ನವದೆಹಲಿ: PM Modi Morphed Photo - ಪ್ರಸಾರ ಭಾರತಿ ಮಾಜಿ CEO ಜವಾಹರ್ ಸರ್ಕಾರ್ (Prasar Bharti Former CEO Jawahar Sircar) ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಫೇಕ್ ಫೋಟೋ ಹಂಚಿಕೊಂಡಿದ್ದಾರೆ. ಆದರೆ, ಬಳಿಕ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ಟ್ರೋಲ್ ಗೆ ಒಳಗಾದ ಹಿನ್ನೆಲೆ, ಜವಾಹರ್ ಸರ್ಕಾರ್ ಆ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಆದರೆ, ಇದುವರೆಗೆ ಹಲವು ಜನರು ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ.
ಪ್ರಕರಣ ಏನು?
ಪ್ರಸಾರ ಭಾರತಿ ಮಾಜಿ ಸಿಇಓ (Prasar Bharti Former CEO) ಜವಾಹರ ಸರ್ಕಾರ್ (Jawahar Sircar), ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಫೋಟೋದಲ್ಲಿ, ಪ್ರಧಾನಿ ಮೋದಿ ನೀತಾ ಅಂಬಾನಿ ಮುಂದೆ ಕೈಜೋಡಿಸಿ ನಿಂತಿರುವುದು ಕಂಡು ಬರುತ್ತಿದೆ. ಅಷ್ಟೇ ಅಲ್ಲ ಜವಾಹರ್ ಅದಕ್ಕೆ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ತಮ್ಮ ಅಡಿಬರಹದಲ್ಲಿ ಅವರು, ' ಸಹ ಸಂಸದರು ಹಾಗೂ ರಾಜನೀತಿಯಲ್ಲಿರುವ ಇತರೆ ವ್ಯಕ್ತಿಗಳಿಗೂ ಕೂಡ ಪ್ರಧಾನಿಯಿಂದ ಇಂತಹ ಶಿಷ್ಟಾಚಾರ ದೊರೆಯಬೇಕು. ಪ್ರಭುದ್ಧ ಪ್ರಜಾಪ್ರಭುತ್ವದಲ್ಲಿ, ನಾವು ಎರಡು ಕಡೆಗಳಿಂದ ಸಂಬಂಧ, ಉಪಕಾರ, ವ್ಯವಹಾರಕ್ಕಾಗಿ ಗುರುತಿಸುವೆವು. ಒಂದು ದಿನ ಇತಿಹಾಸ ಅದನ್ನು ನಮಗೆ ಹೇಳಲಿದೆ' ಎಂದಿದ್ದರು.
ಇಲ್ಲಿದೆ ನಿಜಾಂಶ
ಜವಾಹರ್ ಸರ್ಕಾರ್ (Jawahar Sircar) ಹಂಚಿಕೊಂಡಿರುವ ಫೋಟೋ ಒಂದು ಮಾರ್ಫಡ್ ಫೋಟೋ (Morphed Photo) ಆಗಿದೆ. ಅಂದರೆ, ಬೇರೊಬ್ಬರ ಜಾಗದಲ್ಲಿ ನೀತಾ ಅಂಬಾನಿ ಮುಖವನ್ನು ಅಂಟಿಸಲಾಗಿದೆ. ಈ ಫೋಟೋ NGO ಸಂಚಾಲಕಿ ದೀಪಿಕಾ ಮಂಡಲ್ ಗೆ ಸಂಬಂಧಿಸಿದೆ. ಫೋಟೋದಲ್ಲಿ ಪ್ರಧಾನಿ ಮೋದಿ ಅವರು ದೀಪಿಕಾ ಮಂಡಲ್ (Deepika Mandal) ಅವರಿಗೆ ತಲೆಬಾಗಿ ನಮಸ್ಕರಿಸುತ್ತಿದ್ದಾರೆ. ಆದರೆ, ದೀಪಿಕಾ ಅವರ ಮುಖದ ಜಾಗದಲ್ಲಿ ನೀತಾ ಅಂಬಾನಿ (Nita Ambani) ಮುಖ ಅಂಟಿಸಿ, ಫೋಟೋ ಅನ್ನು ವೈರಲ್ (PM Modi Viral Photo) ಮಾಡಲಾಗುತ್ತಿತ್ತು.
ಸರ್ಕಾರ್ ವಿರುದ್ಧ ಭಾರಿ ಟೀಕೆ
ಇನ್ನೊಂದೆಡೆ ಈ ಫೋಟೋ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಕ್ಕಾಗಿ ಜನರು ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರ್ ವಿರುದ್ಧ ಭಾರಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಾ ರಾಮಮೋಹನ್ ಲೈಬ್ರರಿ ಫೌಂಡೇಶನ್ (Raja Ramohan Liberary Foundation ) ಅಧ್ಯಕ್ಷರಾಗಿರುವ ಕಂಚನ್ ಗುಪ್ತಾ (Kanchan Gupta), ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಯಾಗಿರುವ ಒಬ್ಬರು ತಿಳುವಳಿಕೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಮಸಿಬಳೆಯುವ ಉದ್ದೇಶದಿಂದ ಮಾರ್ಫಡ್ ಫೋಟೋಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, " Manipulated Media ಹಾಗೂ Fake News ಹರಡುವ ಇಂತಹ ಜನರಿಗೆ ವಿಶ್ವಾಸಾರ್ಹತೆಯನ್ನು ಒದಗಿಸಲು Twitter 'ಬ್ಲೂ ಟಿಕ್ (Blue Tick)' ಪುರಸ್ಕಾರ (Award) ನೀಡುತ್ತದೆ " ಎಂದು ಹೇಳಿದ್ದಾರೆ.
