ನವದೆಹಲಿ: IPL-2021 - ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಮಹಾಮಾರಿಯ ನಡುವೆ ಇಂಡಿಯನ್ ಪ್ರಿಮಿಯರ್ ಲೀಗ್ ನ ಸುರಕ್ಷಿತ ಬಯೋ ಬಬಲ್ ನಲ್ಲಿರುವ ಆಟಗಾರರನ್ನು ಕೂಡ ಚಿಂತೆಗೀಡು ಮಾಡಿದೆ. ಭಾರತದ ಅನುಭವಿ ಆಟಗಾರ ಹಾಗೂ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವು ಆಸ್ಟ್ರೇಲಿಯಾ ಆಟಗಾರರು ಲೀಗ್ ಅನ್ನು ಮಧ್ಯದಲ್ಲಿಯೇ ತೊರೆದಿದ್ದಾರೆ. ಆದರೆ, ಟೂರ್ನಿ ಮುಂದುವರೆಯಲಿದೆ ಎಂದು BCCI ಸ್ಪಷ್ಟಪಡಿಸಿದೆ.
ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅಶ್ವಿನ್ ಭಾನುವಾರ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ನಡೆದ ಪಂದ್ಯದ ಬಳಿಕ ಟ್ವೀಟ್ ಮಾಡಿ, ತಾವು ಈ ಬಾರಿಯ IPL ಟೂರ್ನಿಯಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನನ್ನ ಕುಟುಂಬ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿದೆ ಹಾಗೂ ಇಂತಹ ಕಠಿಣ ಸಮಯದಲ್ಲಿ ನನ್ನ ಕುಟುಂಬಕ್ಕೆ ನನ್ನ ಅವಶ್ಯಕತೆ ಇದೆ. ಒಂದು ವೇಳೆ ಪರಿಸ್ಥಿತಿ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಪುನಃ ತಂಡಕ್ಕೆ ಸೇರಿಕೊಳ್ಳುವೆ 'ಧನ್ಯವಾದ ದೆಹಲಿ ಕ್ಯಾಪಿಟಲ್ಸ್' ಎಂದು ಅಶ್ವಿನ್ ಹೇಳಿದ್ದಾರೆ. ಅಶ್ವಿನ್ ಅವರ ಕುಟುಂಬ ಸದಸ್ಯರೊಬ್ಬರು ಕೊರೊನಾ (Coronavirus) ಸೋಂಕಿಗೆ ಗುರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಆಸ್ಟ್ರೇಲಿಯಾ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಆಂಡ್ರೂ ಟಾಯ್ ಕೂಡ ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ತಮ್ಮ ದೇಶ ಭಾರತದಿಂದ ಬರುವವರಿಗೆ ಪ್ರವೇಶ ನಿಷೇಧಿಸಲಿದೆ ಎಂಬ ಊಹಾಪೋಹಗಳ ಹಿನ್ನೆಲೆ ಟೂರ್ನಿಯನ್ನು ತೊರೆದಿದ್ದಾರೆ. ಆಸ್ಟ್ರೇಲಿಯಾದ ಹಲವು ಆಟಗಾರರೂ ಕೂಡ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆನ್ ರಿಚರ್ಡ್ಸನ್ ಹಾಗೂ ಆಡಮ್ ಜಂಪಾ ಕೂಡ ವೈಯಕ್ತಿಕ ಕಾರಣಗಳ ಹಿನ್ನೆಲೆ ಲೀಗ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ- ಮಹಿಳೆಯರು ಈ ಸಮಯದಲ್ಲಿ ಲಸಿಕೆ ಪಡೆಯಬಾರದೇ? ಇಲ್ಲಿದೆ ವೈರಲ್ ಮೆಸೇಜ್ ಹಿಂದಿನ ಸತ್ಯಾಸತ್ಯತೆ
