Covid-19 in Karnataka: ಕರ್ನಾಟಕವನ್ನು ಬೆಚ್ಚಿಬೀಳಿಸಿದ ಕೊರೊನಾ, ಮೃತಪಟ್ಟವರಲ್ಲಿ ಶೇ.30 ರಷ್ಟು ಜನರಿಗೆ ಇತರ ಯಾವುದೇ ಕಾಯಿಲೆ ಇರಲಿಲ್ಲ

Covid-19 in Karnataka: ಮೃತಪಟ್ಟ 270 ಜನರಲ್ಲಿ, 92 ಜನರು ಪರೀಕ್ಷೆಯ ಸಮಯದಲ್ಲಿ ಯಾವುದೇ ಗಂಭೀರ ಕಾಯಿಲೆಯ ಬಗ್ಗೆ ದೂರು ನೀಡಿರಲಿಲ್ಲ ಮತ್ತು ಅವರಲ್ಲಿ 38 ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನರಾಗಿದ್ದರು.

Written by - Nitin Tabib | Last Updated : Apr 30, 2021, 09:06 PM IST
  • ಬೆಂಗಳೂರಿನಲ್ಲಿ ಕೊರೊನಾ ಮೃತರಲ್ಲಿ ಶೇ.30ರಷ್ಟು ಜನರಿಗೆ ಇತರ ಯಾವುದೇ ಕಾಯಿಲೆ ಇರಲಿಲ್ಲ.
  • ಇವರಲ್ಲಿ ಹಲವರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
  • ಆರೋಗ್ಯಕರ ಜೀವನಶೈಲಿ ಅನುಸರಿಸುವವರು ಹೆಚ್ಚು ಕೊರೊನಾಗೆ ಬಲಿಯಾಗಿದ್ದಾರೆ.
Covid-19 in Karnataka: ಕರ್ನಾಟಕವನ್ನು ಬೆಚ್ಚಿಬೀಳಿಸಿದ ಕೊರೊನಾ, ಮೃತಪಟ್ಟವರಲ್ಲಿ ಶೇ.30 ರಷ್ಟು ಜನರಿಗೆ ಇತರ ಯಾವುದೇ ಕಾಯಿಲೆ ಇರಲಿಲ್ಲ  title=
Covid-19 in Karnataka (File Photo)

ನವದೆಹಲಿ: Covid-19 in Karnataka - ಕೊರೊನಾ ವೈರಸ್ ನ ಎರಡನೇ ಅಲೆಯ ಅಬ್ಬರ ಬೆಂಗಳೂರಿನಲ್ಲಿ ಮುಂದುವರೆದಿದೆ. ವೈರಸ್ ಸೋಂಕಿನಿಂದ ಬೆಂಗಳೂರಿನಲ್ಲಿ ಮೃತಪಟ್ಟವರಲ್ಲಿ ಶೇ.30 ರಷ್ಟು ಜನರಿಗೆ ಯಾವುದೇ ಗಂಭೀರ ಕಾಯಿಲೆ ಇರಲಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಜನರು ಕರೋನಾಗೆ ಹೆಚ್ಚು ಬಲಿಯಾಗಿದ್ದಾರೆ ಎನ್ನಲಾಗಿದೆ. ರಾಜ್ಯ (Karnataka) ಸರ್ಕಾರವು ಸಂಗ್ರಹಿಸಿದ ಕರೋನಾ ಸಾವಿನ ಅಂಕಿ-ಅಂಶಗಳನ್ನು ಗಮನಿಸಿದಾದ, ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ 50 ಕರೋನಾ ಸೋಂಕಿತ ಜನರು (ಬೇರೆ ಯಾವುದೇ ಕಾಯಿಲೆ ಇಲ್ಲದವರು) ಪ್ರತಿದಿನ ವೈರಸ್ ಸೋಂಕಿಗೆ ಬಲಿಯಾಗುತ್ತಿದ್ದಾರೆ (Covid Death In Karnataka) ಎನ್ನಲಾಗಿದೆ.

