Murder Case: Olympic Medalist ಪೈಲ್ವಾನ್ ಸುಶೀಲ್ ಕುಮಾರ್ ಬಂಧನ

Wrestler Sushil Kumar Arrested - ಸಾಗರ್ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಅವರ ಸಹಚರ ಅಜಯ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈಗ ಇಬ್ಬರನ್ನೂ ರಾಷ್ಟ್ರ ರಾಜಧಾನಿಗೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.  

Written by - Nitin Tabib | Last Updated : May 22, 2021, 10:32 PM IST
  • ಸಾಗರ್ ಧನ್ಕಡ ಹತ್ಯೆಯ ಆರೋಪಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ ಬಂಧನ.
  • ಕೆಲ ದಿನಗಳ ಹಿಂದೆಯಷ್ಟೇ ಸುಶೀಲ್ ಕುಮಾರ್ ವಿರುದ್ದ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು.
  • ಸದ್ಯ ಅವರನ್ನು ದೆಹಲಿಗೆ ಕರೆತರಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
Murder Case: Olympic Medalist ಪೈಲ್ವಾನ್ ಸುಶೀಲ್ ಕುಮಾರ್ ಬಂಧನ title=
Sagar Murder Case(File Photo)

ನವದೆಹಲಿ: Wrestler Sushil Kumar Arrested - ಕುಸ್ತಿಪಟು ಸಾಗರ್ ಧಂಕಡ್ (Sagar Murder Case) ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಮತ್ತು ಆರೋಪಿ ಸುಶೀಲ್ ಕುಮಾರ್ (Sushil Kumar) ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸುಶೀಲ್ ಕುಮಾರ್ ತನ್ನ ಸಹಚರ ಅಜಯ್ ಜೊತೆ ತಲೆಮರೆಸಿಕೊಂಡಿದ್ದ ಪಂಜಾಬ್ ನಿಂದ ಈ ಬಂಧನವಾಗಿದೆ. ಇದೀಗ ಅವರನ್ನು ದೆಹಲಿಗೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಆಂತರಿಕ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಾಲಯ
ಅಂತರಾಷ್ಟ್ರೀಯ ಕುಸ್ತಿಪಟು ಸುಶೀಲ್ (Sushil Kumar News), ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ  ಭಾಗಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದ. ದೆಹಲಿ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡಲು ಇತ್ತೀಚೆಗೆ ನಿರಾಕರಿಸಿತ್ತು. ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಸುಶೀಲ್ ಮಂಗಳವಾರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಇದನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಳೆದ ಹಲವು ದಿನಗಳಿಂದ ಪೈಲ್ವಾನ್ ಸುಶೀಲ್ ಕುಮಾರ್ ಪರಾರಿಯಾಗಿದ್ದರು.

ಮೇ 15ರಂದು ಜಾರಿಯಾಗಿತ್ತು ಲುಕ್ ಔಟ್ ನೋಟಿಸ್
ಪೈಲ್ವಾನ್ ಸಾಗರ್ ಧಂಕಡ ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಘೋಷಿಸಿದ ಬಳಿಕ ಮೇ 4 ರಂದು ಸುಶೀಲ್ ಕುಮಾರ್ ನಾಪತ್ತೆಯಾಗಿದ್ದರು. ಆ ಬಳಿಕ ಅವರ ಕುರಿತು ಫೀಡ್ ಬ್ಯಾಕ್ ಪಡೆಯಲು ಹಾಗೂ ಸೂಚನೆ ನೀಡಿದವರಿಗೆ ದೆಹಲಿ ಪೊಲೀಸರು ಒಂದು ಲಕ್ಷ ರೂ.ಬಹುಮಾನ ಘೋಷಿಸಿದ್ದರು. ಇದಾದ ಬಳಿಕ ಸುಶೀಲ್ ಕುಮಾರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ಮೇ 15 ರಂದು ಪೊಲೀಸರು ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರು. ಕಳೆದ ವಾರವಷ್ಟೇ ದೆಹಲಿ ಲೀಸರು ಸುಶೀಲ್ ಕುಮಾರ್ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಜಾರಿಗೊಳಿಸಿದ್ದರು. 

