ನವದೆಹಲಿ: ದೆಹಲಿ ಹೈಕೋರ್ಟ್ ಪಂಚತಾರಾ ಹೋಟೆಲ್‌ನಲ್ಲಿ ಕೋವಿಡ್ ಸೌಲಭ್ಯಗಳನ್ನು ಕೇಳಿಲ್ಲ ಮತ್ತು ಸರ್ಕಾರದ ಆದೇಶ ತಪ್ಪಾಗಿದೆ ಎಂದು ಹೇಳಿದೆ.
ನಿನ್ನೆ ಅಶೋಕ ಹೋಟೆಲ್‌ನಲ್ಲಿ 100 ಕೊಠಡಿಗಳನ್ನು ಹೈಕೋರ್ಟ್ ನ್ಯಾಯಾಧೀಶರು ಮತ್ತು ಅವರ ಕುಟುಂಬಗಳಿಗಾಗಿ ಕಾಯ್ದಿರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಇಂದು ಹೈಕೋರ್ಟ್ ನ ಸ್ಪಷ್ಟೀಕರಣ ಬಂದಿದೆ.
ಇದನ್ನೂ ಓದಿ: COVID-19 Crisis: ಭಾರತಕ್ಕೆ ನೆರವು ನೀಡುವುದಾಗಿ ಹೇಳಿದ ಚೀನಾ
"ನಾವು ಪಂಚತಾರಾ ಹೋಟೆಲ್‌ನಲ್ಲಿ 100 ಹಾಸಿಗೆಗಳ ಸೌಲಭ್ಯವನ್ನು ಯಾವಾಗ ಕೇಳಿದ್ದೇವೆ? ನ್ಯಾಯಾಂಗ ಅಧಿಕಾರಿ ಅಥವಾ ನ್ಯಾಯಾಧೀಶರು ಅಥವಾ ಅವರ ಕುಟುಂಬಕ್ಕೆ ಕೊರೊನಾ COVID-19 ಸೋಂಕು ತಗುಲಿದರೆ ಮಾತ್ರ ಅವರು ಆಸ್ಪತ್ರೆಗೆ ಪ್ರವೇಶ ಪಡೆಯಬೇಕು ಎಂದು ನಾವು ಹೇಳಿದ್ದೇವೆ" ಎಂದು ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ತಿಳಿಸಿದೆ.
"ನೀವು ಈ ರೀತಿಯ ಚರ್ಚೆ ಹುಟ್ಟುಹಾಕಲು ಕಾರಣವೇನು? ನಾವು ಈ ಸೌಲಭ್ಯಕ್ಕಾಗಿ ದೆಹಲಿ ಸರ್ಕಾರವನ್ನು ಕೇಳಿದಂತೆ ತೋರುತ್ತಿದೆ. ಅಥವಾ ನಮ್ಮನ್ನು ಮೆಚ್ಚಿಸಲು ನೀವು ಇದನ್ನು ಮಾಡಿದ್ದೀರಿ.ನೀವು ಎಲ್ಲವನ್ನೂ ಕಾಗದದ ಮೇಲೆ ಮಾಡಿದ್ದೀರಿ" ಎಂದು ಪಂಚತಾರಾ ಕೋವಿಡ್ ಕುರಿತ ಚರ್ಚೆಯಲ್ಲಿ ಅಸಮಾಧಾನಗೊಂಡ ನ್ಯಾಯಾಧೀಶರು ಹೇಳಿದರು.
ಇದನ್ನೂ ಓದಿ: IPL-2021 ತೊರೆಯುತ್ತಿರುವವರಿಗೆ BCCI ಸಂದೇಶ, ಯಾವುದೇ ಆಕ್ಷೇಪ ಇಲ್ಲ, ಟೂರ್ನಿ ಮುಂದುವರೆಯಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.