ಇವೆಲ್ಲವುದರ ನಡುವೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಲೀಗ್ ಜಾರಿಯಲ್ಲಿರಲಿದೆ ಎಂದಿದೆ. ಈ ಕುರಿತು ಮಾಹಿತಿ ನೀಡಿರುವ ಮಂಡಳಿಯ ಅಧಿಕಾರಿಯೊಬ್ಬರು, "IPL ಜಾರಿಯಲ್ಲಿರಲಿದೆ, ಯಾವುದೇ ಆಟಗಾರ ಲೀಗ್ ತೊರೆಯಲು ಬಯಸುತ್ತಿದ್ದರೆ, ಯಾವುದೇ ಆಕ್ಷೇಪ ಇಲ್ಲ" ಎಂದಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದ BCCI, 'ಆಡಮ್ ಚಂಪಾ ಹಾಗೂ ಕೆನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳ ಹಿನ್ನೆಲೆ ಸ್ವದೇಶಕ್ಕೆ ಮರಳುತ್ತಿದ್ದಾರೆ ಹಾಗೂ ಉಳಿದ ಪಂದ್ಯಗಳಿಗೆ ಅವರು ಲಭ್ಯರಾಗುತ್ತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ಅವರ ಬೆಂಬಲಕ್ಕೆ ಇರಲಿದೆ ಹಾಗೂ ಅವರಿಗೆ ಎಲ್ಲಾ ರೀತಿಯ ನೆರವು ಒದಗಿಸುತ್ತಿದೆ" ಎಂದಿತ್ತು. ಬೆಂಗಳೂರು ತಂಡ ಚಂಪಾ ಅವರನ್ನು ಒಂದೂವರೆ ಕೋಟಿ ಹಾಗೂ ರಿಚರ್ಡ್ಸನ್ ಅವರನ್ನು 4 ಕೋಟಿ ರೂ.ಗೆ ಖರೀದಿಸಿತ್ತು.
ಇದನ್ನೂ ಓದಿ- ಯಾರು ಹಾಕಿಸಬಾರದು ಕೋವಿಶೀಲ್ಡ್, ಕೋವಾಕ್ಸಿನ್ ಇಲ್ಲಿದೆ ಫಾಕ್ಟ್ ಶೀಟ್ ಮಾಹಿತಿ
ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೊನಾ (Covid-19)ಪ್ರಕೋಪದ ಹಿನ್ನೆಲೆ ಬ್ರಿಟನ್ ಹಾಗೂ ನ್ಯೂಜಿಲ್ಯಾಂಡ್ ಸೇರಿದಂತೆ ಹಲವು ದೇಶಗಳು ಭಾರತದ ಯಾತ್ರೆಗಳ ಮೇಲೆ ನಿಷೇಧ ವಿಧಿಸಿವೆ. ಆಸ್ಟ್ರೇಲಿಯಾ ಕೂಡ ಭಾರತದ ಪ್ರಯಾಣಗಳಲ್ಲಿ ಶೇ.30 ರಷ್ಟು ಕಡಿತ ಮಾಡಿದೆ ಹಾಗೂ ಮುಂದೆ ಸಂಪೂರ್ಣ ನಿಷೇಧಿಸುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಪ್ರಸ್ತುತ ಭಾರತ ಆಕ್ಸಿಜನ್ ಸೇರಿದಂತೆ ಅತ್ಯಾವಶ್ಯಕ ಔಷಧಿಗಳ ಕೊರೆತೆಯನ್ನು ಎದುರಿಸುತ್ತಿದೆ. ಇದಕ್ಕೂ ಮೊದಲು ರಾಯಲ್ಸ್ ತಂಡದ ಲಿಯಾಂ ಲಿವಿಂಗ್ಸ್ಟನ್ ಕೂಡ ಯಾತ್ರೆ ನಿಷೇಧಕ್ಕೂ ಮುನ್ನವೇ ಬ್ರಿಟನ್ ಗೆ ಮರಳಿದ್ದಾರೆ.
ಇದನ್ನೂ ಓದಿ- Corona Vaccine: ಈ ನಾಲ್ಕು ರಾಜ್ಯಗಳಲ್ಲಿ ಮೇ 1ರಿಂದ ಎಲ್ಲರಿಗೂ ಸಿಗಲ್ಲ ಕರೋನಾ ಲಸಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.