ನವದೆಹಲಿ: E-Vehicles - ಎಲೆಕ್ಟ್ರಿಕ್ ವಾಹನಗಳಿಗೆ (E-Vehicles) ಉತ್ತೇಜನ ನೀಡುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ FAME-2 ಯೋಜನೆಗೆ (FAME-2 Scheme)ತಿದ್ದುಪಡಿ ತರುವ ಮೂಲಕ ಸರ್ಕಾರವು ಈ ವಾಹನಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ. ಹೀಗಾಗಿ ಇದೀಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರತಿ ಕಿಲೋವ್ಯಾಟ್ಗೆ ನೀಡಲಾಗುತ್ತಿದ್ದ 10 ಸಾವಿರ ರೂಪಾಯಿಗಳ ಸಹಾಯಧನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ-Corona Vaccine ಹಾಕಿಸಿಕೊಂಡ ಬಳಿಕ ದೇಹದಲ್ಲಿ ಕಾಂತೀಯ ಶಕ್ತಿಯ ಸಂಚಾರ!
ದ್ವಿಚಕ್ರ ವಾಹನ (E-Two Wheelers) ಮಾರಾಟವನ್ನು ಹೆಚ್ಚಿಸುವ ಪ್ರಯತ್ನ
ಸರ್ಕಾರದ ವತಿಯಿಂದ ಈ ಸಬ್ಸಿಡಿ ಹೆಚ್ಚಳವು ವಿದ್ಯುತ್ ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಿಸಲಿದೆ. ಸಾಂಪ್ರದಾಯಿಕ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಪ್ರಸ್ತುತ ಇ ದ್ವಿಚಕ್ರ ವಾಹನಗಳು 20,000 ರೂ ದುಬಾರಿಯಾಗಿವೆ. ಆದರೆ ಸಬ್ಸಿಡಿ (Subsidy To E-Vehicles) ಹೆಚ್ಚಿಸುವ ಮೂಲಕ ಇ-ವಾಹನಗಳನ್ನು ಖರೀದಿಸಲು ಸರ್ಕಾರ ಹೆಚ್ಚು ಹೆಚ್ಚು ಜನರನ್ನು ಪ್ರೇರೇಪಿಸುತ್ತಿದೆ. ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದೇ ಪರಿಗಣಿಸಲಾಗುತ್ತಿದೆ. ಇತ್ತೀಚೆಗೆ, Ather ಎಂಬ ಕಂಪನಿಯು ತನ್ನ ಫ್ಲಾಗ್ ಶಿಪ್ 450x ಎಲೆಕ್ಟ್ರಿಕ್ ಸ್ಕೂಟರ್ನ ಬೆಲೆಯಲ್ಲಿ ರೂ.14,500 ರಷ್ಟು ಕಡಿತಗೊಳಿಸಿದೆ.
ಇದನ್ನೂ ಓದಿ-Terror Attack: ಪೊಲೀಸ್-CRPF ಜಂಟಿಪಡೆ ಮೇಲೆ ಉಗ್ರರ ದಾಳಿ, ಇಬ್ಬರು ಜವಾನರು ಹುತಾತ್ಮ
ದೊಡ್ಡ ಪ್ರಮಾಣದಲ್ಲಿ ಇ-ಬಸ್ ಗಳ ಬಿಡುಗಡೆಗೆ ಸಿದ್ಧತೆ
ಸರ್ಕಾರದ ಈ ಘೋಷಣೆಯ ಬಳಿಕ ಇ-ವಾಹನಗಳ ಮಾರಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. FAME-2 ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ, ಸಬ್ಸಿಡಿಯನ್ನು ವಾಹನಗಳ ವೆಚ್ಚದ ಶೇ.40ರಷ್ಟಕ್ಕೆ ಕೊಂಡೊಯ್ಯಲು ಸರ್ಕಾರ ಬಯಸಿದೆ. ಎಲೆಕ್ಟ್ರಿಕ್ ಬಸ್ಸುಗಳು ಮತ್ತು ತ್ರಿಚಕ್ರ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಕೂಡ ಸರ್ಕಾರ ಬಯಸುತ್ತಿದೆ. . EESL ಶೀಘ್ರದಲ್ಲೇ ಮೂರು ಲಕ್ಷ ವಿದ್ಯುತ್ ಇ-ರಿಕ್ಷಾಗಳನ್ನು ಖರೀದಿಸಲು ನಿರ್ದೇಶಿಸಲಾಗುತ್ತಿದೆ. ಇವುಗಳನ್ನು ವಿವಿಧ ವಿಭಾಗಗಳಲ್ಲಿ ಬಳಸಲಾಗುತ್ತದೆ. ಪುಣೆ, ಸೂರತ್, ಮುಂಬೈ, ಅಹಮದಾಬಾದ್, ಚೆನ್ನೈ, ಕೋಲ್ಕತಾ, ಹೈದರಾಬಾದ್, ದೆಹಲಿ ಮತ್ತು ಬೆಂಗಳೂರುಗಳಲ್ಲಿ ಇ-ಬಸ್ಗಳ ಒಟ್ಟು ಬೇಡಿಕೆಯನ್ನು ಕಂಡುಹಿಡಿಯಲು EESLಗೆ ಸೂಚಿಸಲಾಗಿದೆ. ಪ್ರಸ್ತುತ, ಗುಜರಾತ್, ದೆಹಲಿ ಮತ್ತು ನಾಗ್ಪುರದಲ್ಲಿ ಗರಿಷ್ಠ ಸಂಖ್ಯೆಯ ಇ-ಬಸ್ಗಳಿವೆ (E-Busses). ಈ ಬಸ್ಗಳು ಒಂದೇ ಚಾರ್ಜ್ನಲ್ಲಿ 200 ಕಿ.ಮೀ ಸಾಗುತ್ತವೆ. ಅವುಗಳಲ್ಲಿ ಬ್ಯಾಟರಿ ಬದಲಾಯಿಸುವ ಸೌಲಭ್ಯ ಕೂಡ ಇದೆ. ಸಿಂಗಲ್ ಚಾರ್ಜ್ ನಲ್ಲಿ ಈ ಬಸ್ ಗಳು ದಿನವಿಡೀ ಸಂಚರಿಸಬಹುದಾಗಿದೆ.
ಇದನ್ನೂ ಓದಿ-Donkey Export In Pakistan: China ಜನರಿಗಾಗಿ ಕತ್ತೆಗಳನ್ನು ಸಾಕುತ್ತಿದೆ ಪಾಕಿಸ್ತಾನ, ಕಾರಣ ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.