ಜಮ್ಮು-ಕಾಶ್ಮೀರ್: Jammu & Kashmir Terror Attack - ಸೊಪೋರ್ನ (Sopore) ಅರಂಪೋರಾದಲ್ಲಿ (Arampora) ಭಯೋತ್ಪಾದಕರು ಪೊಲೀಸ್ ಮತ್ತು ಸಿಆರ್ಪಿಎಫ್ (CRPF) ಜಂಟಿ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ ಮತ್ತು ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸೊಪೋರ್ನಲ್ಲಿ ನಡೆದ ಈ ದಾಳಿಯ ಹಿಂದೆ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (Lashkar-e-Toiba) ಕೈವಾಡವಿದೆ ಎಂದು ಕಾಶ್ಮೀರ ಐಜಿ ವಿಜಯ್ ಕುಮಾರ್ ಹೇಳಿದ್ದಾರೆ.
#UPDATE | Jammu & Kashmir | Two policemen and two civilians lost their lives in a terrorist attack in Sopore. Two other police personnel are injured. Lashkar-e-Taiba is behind this attack: Kashmir IG Vijay Kumar to ANI
(Visual deferred by unspecified time) pic.twitter.com/rWQIGiTX0a
— ANI (@ANI) June 12, 2021
ಇದನ್ನೂ ಓದಿ- Heavy Rain in Mumbai : ಮುಂಬೈನಲ್ಲಿ ನಾಳೆ-ನಾಡಿದ್ದು ಭಾರೀ ಮಳೆ ; ನಗರದಲ್ಲಿ 'ಹೈ ಅಲರ್ಟ್' ಘೋಷಣೆ!
ಜಮ್ಮು- ಕಾಶ್ಮೀರದ ವಿಭಜನೆಯ ಕುರಿತಾದ ಕೋಲಾಹಲಕ್ಕೆ ಪಾಕ್ ಅಸಮಾಧಾನ
ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಮರು ವಿಭಜನೆ ಮಾಡಿ ಮತ್ತು ಅದರ ಭೌಗೋಳಿಕ ಸ್ಥಳದಲ್ಲಿ ಬದಲಾವಣೆ ಮಾಡುತ್ತಿದೆ ಎಂಬ ವರದಿಗಳ ಹಿನ್ನೆಲೆ, ಪಾಕಿಸ್ತಾನ ಸಿಡಿಮಿಡಿಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಇಲಾಖೆ. 'ವಶಕ್ಕೆ ಪಡೆದಿರುವ ಯಾವುದೇ ಹೊಸ ಸಾಧನದ ಯಾವುದೇ ಕಾನೂನು ಪ್ರಭಾವ ಬೀರುವುದಿಲ್ಲ' ಎಂದಿದೆ . ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನ ಅಕ್ರಮವಾಗಿ ವಶಕ್ಕೆ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ಎಂದು ಕರೆಯುತ್ತದೆ.
ಇದನ್ನೂ ಓದಿ- ಬ್ಯಾಂಕ್ ಗ್ರಾಹಕರ ಗಮನಕ್ಕೆ : 'ATM' ಗೆ ಸಂಬಂಧಿಸಿದಂತೆ ಬದಲಾಗಲಿವೆ ಈ 5 ನಿಯಮಗಳು!
ಆಗಸ್ಟ್ 5, 2019 ರಂದು ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ (PM Narendra Modi Government) ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್ 370 (Artical 370) ಮತ್ತು 35 ಎ (35A) ಸೆಕ್ಷನ್ ಅನ್ನು ರದ್ದುಗೊಳಿಸಿತ್ತು. ಇದಾದ ಬಳಿಕ ಪಾಕಿಸ್ತಾನದ ಪಿತ್ತ ನೆತ್ತಿಗೇರಿದೆ. ಪಾಕಿಸ್ತಾನ ನಿತ್ಯ ಕೆಲವು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇದೆ ಮತ್ತು ಅದನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಮನವಿ ಮಾಡುತ್ತಲೇ ಇದೆ. ಆದರೆ, ಈ ವಿಷಯ ನಮ್ಮ ದೇಶದ ಆಂತರಿಕ ವಿಷಯವಾಗಿದೆ ಎಂದು ಭಾರತ ಅಂತಾರಾಷ್ಟ್ರೀಯ ಸಮುದಾಯಕ್ಕೆ (International Community) ಈಗಾಗಲೇ ಸ್ಪಷ್ಟಪಡಿಸಿದ್ದು ಅದರ ಮೇಲೆ ನಿರ್ಧರಿಸುವ ಸಂಪೂರ್ಣ ಸ್ವಾತಂತ್ರ್ಯ ಹೊಂದಿದೆ ಎಂದು ಹೇಳಿದೆ.
ಇದನ್ನೂ ಓದಿ-SBI- ಕರೋನಾ ಚಿಕಿತ್ಸೆಗಾಗಿ ಎಸ್ಬಿಐ ಗ್ರಾಹಕರಿಗೆ ಎದುರಾಗಲ್ಲ ಹಣದ ಸಮಸ್ಯೆ, ಬ್ಯಾಂಕ್ ನೀಡುತ್ತಿದೆ ಅಗ್ಗದ ಸಾಲ ಸೌಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.