ಪರವಾಗಿ ಸಿರಾಜ್ ಹಾಗೂ ಹರ್ಶಾಲ್ ಪಟೇಲ್ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಗಮನ ಸೆಳೆದರು.
Milestone 🔓
6000 Runs in #VIVOIPL for 👑 Kohli 👏👏
Live - https://t.co/dch5R4juzp #RCBvRR #VIVOIPL pic.twitter.com/WxLODwE2zD
— IndianPremierLeague (@IPL) April 22, 2021
ಇದಾದ ನಂತರ ರಾಜಸ್ತಾನ ರಾಯಲ್ಸ್ ತಂಡವು ನೀಡಿದ 177 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ತಂಡವು ದೇವದತ್ ಪಡಿಕಲ್ 101,ಹಾಗೂ ವಿರಾಟ್ ಕೊಹ್ಲಿ ಅವರ 72 ರನ್ ಗಳ ನೆರವಿನಿಂದಾಗಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 16.3 ಓವರ್ ಗಳಲ್ಲಿ 181 ರನ್ ಗಳನ್ನು ಗಳಿಸುವ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವನ್ನು ಸಾಧಿಸಿತು.
ಇದೇ ವೇಳೆ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ 6000 ಸಾವಿರ ರನ್ ಗಳ ಮೈಲುಗಲ್ಲು ತಲುಪಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.