ಬೆಂಗಳೂರು : ಕರ್ನಾಟಕದ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಕಾರ್ಡ್ ಹೊಂದಿರುವವರು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (PMGKA) ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ತಲಾ 5 ಕೆಜಿ ಅಕ್ಕಿ ಪಡೆಯಲಿದ್ದಾರೆ.
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (Food Corporation of India) ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈಗಾಗಲೇ ಎಫ್‌ಸಿಐ ಗೋದಾಮುಗಳಿಂದ ಅಕ್ಕಿಯನ್ನ ಸರಬರಾಜು ಮಾಡಲು ಪ್ರಾರಂಭಿಸಿದೆ ಎಂದು ಎಫ್‌ಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : SSLC ಮತ್ತು PUC ವಿದ್ಯಾರ್ಥಿಗಳೇ ಗಮನಿಸಿ..!
ಕೋವಿಡ್ ಬಿಕ್ಕಟ್ಟಿನಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ(Pradhan Mantri Garib Kalyan Yojana)ಯನ್ನ ಕಳೆದ ವರ್ಷ ಪರಿಚಯಿಸಲಾಯಿತು. 2020 ರ ಮಾರ್ಚ್ ಮತ್ತು ಅಕ್ಟೋಬರ್ ನಲ್ಲಿ ಸರ್ಕಾರ ಉಚಿತ ಅಕ್ಕಿ ಪೂರೈಸಿದೆ ಎಂದು ಎಫ್‌ಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಪಿಡಿಎಸ್ ಅಡಿಯಲ್ಲಿ ಸರಬರಾಜು ಮಾಡುವ ನಿಯಮಿತ ಪಡಿತರ ಜೊತೆಗೆ ಈ ಯೋಜನೆಯಡಿ ನೀಡಲಾಗುವ ಪಡಿತರ ಕೂಡ ಸಿಗುತ್ತದೆ. ಕರ್ನಾಟಕದಲ್ಲಿ ಪಿಡಿಎಸ್ ಅಡಿಯಲ್ಲಿ ಸುಮಾರು 4 ಕೋಟಿ ಫಲಾನುಭವಿಗಳಿದ್ದಾರೆ.
ಇದನ್ನೂ ಓದಿ : Ration Card : ಆಹಾರ ಇಲಾಖೆಯಿಂದ 1.31 ಲಕ್ಷ ಪಡಿತರ ಚೀಟಿ ರದ್ದು..!?
ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ಹಂಚಿಕೆ ಮಾಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. "ರಾಜ್ಯದಲ್ಲಿ ಲಾಕ್ ಡೌನ್ ಆಗಿರುವುದರಿಂದ ಜನರು ಉದ್ಯೋಗವಿಲ್ಲದೆ ಮನೆಯಲ್ಲಿದ್ದಾರೆ. ಮೂಲಭೂತ ಅಗತ್ಯ ವಸ್ತುಗಳನ್ನು ಸಹ ಪಡೆಯಲು ಅವರಿಗೆ ಕಷ್ಟವಾಗುತ್ತಿದೆ" ಎಂದು ಅವರು ಇಂದು ಟ್ವೀಟ್ ಮಾಡಿದ್ದಾರೆ.
'Anna Bhagya' rice is reduced from 7Kg to 2Kg by @BJP4Karnataka govt.
How can poor person survive with just 2 Kgs of rice a month?
Has @BSYBJP gone blind to the miseries of common man?
I strongly urge the govt to increase free rice to 10 Kg per person.#10KG_Akki_Beku pic.twitter.com/1Vgot1fZ8U
— Siddaramaiah (@siddaramaiah) April 29, 2021
ಇದನ್ನೂ ಓದಿ : ಕರ್ನಾಟಕದಲ್ಲಿ ಒಂದೇ ದಿನದಲ್ಲಿ 39,047 ಕೊರೊನಾ ಪ್ರಕರಣಗಳು ದಾಖಲು
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ(Umesh Katti) ಅವರನ್ನು ವಜಾ ಮಾಡುವಂತೆ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನೂ ಅವರು ಪುನರುಚ್ಚರಿಸಿದರು. ಪಿಡಿಎಸ್ ಅಡಿಯಲ್ಲಿ ಅಕ್ಕಿ ಪ್ರಮಾಣವನ್ನು ಸರ್ಕಾರ ಏಕೆ ಕಡಿಮೆ ಮಾಡಿದೆ ಎಂದು ಕೇಳಿದಾಗ ರೈತನೊಬ್ಬನನ್ನು "ಹೋಗಿ ಸಾಯಿರಿ" ಎಂದು ಕೇಳಿದ್ದಕ್ಕಾಗಿ ಸಚಿವ ಉಮೇಶ್ ಕತ್ತಿ ಬುಧವಾರ ಟೀಕೆಗೆ ಗುರಿಯಾಗಿದ್ದರು.
ಇದನ್ನೂ ಓದಿ : ಮೂಗಿಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಂಡ ಶಿಕ್ಷಕನ ಸಾವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.