ನವದೆಹಲಿ: Adding New Member Name In Ration Card - ಪಡಿತರ ಚೀಟಿ (RationCard) ಒಂದು ಪ್ರಮುಖ ದಾಖಲೆಯಾಗಿದ್ದು, ಅದರ ಆಧಾರದ ಮೇಲೆ ಪಡಿತರವನ್ನು ವಿತರಿಸಲಾಗುತ್ತದೆ. ಇದಲ್ಲದೆ ಸರ್ಕಾರಿ ಯೋಜನೆಗಳ (Government Scheme) ಪ್ರಯೋಜನಗಳನ್ನು ಪಡೆಯಲು ಪಡಿತರ ಚೀಟಿ ಕೂಡ ಅಗತ್ಯವಾಗಿರುತ್ತದೆ. ಕುಟುಂಬದ ಎಲ್ಲ ಸದಸ್ಯರ ಹೆಸರನ್ನು (Ration Card Member) ಪಡಿತರ ಚೀಟಿಯಲ್ಲಿ ದಾಖಲಿಸಲಾಗುತ್ತದೆ. ಹೊಸ ಸೊಸೆ ಅಥವಾ ಮಕ್ಕಳ ರೂಪದಲ್ಲಿ ಕುಟುಂಬಕ್ಕೆ ಆಗಮಿಸುವ ಹೊಸ ಸದಸ್ಯರ (ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸಿ) ಹೆಸರನ್ನೂ ಕೂಡ ಪಡಿತರ ಚೀಟಿಯಲ್ಲಿ ಸೇರಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಬನ್ನಿ ಪಡಿತರ ಚೀಟಿಯಲ್ಲಿ ಹೊಸ ಕುಟುಂಬ ಸದಸ್ಯರ ಹೆಸರನ್ನು ಸೇರಿಸುವ (Add New Member in Ration Card) ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಳ್ಳೋಣ.
ಈ ರೀತಿ ಸೇರಿಸಿ ಹೊಸ ಸದಸ್ಯರ ಹೆಸರು (Ration Card Update)
ಮದುವೆಯಾಗಿ ಒಂದು ವೇಳೆ ಸದಸ್ಯರೊಬ್ಬರು ಕುಟುಂಬಕ್ಕೆ ಆಗಮಿಸಿದ್ದರೆ, ಮೊದಲು ಅವರು ತಮ್ಮ ಆಧಾರ್ ಕಾರ್ಡ್‌ನಲ್ಲಿ ನವೀಕರಿಸಬೇಕಾಗುತ್ತದೆ. ಗಂಡನ ಮಹಿಳೆಯ ಆಧಾರ್ ಕಾರ್ಡ್ ನಲ್ಲಿ ನಮೂದಾಗಬೇಕು. ಇದರೊಂದಿಗೆ ವಿಳಾಸವನ್ನೂ ಕೂಡ ಬದಲಾಯಿಸಬೇಕು. ಆಧಾರ್ ಕಾರ್ಡ್‌ನಲ್ಲಿ ಅಪ್‌ಡೇಟ್ ಮಾಡಿದ ನಂತರ, ಪರಿಷ್ಕೃತ ಆಧಾರ್ ಕಾರ್ಡ್‌ನ ಪ್ರತಿ ಜೊತೆಗೆ, ಆಹಾರ ಇಲಾಖೆ ಅಧಿಕಾರಿಗೆ ಪಡಿತರ ಚೀಟಿಗೆ ಹೆಸರನ್ನು ಸೇರಿಸಲು ಅರ್ಜಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ- 7th Pay Commission: ಜುಲೈ 1 ರಿಂದ ಸರ್ಕಾರಿ ನೌಕರರ ವೇತನದಲ್ಲಿ ರೂ.32,400 ಹೆಚ್ಚಳ! ಹೇಗೆ ಇಲ್ಲಿ ತಿಳಿಯಿರಿ
ಕುಟುಂಬಕ್ಕೆ ಹೊಸದಾಗಿ ಎಂಟ್ರಿ ನೀಡಿದ ಮಗುವಿಗೆ ಈ ದಾಖಲೆ ಅನಿವಾರ್ಯ (How To Add New Family Member Name To Ration Card)
ಒಂದು ವೇಳೆ ಕುಟುಂಬದಲ್ಲಿ ಮಗು ಜನಿಸಿದರೆ, ಮೊದಲು ಮಗುವಿನ ಆಧಾರ್ ಕಾರ್ಡ್ (Aadhaar Card) ಅನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಮಗುವಿನ ಜನ್ಮ ಪ್ರಮಾಣಪತ್ರ ಅನಿವಾರ್ಯ. ಇದಾದ ಬಳಿಕ ಆಧಾರ್ ಕಾರ್ಡ್ ನ ಪ್ರತಿಯನ್ನು ನೀಡಿ, ಪಡಿತರ ಚೀಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಬೇಕು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು (Ration Card Online)
ಮೇಲೆ ಸೂಚಿಸಲಾಗಿರುವ ವಿಧಾನಗಳನ್ನು ಅನುಸರಿಸಿ ಅರ್ಜಿಯನ್ನು ನೀವು ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಒಂದು ವೇಳೆ ನೀವು ಈ ಪ್ರಕ್ರಿಯೆಯನ್ನು ಮನೆಯಲ್ಲಿಯೇ ಕುಳಿತು ಮಾಡಬೇಕು ಎಂದಾದರೆ ಅದನ್ನು ಕೂಡ ನೀವು ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಸಂಬಂಧ ಪಟ್ಟ ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಒಂದು ವೇಳೆ ವೆಬ್ ಸೈಟ್ ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸುವ ಆಯ್ಕೆ ಇದ್ದರೆ, ನೀವು ಮನೆಯಿಂದಲೇ ಆರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ-ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ ? ಐದೇ ನಿಮಿಷದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು e-Pan
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.