A former Secretary to Govt of India is intentionally tweeting morphed images to slander PM Modi.@Twitter provides a platform for #ManipulatedMedia and rewards such folks with a ‘Blue Tick’ to lend credibility to #FakeNews
This is how @manishm does the bidding of @jack Company. pic.twitter.com/0kOcb1bpbP— Kanchan Gupta (@KanchanGupta) June 7, 2021
ಇದನ್ನೂ ಓದಿ- 7th Pay Commission: Dearness Allowance ಸಂಬಂಧಿಸಿದಂತೆ ಇಲ್ಲಿದೆ ಒಂದು ಪ್ರಮುಖ ಮಾಹಿತಿ
ಕನ್ನಡಿ ತೋರಿಸಿದ ಟ್ವಿಟ್ಟರ್ ಬಳಕೆದಾರರು
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಕುರ್ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು, ಜವಾಹರ್, ಪ್ರಧಾನಿ ಮೋದಿ (PM Modi)ಅವರ ಫೇಕ್ ಫೋಟೋ (Fake Phot) ಹಂಚಿಕೊಂಡಿದ್ದಾರೆ. ಇದು ಯಾವ ರೀತಿಯ ಡರ್ಟಿ ಪ್ರಾಪಗೆಂಡಾ (Dirty Propaganda) ಆಗಿದೆ ಎಂಬುದನ್ನು ನೀವೇ ಊಹಿಸಬೇಕು ಎಂದಿದ್ದಾರೆ. ಬಳಿಕ ಅವರು ಈ ಫೋಟೋದ ಒರಿಜಿಜನ್ ಕಾಪಿ ಹಂಚಿಕೊಂಡು ಫೋಟೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯ ನಿಜವಾದ ಹೆಸರು ದೀಪಿಕಾ ಮಂಡಲ್ ಆಗಿದ್ದು, ಅವರು NGOವೊಂದನ್ನು ನಡೆಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
This bigot @jawharsircar sharing edited picture of PM Modi was CEO of Prasar Bharti during Congress. Imagine the filthy propaganda he must be running.
This is the real image. The lady is Deepika Mondol who runs an NGO. https://t.co/LyzxcNvm6s pic.twitter.com/Q2DxaxQuAG
— Ankur Singh (@iAnkurSingh) June 7, 2021
ಇದನ್ನೂ ಓದಿ-EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...
ಜವಾಹರ್ ವತಿಯಿಂದ ಮತ್ತೊಂದು ಟ್ವೀಟ್
ಮೊದಲ ಟ್ವೀಟ್ ಅನ್ನು ಡಿಲೀಟ್ ಮಾಡಿರುವ ಜವಾಹರ್ ಸರ್ಕಾರ ಸುಮ್ಮನೆ ಕುಳಿತಿಲ್ಲ. ಮತ್ತೊಂದು ಟ್ವೀಟ್ ಮಾಡಿದ್ದಾರೆ. ತಮ್ಮ ಎರಡನೇ ಟ್ವೀಟ್ ನಲ್ಲಿ ಅವರು 'Forsyth ನ ಕ್ಲಾಸಿಕ್ 'ಡಾಗ್ಸ್ ಆಫ್ ವಾರ್' DoW, 1980 ರಲ್ಲಿನ ಹಿಟ್ ಚಿತ್ರವಾಗಿತ್ತು. ನನಗೆ ಮೋದಿ ಅವರ ಎರಡು ಫೋಟೋಗಳನ್ನು ಫೇಕ್ ಮಾಡಿಸಿದ ಅವಧಿಯಲ್ಲಿ 'ಭಯಾನಕ ಅನುಭವ ' ಉಂಟಾಗಿದೆ. ಆದರೆ, ಅತ್ಯಂತ ಶ್ರೀಮಂತ ಗುಜರಾತಿ ಜನರ ಜೊತೆಗಿನ ಮೋದಿ ಸಂಬಂಧ + ಮೋದಿ ಕಾಲದಲ್ಲಿ ಅವರ ಆದಾಯ ವೃದ್ಧಿ + ಅವರೊಂದಿಗಿನ ಒಡನಾಟ ಫೇಕ್ ಅಲ್ಲ' ಎಂದಿದ್ದಾರೆ.
Forsyth’s classic ‘Dogs of War’ DoW became hit movie in 1980. Ihad terrible experience as 2 photos of Modi r claimed as fake. What’s not fake are his deep bonds with richest Gujs + their incredible growth in his tenure + bonhomie for them. Wonder what crass DoW will now bark? pic.twitter.com/hITgU1kjfC
— Jawhar Sircar (@jawharsircar) June 7, 2021
ಇದನ್ನೂ ಓದಿ-Delhi Unlock : ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ನಿಯಮ ಸಡಿಲಿಕೆ : ಸಿಎಂ ಕೇಜ್ರಿವಾಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.