Cloths Have No Gender - ಈ ದೇಶದಲ್ಲಿ ಸ್ಕರ್ಟ್ ಧರಿಸಿ ಶಾಲೆಗೆ ಬರುತ್ತಿದ್ದಾರಂತೆ ಪುರುಷ ಶಿಕ್ಷಕರು, ಕಾರಣ ತುಂಬಾ ಸ್ವಾರಸ್ಯಕರವಾಗಿದೆ

 ಸಾಮಾಜಿಕ ಮಾಧ್ಯಮಗಳಲ್ಲಿ ಯಾವಾಗಲು ವಿವಿಧ ರೀತಿಯ ಕ್ಯಾಂಪೇನ್ ಗಳು ನಡೆಯುತ್ತಲೇ ಇರುತ್ತವೆ. ಇಂತಹುದೇ ಒಂದು ಕ್ಯಾಂಪೇನ್ ಸ್ಪೇನ್ (Spain)  ನಲ್ಲಿ ನಡೆಯುತ್ತಿದೆ. ಅಲ್ಲಿನ ಶಾಲಾ ಸ್ಖಿಕ್ಷಕರು ಸ್ಕರ್ಟ್ (Skirts)  ಧರಿಸಿ ಶಾಲೆಗೇ ಬರಲು ಆರಂಭಿಸಿದ್ದಾರೆ. ಸ್ಪೇನ್ ದೇಶಾದ್ಯಂತ ಈ ಕ್ಯಾಂಪೇನ್ ಆಂದೋಲನದ ರೂಪ ಪಡೆದುಕೊಂಡಿದೆ.

Male Teachers Wear Skirts Across Spain: ಸಾಮಾಜಿಕ ಮಾಧ್ಯಮಗಳಲ್ಲಿ ಯಾವಾಗಲು ವಿವಿಧ ರೀತಿಯ ಕ್ಯಾಂಪೇನ್ ಗಳು ನಡೆಯುತ್ತಲೇ ಇರುತ್ತವೆ. ಇಂತಹುದೇ ಒಂದು ಕ್ಯಾಂಪೇನ್ ಸ್ಪೇನ್ (Spain)  ನಲ್ಲಿ ನಡೆಯುತ್ತಿದೆ. ಅಲ್ಲಿನ ಶಾಲಾ ಸ್ಖಿಕ್ಷಕರು ಸ್ಕರ್ಟ್ (Skirts)  ಧರಿಸಿ ಶಾಲೆಗೇ ಬರಲು ಆರಂಭಿಸಿದ್ದಾರೆ. ಸ್ಪೇನ್ ದೇಶಾದ್ಯಂತ ಈ ಕ್ಯಾಂಪೇನ್ ಆಂದೋಲನದ ರೂಪ ಪಡೆದುಕೊಂಡಿದೆ.

 

ಇದನ್ನೂ ಓದಿ- Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಸ್ಕರ್ಟ್ ಧರಿಸಿ ಶಾಲೆಗೆ ಏಕೆ ಬರುತ್ತಿದ್ದಾರೆ ಶಿಕ್ಷಕರು - 'ಡೈಲಿ ಮೇಲ್'ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಅಕ್ಟೋಬರ್ 2020ರಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಗೇ ಸ್ಕರ್ಟ್ ಧರಿಸಿ ಬಂದ ಕಾರಣ ಆತನನ್ನು ಕ್ಲಾಸ್ ನಿಂದ ಹೊರಹಾಕಲಾಗಿತ್ತು. ಜೊತೆಗೆ ಆತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿ ಮನೋವೈದ್ಯರ ಬಳಿ ಕಳುಹಿಸಲಾಗಿತ್ತು. ಇದೀಗ ಆ ವಿದ್ಯಾರ್ಥಿಯನ್ನು ಬೆಂಬಲಿಸಿರುವ ಶಿಕ್ಷಕರು ಇಡೀ ದೇಶಾದ್ಯಂತ ಕ್ಯಾಂಪೇನ್ ನಡೆಸುತ್ತಿದ್ದಾರೆ. ಕೇವಲ ಶಿಕ್ಷಕರಷ್ಟೇ ಅಲ್ಲ ಬೇರೆ ಜನರು ಕೂಡ ಸ್ಕರ್ಟ್ ಧರಿಸುತ್ತಿದ್ದಾರೆ.

