ಚಿತ್ರದುರ್ಗ : ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದು, ಅನೇಕ ಸಾವು- ನೋವುಂಟಾದ ಹಿನ್ನೆಲೆಯಲ್ಲಿ ಹೆಣ ಸುಡುವುದಕ್ಕೂ ಸರದಿ, ಆಸ್ಪತ್ರೆ ಸೇರುವುದಕ್ಕೂ ಸರದಿ, ಬೆಡ್ಗಳಿಗೂ ಸರದಿ ನಿಲ್ಲುವಂತಾಯ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಡಿ.ಕೆ ಶಿವಕುಮಾರ್(DK Shivakumar) ನೇತೃತ್ವದಲ್ಲಿ ಪ್ರತಿಭಟನೆ ಸಮಯದಲ್ಲಿ ಸುದ್ದಿಗಾರರೊಂದಿಗೆ ಡಿ.ಕೆ ಶಿವಕುಮಾರ್, ಔಷಧಿ ಹಾಗೂ ಲಸಿಕೆ ಪಡೆಯಲು ಜನರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿರುವ ಬಿಜೆಪಿ ಸರ್ಕಾರ, ಇನ್ನೇನು ಜನರನ್ನು ಕಾಪಾಡಿದೆ. ಹೆಣದಲ್ಲೂ ಹಣ ಲೂಟಿ ಮಾಡುವ ಸರ್ಕಾರವಿದು. ದೇಶಕ್ಕೆ ಕೊರೊನಾ ಖಾಯಿಲೆ ತಂದದ್ದು ಯಾರು? ನಾವು ತಂದಿದ್ದೇವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ @DKShivakumar ಅವರ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರ ಏರಿಕೆಯನ್ನು ಖಂಡಿಸಿ ಚಿತ್ರದುರ್ಗದ ಹಿರಿಯೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಾಸಕ ರಘುಮೂರ್ತಿ, ಮಾಜಿ ಸಚಿವರಾದ ಸುಧಾಕರ್, @hanjaneyakpcc, ಮಾಜಿ ಸಂಸದ @bn_chandrappa ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.#Petrol100NotOut pic.twitter.com/vck84o1enR— Karnataka Congress (@INCKarnataka) June 12, 2021
ಇದನ್ನೂ ಓದಿ: Laxman Savadi : 'ವಾಹನ ಮಾಲೀಕ'ರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್..!
ನಿನ್ನೆ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿದ್ದೇವೆ. ನಾಳೆ ಹೋಬಳಿ, ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ನಾಡಿದ್ದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಉಳಿದಂತೆ ಐದು ದಿನ ಐದು ಸಾವಿರ ಕಡೆ ಪೆಟ್ರೋಲ್ ಬಂಕ್(Petrol Bunk)ಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: 'KSRTC' ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್!
ಇದು ಕೇವಲ ಕಾಂಗ್ರೆಸ್(Congress) ಕಾರ್ಯಕ್ರಮ ಅಲ್ಲ. ಬಿಜೆಪಿ, ಜನತಾದಳದ ಎಲ್ಲ ನೊಂದ ಜನರ ಕಾರ್ಯಕ್ರಮವಾಗಿದೆ. ಇದೊಂದೇ ವರ್ಷದಲ್ಲಿ 18 ಬಾರಿ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ 100 ರೂ. ಮುಟ್ಟಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: SSLC ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡಲ್ಲ, ಆದ್ರೆ, ಕನಿಷ್ಠ ಅಂಕ ನಿಗದಿ ಮಾಡಿಲ್ಲ!
ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಅವರೇ, ಪೆಟ್ರೋಲ್ ಬೆಲೆ ಏರಿಸಿದ್ರಿ, ಆದರೆ ರೈತರಿಗೆ ಬೆಂಬಲ ಬೆಲೆ ಏರಿಸಿದ್ರಾ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಜನ ಬಿಜೆಪಿ ಸರ್ಕಾರಕ್ಕೆ ಉಗಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Mansoon: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಈ ಭಾಗಗಳಲ್ಲಿ ಜೂ.16ರವರೆಗೆ ಆರೆಂಜ್ ಅಲರ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.