RCB vs KKR:ಅಬ್ಬರಿಸಿದ ಎಬಿಡಿ, ಮ್ಯಾಕ್ಸ್ ವೆಲ್, ಆರ್‌ಸಿಬಿಗೆ 38 ರನ್ ಗಳ ಗೆಲುವು

ಚೆನ್ನೈ ನ ಎಂ.ಎ.ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಐಪಿಎಲ್ 2021 ಟೂರ್ನಿಯ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್ ಗಳ ಗೆಲುವು ಸಾಧಿಸಿದೆ.

Last Updated : Apr 18, 2021, 08:38 PM IST
RCB vs KKR:ಅಬ್ಬರಿಸಿದ ಎಬಿಡಿ, ಮ್ಯಾಕ್ಸ್ ವೆಲ್, ಆರ್‌ಸಿಬಿಗೆ 38 ರನ್ ಗಳ ಗೆಲುವು  title=

ನವದೆಹಲಿ: ಚೆನ್ನೈ ನ ಎಂ.ಎ.ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಐಪಿಎಲ್ 2021 ಟೂರ್ನಿಯ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್ ಗಳ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನಿರ್ಧಾರ ಆರಂಭದಲ್ಲಿ ತಪ್ಪಾಯಿತೇನೋ ಎನ್ನುವಂತಾಗಿತ್ತು.ತಂಡದ ಮೊತ್ತ  9 ರನ್ ಗಳಾಗುವಷ್ಟರಲ್ಲಿ ವಿರಾಟ್ ಕೊಹ್ಲಿ ಮತ್ತು ರಜತ್ ಪಾತಿದಾರ್ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತವನ್ನು ಎದುರಿಸಿತು.

ಇದನ್ನೂ ಓದಿ: ಭಾರತೀಯ ಅಭಿಮಾನಿಗಳು, ಕ್ರಿಕೆಟಿಗರು, ಎಲ್ಲರೂ ಈ ವಿದೇಶಿ ಬ್ಯಾಟ್ಸ್‌ಮನ್ ಫ್ಯಾನ್ಸ್

ಈ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 49 ಎಸೆತಗಳಲ್ಲಿ 78 ರನ್ ಗಳನ್ನು ಸಿಡಿಸಿದರು, ಇದರಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳು ಸೇರಿದ್ದವು. ಇನ್ನೊಂದೆಡೆಗೆ ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಎಬಿ ಡಿ ವಿಲಿಯರ್ಸ್ (AB de Villiers) ಕೇವಲ 34 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 9 ಬೌಂಡರಿ ಗಳೊಂದಿಗೆ 76 ರನ್ ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ತಂಡದ ಮೊತ್ತವನ್ನು 200 ಗಡಿ ದಾಟಲು ನೆರವಾದರು. ಇನ್ನೊಂದೆಡೆ ಕೈಲ್ ಜ್ಯಾಮಿಸನ್ ಕೂಡ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಮೂಲಕ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆರ್ಸಿಬಿ ವಿರುದ್ಧ  20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್ ಗಳ ಬೃಹತ್ ಗುರಿಯನ್ನು ನೀಡಿದೆ.

ಇದನ್ನೂ ಓದಿ: ಎಬಿಡಿ ವಿಲಿಯರ್ಸ್ ಪ್ರಕಾರ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ತಂಡ ಯಾವುದು ಗೊತ್ತೇ ?

ಈ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 166 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.ಕೊಲ್ಕತ್ತಾ ಪರವಾಗಿ ರಸೆಲ್ ಗಳಿಸಿದ 31 ರನ್ ಗಳೇ ಅಧಿಕ ಮೊತ್ತವಾಗಿತ್ತು. ಬೆಂಗಳೂರು ಪರವಾಗಿ ಕೈಲ್ ಜೆಮಿಸನ್ ಮೂರು ಹಾಗೂ ಚಹಾಲ್ ಎರಡು ಹಾಗೂ ಹರ್ಶಾಲ್ ಪಟೇಲ್ ಎರಡು ವಿಕೆಟ್ ಗಳನ್ನು ಕಬಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News