2 /5

2. ದಿ ಕ್ಲಾಥ್ಸ್ ಹ್ಯಾವ್ ನೋ ಜೆಂಡರ್ - ಜೆಂಡರ್ ಏಕ್ವಾಲಿಟಿಯನ್ನು ಬೆಂಬಲಿಸಿ (Gender Equality Movement) ಈ ಆಂದೋಲನವನ್ನು ನಡೆಸಲಾಗುತ್ತಿದೆ ಹಾಗೂ ಇದೀಗ ಸಂಪೂರ್ಣ ಸ್ಪೇನ್ ನಲ್ಲಿ 'ದಿ ಕ್ಲಾತ್ಸ್ ಹ್ಯಾವ್ ನೋ ಜೆಂಡರ್' ಕ್ಯಾಂಪೇನ್ ನಡೆಸಲಾಗುತ್ತಿದೆ. ಸದ್ಯ ಈ ಕ್ಯಾಂಪೇನ್ ಗೆ ದೇಶಾದ್ಯಂತದ ಜನರಿಂದ ಬೆಂಬಲ ಸಿಗುತ್ತಿದೆ.

3 /5

3. ಸ್ಕರ್ಟ್ ಧರಿಸಿ ವಿದ್ಯಾರ್ಥಿ ಶಾಲೆಗೇ ಏಕೆ ಬಂದಿದ್ದ - ಶಾಲೆಯಿಂದ ಹೊರಹಾಕಲಾದ ಬಳಿಕ ವಿದ್ಯಾರ್ಥಿ ತನ್ನ ಕಥೆಯನ್ನು ಟಿಕ್ ಟಾಕ್  (TikTok)  ಮೂಲಕ ಹಂಚಿಕೊಂಡಿದ್ದಾನೆ ಹಾಗೂ ಈ ರೀತಿ ಮಾಡುವುದರ ಮೂಲಕ ತಾನು ಮಹಿಳಾವಾದ ಹಾಗೂ ವಿವಿಧತೆಯನ್ನು ಬೆಂಬಲಿಸಿದ್ದೆ ಎಂದಿದ್ದಾನೆ.

4 /5

4. ಕ್ಯಾಂಪೇನ್ ಆರಂಭಿಸಿದ್ದು ಯಾರು? -  ಸ್ಕರ್ಟ್ ಧರಿಸಿದ ಕಾರಣ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಲಾದ ಬಳಿಕ ಮಾಥ್ಸ್ ಟೀಚರ್ ಆಗಿರುವ ಜೋಸ್ ಪಿನಾಸ್ ನವೆಂಬರ್ ತಿಂಗಳಿನಲ್ಲಿ 'ದಿ ಕ್ಲಾತ್ಸ್ ಹ್ಯಾವ್ ನೋ ಜೆಂಡರ್' (#LaRopaNoTieneGenero) ಕ್ಯಾಂಪೇನ್ ಆರಂಭಿಸಿದ್ದರು. ಆದರೆ, ಕಳೆದ ತಿಂಗಳು ವಿರ್ಜೆನ್ ಡಿ ಸೆಸೆಡಾನ್ ಪ್ರೈಮರಿ ಸ್ಕೂಲ್ ಟೀಚರ್ ಗಳಾದ ಮ್ಯಾನ್ಯುಯೆಲ್ ಒರ್ಟೇಗಾ ಹಾಗೂ ಬೋರಜಾ ವೆಲ್ಲಾಕ್ಕೆಜ್ ಶಾಲೆಗೇ ಸ್ಕರ್ಟ್ ಧರಿಸಿ ಬಂದ ಬಳಿಕ ಈ ಆಂದೋಲನ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. 

5 /5

5. ಕಳೆದ ಒಂದು ತಿಂಗಳಿನಿಂದ ಸ್ಕರ್ಟ್ ಧರಿಸಿ ಶಾಲೆಗೇ ಬರುತ್ತಿದ್ದಾರೆ ಶಿಕ್ಷಕರು - ಈ ಕುರಿತು ಮಾತನಾಡಿರುವ 37 ವರ್ಷದ ಮ್ಯಾನ್ಯುಯೇಲ್ (Mr Ortega) ಹಾಗೂ 36 ವರ್ಷದ ಬೋರ್ಜಾ ವೇಲಾಕ್ಕೊಜ್ (Mr Velazquez), ಕಳೆದ ಒಂದು ತಿಂಗಳಿನಿಂದ ನಾವು ಶಾಲೆಗೇ ಸ್ಕರ್ಟ್ ಧರಿಸಿ ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಆಂದೋಲನವನ್ನು ಆರಂಭಿಸಿದ ಜೋಸ್ ಪಿನಾಸ್ (Jose Pinas), ಕಳೆದ ವರ್ಷದಿಂದಲೇ ಶಾಲೆಗೆ ಸ್ಕರ್ಟ್ ಧರಿಸಿ ಬರುತ್ತಿದ್ದಾರೆ. ಚೀಪ್ ಪಬ್ಲಿಸಿಟಿ ಪಡೆಯುವುದು ಇದರ ಹಿಂದಿನ ಉದ್ದೇಶವಾಗಿರದೇ ಲೈಂಗಿಕ ತಾರತಮ್ಯ ನಿವಾರಣೆಯ ಒಂದು ಪ್ರಯತ್ನ ಇದಾಗಿದೆ ಎನ್ನುತ್ತಾರೆ.