ಇದನ್ನೂ ಓದಿ-Funny Viral Video: Coronavirus ಹೊಡೆದೋಡಿಸು ಈ Viral Video ವೀಕ್ಷಿಸಲು ಮರೆಯಬೇಡಿ

ಫೋನ್ ನಂಬರ್ ಬದಲಾಯಿಸಿ, ಇಂಟರ್ನೆಟ್ ಮೂಲಕ ಕರೆ ಮಾಡುತ್ತಿದ್ದ
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಸಿಕ್ಕಿಹಾಕಿಕೊಳ್ಳುವ ಭಯದ ಹಿನ್ನೆಲೆ ಸುಶೀಲ್ ಕುಮಾರ್ ನಿರಂತರವಾಗಿ ತನ್ನ ಸ್ಥಳ ಬದಲಾಯಿಸುತ್ತಿದ್ದ ಎಂದು ಹೇಳಿದ್ದಾರೆ. ಸುಶೀಲ್ ತನ್ನ ಮೊಬೈಲ್ ಸಂಖ್ಯೆಯನ್ನು ಸಹ ಬದಲಾಯಿಸಿ, ಹೊಸ ಸಿಮ್ ಮೂಲಕ ಇಂಟರ್ನೆಟ್ ಕರೆಗಳನ್ನು ಮಾಡಲು ಆರಂಭಿಸಿದ್ದರು. ಇದೆ ಕಾರಣದಿಂದ ಸುಶೀಲ್ ಪೋಲೀಸರ ಕೈಗೆ ಸಿಕ್ಕಿರಲಿಲ್ಲ. ಆದರೆ, ಸುಶೀಲ್ ನ ಈ ಕುತಂತ್ರ ಹೆಚ್ಚು ಕಾಲ ನಡೆಯಲಿಲ್ಲ ಹಾಗೂ ದೆಹಲಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ- Fixed Deposit ಹೊಂದಿದವರು ಜೂನ್ 30ರೊಳಗೆ ಈ ಫಾರ್ಮ್ ಸಲ್ಲಿಸಿ, ಇಲ್ಲದಿದ್ದರೆ ಹಾನಿ ತಪ್ಪಿದ್ದಲ್ಲ

ಕುಸ್ತಿ ಸೂಪರ್ ಸ್ಟಾರ್ ದೇಶದ ಮೋಸ್ಟ ವಾಂಟೆಡ್ ಆಗಿದ್ಹೆಗೆ?
ಮೇ 4ರಂದು  ಪೈಲ್ವಾನ್ ಸಾಗರ್ ಧನ್ಕಡ ಹಾಗೂ ಆತನ ಸ್ನೇಹಿತರ ಮೇಲೆ ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ದಾಳಿ ನಡೆದಿತ್ತು. ಈ ವೇಳೆ ಅವರ ಮೇಲೆ ಭಾರಿ ಹಲ್ಲೆ ನಡೆಸಲಾಗಿತ್ತು. ಈ ಹಲ್ಲೆಯಲ್ಲಿ ಸಾಗರ್ ಧನ್ಕಡ ಮೃತಪಟ್ಟಿದ್ದರು. ಆ ಬಳಿಕ ಸುಶೀಲ್ ಕುಮಾರ್ ಹಾಗೂ ಅವರ ಸಹಪಾತಿಗಳ ಮೇಲೆ ಹತ್ಯೆಯ ಆರೋಪ ಹೊರಸಲಾಗಿತ್ತು. ಈ ಘಟನೆಯ ಬಳಿಕ ವಿಡಿಯೋವೊಂದು ಕೂಡ ಬಹಿರಂಗಗೊಂಡಿತ್ತು. ಈ ವಿಡಿಯೋದಲ್ಲಿ ಧನ್ಕಡ ಹತ್ಯೆಯ ಬಳಿಕ ಸುಶೀಲ್ ಕುಮಾರ್ ಛತ್ರಸಾಲ್ ಕ್ರೀಡಾಂಗಣದಿಂದ ಹೊರಹೋಗುತ್ತಿರುವುದನ್ನು ಗಮನಿಸಲಾಗಿದೆ. ಅಂದರೆ, ಹತ್ಯೆಯ ವೇಳೆ ಅವರು ಕ್ರೀಡಾಂಗಣದಲ್ಲಿಯೇ ಉಪಸ್ಥಿತರಿದ್ದರು ಎನ್ನಲಾಗಿದೆ.

ಇದನ್ನೂ ಓದಿ-8th Pay Commission ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಉಪಯುಕ್ತ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News