ಕರೋನಾ ಲಕ್ಷಣ ಕಂಡುಬಂದರೆ ತಪ್ಪಿಯೂ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ..!

ಕರೋನಾ ಲಕ್ಷಣ ಕಂಡುಬಂದಲ್ಲಿ ವೈದ್ಯರ ಸಲಹೆಯಿಲ್ಲದೆ ಕೆಲ ಔಷಧಿಗಳನ್ನು ತೆಗೆದುಕೊಳ್ಳದಂತೆ ಐಸಿಎಂಆರ್ ತಿಳಿಸಿದೆ.
 

ನವದೆಹಲಿ:  ಕೊರೊನಾವೈರಸ್‌ನಿಂದ (Coronavirus) ಬಳಲುತ್ತಿರುವವರು ಸೂಕ್ತ ಚಿಕಿತ್ಸೆಯ ಮೂಲಕ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ.  ಸರಿಯಾದ ಕಾಳಜಿ ಮತ್ತು ಸರಿಯಾದ ಔಷಧಿಗಳನ್ನು (Medicine) ತೆಗೆದುಕೊಂಡರೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬಹುದು.  ಈ ಮಧ್ಯೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕೆಲವು ಔಷಧಿಗಳ ಹೆಸರನ್ನು ಸೂಚಿಸಿದೆ. ಕರೋನಾ (COVID-19) ಲಕ್ಷಣ ಕಾಣಿಸಿಕೊಂಡರೆ ವೈದ್ಯರ ಸಲಹೆಯಿಲ್ಲದೆ ಈ ಔಷಧಿಗಳನ್ನು ತೆಗೆದುಕೊಳ್ಳದಂತೆ ಸೂಚಿಸಿದೆ. ವೈದ್ಯರ ಸಲಹೆಯಿಲ್ಲದೆ ಈ ಔಷಧಿಗಳನ್ನು ತೆಗೆದುಕೊಂಡರೆ, ಸಮಸ್ಯೆಗಳು ಕಡಿಮೆಯಾಗುವುದಕ್ಕಿಂತ ಉಲ್ಬಣಗೊಳ್ಳುವ ಅಪಾಯವಿದೆ ಎಂದು ಅದು ಹೇಳಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /4

ಹೃದಯ ರೋಗಿಗಳಿಗೆ ಅಪಾಯಕಾರಿ ಎಂದು ಪರಿಗಣಿಸಲಾದ ಇಬುಪ್ರೊಫೇನ್ (Ibuprofen) ನಂತಹ ಕೆಲವು ನೋವು ನಿವಾರಕಗಳು ಕೋವಿಡ್ -19 ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ. ಇವು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಹೆಚ್ಚಿಸಬಹುದು.

2 /4

ನಾನ್ 'ಸ್ಟಿರಾಯ್ಡ್ ಆಂಟಿ ಇನ್ ಫ್ಲೆಮೇಟರಿ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಅನಾರೋಗ್ಯದ ಸಮಯದಲ್ಲಿ ಪ್ಯಾರಸಿಟಮಾಲ್  (Paracetamol) ತೆಗೆದುಕೊಳ್ಳಬೇಕು ಎಂದು ಐಸಿಎಂಆರ್ ಸೂಚಿಸಿದೆ.

3 /4

ಹೃದಯ ರೋಗಿಗಳು, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಕರೋನಾ ಸೋಂಕು ಹರಡುವ ಅಪಾಯ ಅಧಿಕವಾಗಿರುವುದಿಲ್ಲ. ಆದರೆ, ಕರೋನಾಗೆ ಸಂಬಂಧಪಟ್ಟ ಯಾವುದೇ ಲಕ್ಷಣ ಕಂಡು ಬಂದರೂ ತಕ್ಷಣ ಕರೋನಾ ಪರೀಕ್ಷೆಗೆ ಒಳಗಾಗುವುದು ಅವಶ್ಯಕ. 

4 /4

 ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ದುರ್ಬಲ ಹೃದಯ ಹೊಂದಿರುವ ಕೆಲವು ಜನರು ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರಬಹುದು. ಅವರಿಗೆ ಹೆಚ್ಚುವರಿ ಕಾಳಜಿ ಅಗತ್ಯ ಎಂದು ಐಸಿಎಂಆರ್ ಹೇಳಿದೆ.