ಈ ನಾಲ್ಕು ಆಹಾರದ ಬಗ್ಗೆ ಇರಲಿ ಎಚ್ಚರ..! ಜೀವಕ್ಕೇ ತರಬಹುದು ಕುತ್ತು

ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ, ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರಗಳನ್ನು ತಿಂದು ಬಿಡುತ್ತೇವೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಹಣ್ಣು, ತರಕಾರಿ, ಬೀಜ ಅಥವಾ ಮಸಾಲೆ ಕೂಡಾ ಆರೋಗ್ಯಕ್ಕೆ ಮುಳುವಾಗಬಹುದು.
 

Foods harmful for health: ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಕೇಳಿರಬಹುದು. ಉತ್ತಮ  ಆರೋಗ್ಯವಿದ್ದರೆ (Health) ಸಿರಿವಂತನೇ ಸರಿ. ಉತ್ತಮ ಆರೋಗ್ಯ ಬೇಕಾದರೆ ನಾವು ಸೇವಿಸುವ ಆಹಾರ ಕೂಡಾ ಅಷ್ಟೇ ಮುಖ್ಯ. ಏನು ತಿನ್ನುತ್ತೇವೆ, ಏನು ಕುಡಿಯುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ನೀವು ನಿಮ್ಮ  ಡಯೆಟ್ (Diet) ನಲ್ಲಿ ಅನೇಕ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳುತ್ತೀರಿ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ, ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರಗಳನ್ನು ತಿಂದು ಬಿಡುತ್ತೇವೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಹಣ್ಣು (Fruits) , ತರಕಾರಿ, ಬೀಜ ಅಥವಾ ಮಸಾಲೆ ಕೂಡಾ ಆರೋಗ್ಯಕ್ಕೆ ಮುಳುವಾಗಬಹುದು.  ಆ ಕೆಲವು ಆಹಾರ ಯಾವುದು ಎನ್ನುವುದನ್ನು ನಾವು ಹೇಳುತ್ತೇವೆ..
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ನೀವು ಮಾರುಕಟ್ಟೆಯಿಂದ ಪ್ಯಾಕ್ ಮಾಡಿಟ್ಟಿರುವ ಬಿಳಿ ಅಣಬೆಗಳನ್ನು ಖರೀದಿಸಿರಬಹುದು. ಈ ಅಣಬೆಗಳನ್ನು ಕೂಡಾ ಹೆಚ್ಚು ದಿನ ಉಳಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಣಬೆಯಲ್ಲೂ ಅನೇಕ ವಿಧಗಳಿವೆ. ಕಾಡು ಅಣಬೆಗಳು ಆರೋಗ್ಯಕ್ಕೆ ಹಾನಿಕಾರಕ. ಇದರ ಸೇವನೆಯು ಅತಿಸಾರ, ಹೊಟ್ಟೆ ನೋವು, ಅಲರ್ಜಿ, ವಾಂತಿ, ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ತೊಂದರೆಗಳಿಗೆ ಕಾರಣವಾಗಬಹುದು.      

2 /4

ಆಲೂಗಡ್ಡೆ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ತರಕಾರಿ. ಕೆಲವರಿಗಂತೂ ಆಲುಗಡ್ಡೆಯಿಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ.   ನೀವು ತಂದಿರುವ ಆಲುಗಡ್ಡೆಯಲ್ಲಿ ಎಷ್ಟೋ ಸಲ ಹಸಿರು ಆಲುಗಡ್ಡೆ ನೇರಳೆ ಬಣ್ಣಕ್ಕೆ ತಿರುಗಿದ ಆಲುಗಡ್ಡೆಯನ್ನು ನೋಡಿರಬಹುದು. ಈ ಆಲುಗಡ್ಡೆಗಳನ್ನು ತಿನ್ನುವುದು ಕೂಡಾ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಗಣಿಸಬಹುದು.  ಹಸಿರು ಆಲೂಗಡ್ಡೆ ಗ್ಲೈಕೋಸೈಡ್ಸ್ ಎಂಬ ವಿಷಕಾರಿ ವಸ್ತುವನ್ನು ಹೊಂದಿರುತ್ತದೆ. ಇದು ಹೊಟ್ಟೆ ಮತ್ತು ತಲೆನೋವು, ವಾಕರಿಕೆ, ಅತಿಸಾರ, ವಾಂತಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.

3 /4

ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇದರ ಬೀಜವನ್ನು ಖಂಡಿತವಾಗಿಯೂ ಸೇವಿಸಬಾರದು. ಸೇಬು ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅದರ ಬೀಜ ಅಷ್ಟೇ ಹಾನಿಕಾರಕವಾಗಿರುತ್ತದೆ. ಸೇಬು ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಅದಕ್ಕೆ ಈ ಬೀಜಗಳಲ್ಲಿನ ಸೈನೈಡ್ ಕಾರಣ.  ಇದು ದೇಹಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. 

4 /4

ದಾಲ್ಚಿನ್ನಿ ಅಥವಾ ಚಕ್ಕೆ ಇದೊಂದು ಮಸಾಲೆ ಪದಾರ್ಥ. ಇದು ಆರೋಗ್ಯಕರ ಮಸಾಲೆ. ಆದರೆ ಅದರ ಪುಡಿ ಮೂಗು ಅಥವಾ ಉಸಿರಾಟದ ಮೂಲಕ ದೇಹವನ್ನು ತಲುಪಿದರೆ, ಉರಿ ತಡೆಯುವುದು ಕಷ್ಟ. ಶ್ವಾಸಕೋಶದ ಅಸ್ವಸ್ಥತೆ ಕೂಡಾ ಸಂಭವಿಸಬಹುದು.