ರಾಜ್ಯದಲ್ಲಿ ಗುರುವಾರ ಒಟ್ಟು 270 ಜನರು ಕೊರೊನಾ ವೈರಸ್ (Coronavirus In Karnataka) ಸೋಂಕಿಗೆ ಬಲಿಯಾಗಿದ್ದು, ಇವರಲ್ಲಿ 92 ಜನರು ಟೆಸ್ಟಿಂಗ್ ಅವಧಿಯಲ್ಲಿ ಯಾವುದೇ ಗಂಭೀರ ಕಾಯಿಲೆಯ ಕುರಿತು ದೂರು ನೀಡಿರಲಿಲ್ಲ  ಹಾಗೂ ಇವರಲ್ಲಿ 38 ಜನರ ವಯಸ್ಸು 50ಕ್ಕಿಂತ ಕಡಿಮೆ ಇತ್ತು ಎನ್ನಲಾಗಿದೆ. ಆಂಗ್ಲ ಮಾಧ್ಯಮದ ವೃತ್ತಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸೋಂಕಿನಿಂದ ಸಾವನ್ನಪ್ಪಿದವರಲ್ಲಿ ಕೆಲವರು ಆರೋಗ್ಯ ಕ್ಷೀಣಿಸಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಕೋವಿಡ್ (Covid-19) ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ್ ಆರ್. ಬಾಬು (Giridhar R. Babu), "ದೇಶದ ಜನಸಂಖ್ಯೆಯ ಮೇಲೆ, ಅದರಲ್ಲೂ ವಿಶೇಷವಾಗಿ ಯುವ ಜನರ ಮೇಲೆ ಕಂಡುಹಿಡಿಯಲಾಗದ ರೋಗಗಳ ಹೊರೆ ಇದೆ. ಇದಕ್ಕೆ ಸಂಬಂಧಿಸಿದಂತೆ ನಾವು ಸ್ವಲ್ಪ ಸಮಯದ ಹಿಂದೆಯೇ ಅಧ್ಯಯನ ನಡೆಸಿದ್ದೇವೆ ಮತ್ತು ಇದರಲ್ಲಿ ಬೆಂಗಳೂರಿನ ಐಟಿ ವೃತ್ತಿಪರರಿಗೆ ಅಧಿಕ ರಕ್ತದೊತ್ತಡ ಮತ್ತು ಹೈಪರ್ ಟೆನ್ಷನ್‌ನ ಇರುವುದು ಗಮನಕ್ಕೆ ಬಂದಿದ್ದು, ಅದು ಅವರಿಗೆ ತಿಳಿದಿರಲಿಲ್ಲ. ಇದಲ್ಲದೆ,  ರೋಗ ನಿರೋಧಕ ದುರ್ಬಲವಾಗಿರುವ  ಅಥವಾ ವೈರಸ್ ಸೋಂಕಿನ ಪ್ರತಿ ಅವರ ದೇಹ ತುಂಬಾ ದುರ್ಬಲವಾಗಿರುವ ಕಾರಣ ಅವರು ವೈರಸ್ ಸೋಂಕಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ- ಕರ್ನಾಟಕದಲ್ಲಿ ಒಂದೇ ದಿನದಲ್ಲಿ 39,047 ಕೊರೊನಾ ಪ್ರಕರಣಗಳು ದಾಖಲು

ಇನ್ನೊಂದೆಡೆ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ವೈರಾಲಾಜಿಸ್ಟ್  ವೈದ್ಯ ವಿ. ರವಿ, "ಸೋಂಕಿನ ಲಕ್ಷಣಗಳು ಬದಲಾಗಿವೆ. ಹೀಗಾಗಿ ಜನರು ಸಮಯ ವ್ಯರ್ಥ ಮಾಡದೇ ವೈದ್ಯರ ಸಲಹೆ ಪಡೆಯಬೇಕು, ಜ್ವರ, ಕೆಮ್ಮು ಹಾಗೂ ಶಾರೀರಿಕ ನೋವುಗಳ ಹೊರತಾಗಿ ಹೊಟ್ಟೆನೋವು, ಪ್ರಜ್ಞೆತಪ್ಪುವುದು ಹಾಗೂ ಲೂಸ್ ಮೋಶನ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ" ಎಂದಿದ್ದಾರೆ. 

ಇದನ್ನೂ ಓದಿ- "ಸರ್ಕಾರ ಪಾರದರ್ಶಕವಾಗಿಲ್ಲ, ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ" -ಸಿದ್ಧರಾಮಯ್ಯ

ಈ ಕುರಿತು ಮಾತನಾಡಿರುವ ಕೊವಿಡ್ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ. ಕೆ. ಸುದರ್ಶನ್, "ಯುವ ಜನರು ಕೊವಿಡ್ ವ್ಯವಹಾರಗಳ ಪ್ರತಿ ನಿರ್ಲಕ್ಷ ಧೋರಣೆ ತಳೆದಿರುವಂತೆ ಕಂಡುಬರುತ್ತಿದೆ. ಅಷ್ಟೇ ಅಲ್ಲ ಯುವ ಜನರು ತಮ್ಮ ಫಿಟ್ನೆಸ್ ಗೆ ಸಂಬಂಧಿಸಿದಂತೆ ಓವರ್ ಕಾನ್ಫಿಡೆಂಟ್ ಆಗಿದ್ದಾರೆ. ಆದರೆ, ಯುವ ಜನರ ಬಲಿ ಪಡೆಯಲು ಈ ವೈರಸ್ ಹೆಸರುವಾಸಿಯಾಗಿಲ್ಲ. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ ತಡಮಾಡುವಿಕೆ (ವೈಯಕ್ತಿಕ ಹಾಗೂ ವ್ಯವಸ್ಥಾತ್ಮಕವಾಗಿ) ಹಿನ್ನೆಲೆ ಪ್ರಭಾವ ಬೀರುತ್ತಿದೆ. ವಯಸ್ಸಿನ ಹಿನ್ನೆಲೆ ಇವರಿಗೆ ಯಾವುದೇ ರೋಗ ಪ್ರತಿರೋಧಕ ಶಕ್ತಿ ಸಿಗುವುದಿಲ್ಲ. ಹೀಗಾಗಿ ಈ ಜನರು ವೃದ್ಧರ ರೀತಿಯೇ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ" ಎಂದಿದ್ದಾರೆ.

ಇದನ್ನೂ ಓದಿ- "ಕರ್ನಾಟಕದ ಪರಿಸ್ಥಿತಿ ಗಂಭೀರ, ಸಿಎಂ ಜನರನ್ನು ನಡು ನೀರಲ್ಲಿ ಕೈಬಿಟ್ಟಿದ್ದಾರೆ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News