Vitamin K Deficiency Symptoms: ವಿಟಮಿನ್ 'ಕೆ' ಕೊರತೆಯಿದ್ದಾಗ ಕಂಡುಬರುವ ಲಕ್ಷಣಗಳಿವು

ಈ ವಿಟಮಿನ್ ಕೊರತೆಯಿಂದಾಗಿ, ದೇಹದಲ್ಲಿ ಅನೇಕ ರೀತಿಯ ಲಕ್ಷಣಗಳು ಹೊರಹೊಮ್ಮುತ್ತವೆ. ಈ ರೋಗಲಕ್ಷಣಗಳಿಗೆ ಗಮನ ಕೊಡುವುದರ ಮೂಲಕ, ಅದಕ್ಕೆ ಸಂಬಂಧಿಸಿ ರಕ್ತ ಪರೀಕ್ಷೆಯನ್ನು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

Written by - Yashaswini V | Last Updated : Jun 10, 2021, 03:48 PM IST
  • ವಿಟಮಿನ್ ಕೆ ಮೂಳೆಗಳು, ಹೃದಯ, ಮೆದುಳಿನ ಸುಗಮ ಕಾರ್ಯನಿರ್ವಹಣೆಗೆ ಮುಖ್ಯವಾದ ಪೋಷಕಾಂಶವಾಗಿದೆ
  • ವಿಟಮಿನ್ ಕೆ ಎರಡು ರೂಪಗಳಲ್ಲಿ ಬರುತ್ತದೆ
  • ವಿಟಮಿನ್ 'ಕೆ' ಕೊರತೆಯ ಲಕ್ಷಣಗಳ ಬಗ್ಗೆ ತಿಳಿಯಿರಿ
Vitamin K Deficiency Symptoms: ವಿಟಮಿನ್ 'ಕೆ' ಕೊರತೆಯಿದ್ದಾಗ ಕಂಡುಬರುವ ಲಕ್ಷಣಗಳಿವು  title=
ವಿಟಮಿನ್ 'ಕೆ' ಕೊರತೆಯ ಲಕ್ಷಣಗಳಿವು

Vitamin K Deficiency Symptoms: ವಿಟಮಿನ್ 'ಕೆ' ಕೊರತೆಯು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರ ಕೊರತೆಯು ದೇಹದಲ್ಲಿ ರಕ್ತ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ವಿಟಮಿನ್ ಪುರುಷರು ಮತ್ತು ಮಹಿಳೆಯರು ಎಲ್ಲರಿಗೂ ಸಮಾನವಾಗಿ ಮುಖ್ಯವಾಗಿದೆ.

ಈ ವಿಟಮಿನ್ ಕೊರತೆಯಿಂದಾಗಿ, ದೇಹದಲ್ಲಿ ಅನೇಕ ರೀತಿಯ ಲಕ್ಷಣಗಳು ಹೊರಹೊಮ್ಮುತ್ತವೆ. ಈ ರೋಗಲಕ್ಷಣಗಳಿಗೆ ಗಮನ ಕೊಡುವುದರ ಮೂಲಕ, ಅದಕ್ಕೆ ಸಂಬಂಧಿಸಿ ರಕ್ತ ಪರೀಕ್ಷೆಯನ್ನು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಇದನ್ನೂ ಓದಿ - ಮೂಳೆ ಗಟ್ಟಿ ಇರಬೇಕಾದರೆ ನಿಮ್ಮ ಡಯಟ್ ನಲ್ಲಿರಲಿ ಈ ಆಹಾರ

ವಿಟಮಿನ್ ಕೆ ಎಂದರೇನು?
ಇದು ಮೂಳೆಗಳು (Bones), ಹೃದಯ, ಮೆದುಳಿನ ಸುಗಮ ಕಾರ್ಯನಿರ್ವಹಣೆಗೆ ಮುಖ್ಯವಾದ ಪೋಷಕಾಂಶವಾಗಿದೆ.

ವಿಟಮಿನ್ ಕೆ ಪ್ರಕಾರ ಯಾವುದು?
ವಿಟಮಿನ್ ಕೆ (Vitamin K) ಎರಡು ರೂಪಗಳಲ್ಲಿ ಬರುತ್ತದೆ - ವಿಟಮಿನ್ ಕೆ 1 (ಫಿಲೋಕ್ವಿನೋನ್). ಇದು ಮುಖ್ಯವಾಗಿ ಹಸಿರು ತರಕಾರಿಗಳಿಂದ ಲಭ್ಯವಾಗುತ್ತದೆ. ಎರಡನೆಯದು ವಿಟಮಿನ್ ಕೆ 2 (ಮೆನಾಕ್ವಿನೋನ್) ಇದು ದೇಹದೊಳಗಿನ ಕರುಳಿನಲ್ಲಿ ಉತ್ಪತ್ತಿಯಾಗುತ್ತದೆ.

ಇದನ್ನೂ ಓದಿ - face care tips : ಮುಖಕ್ಕೆ ಈ ಐದು ವಸ್ತುಗಳನ್ನು ಹಚ್ಚುವ ತಪ್ಪು ಎಂದೂ ಮಾಡಬೇಡಿ

ವಿಟಮಿನ್ 'ಕೆ' ಕೊರತೆಯ ಲಕ್ಷಣಗಳಿವು?
>> ಸ್ವಲ್ಪ ಗಾಯವಾದರೂ ಅತಿಯಾದ ರಕ್ತಸ್ರಾವವಾಗುವುದು 
>> ಮೂಗಿನಿಂದ ರಕ್ತಸ್ರಾವವಾಗುವುದು
>> ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ
>> ಮೂಳೆ ಸಾಂದ್ರತೆ ಕಡಿಮೆಯಾಗುವುದು (ಆಸ್ಟಿಯೊಪೊರೋಸಿಸ್ ಕೊರತೆಯಿದ್ದರೂ ಸಹ ಇದು ಸಂಭವಿಸಬಹುದು)
>> ಆಗಾಗ್ಗೆ ಕೀಲುಗಳು ಮತ್ತು ಮೂಳೆಗಳಲ್ಲಿ ನೋವು ಕಾಣಿಸುಕೊಳ್ಳುವುದು
>> ಸಣ್ಣ-ಪುಟ್ಟ ಗಾಯವೂ ಬೇಗ ಗುಣವಾಗುವುದಿಲ್ಲ
>> ಉಗುರಿನ ಕೆಳಗೆ ರೂಪುಗೊಳ್ಳುವ ಸಣ್ಣ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ
>> ಒಸಡುಗಳಲ್ಲಿ ರಕ್ತಸ್ರಾವ 
>> ವಯಸ್ಸಿಗೆ ಮುಂಚೆಯೇ ಹಲ್ಲುಗಳು ದುರ್ಬಲಗೊಳ್ಳುತ್ತವೆ ಅಥವಾ ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News