ನವದೆಹಲಿ: ಸೂಪರ್ಸ್ಟಾರ್ ರಜನಿಕಾಂತ್ ಅವರು ನಿಯಮಿತವಾಗಿ ಆರೋಗ್ಯ ತಪಾಸಣೆಗಾಗಿ ಯುಎಸ್ಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: "ನಾನು ಗರ್ಭಿಣಿಯಾಗಿದ್ದಾಗ ಸತೀಶ್ ಕೌಶಿಕ್ ನನಗೆ ಮದುವೆ ಪ್ರಸ್ತಾಪ ಇಟ್ಟಿದ್ದರು"
Superstar #Rajinikanth leaves to US earlier today for a regular health checkup!#Annaatthe
pic.twitter.com/bzaVF5uPmm— Troll Haters ;-) (@THTrollHaters) June 19, 2021
ರಜನಿಕಾಂತ್ ಮತ್ತು ಅವರ ಪತ್ನಿ ಲತಾ ಅವರನ್ನು ಶುಕ್ರವಾರ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುತಿಸಲಾಗಿದೆ. ತಲೈವಾ ಅವರ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿವೆ.ಮಾಧ್ಯಮಗಳ ವರದಿಗಳ ಪ್ರಕಾರ, ರಜನಿಕಾಂತ್ (Rajinikanth) ಅವರ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಯುಎಸ್ಗೆ ತೆರಳುತ್ತಿದ್ದಾರೆ. ಅವರು ಕೆಲವು ಪರೀಕ್ಷೆಗಳಿಗೆ ಒಳಗಾಗುವುದರಿಂದ ದಂಪತಿಗಳು ಮುಂದಿನ ಕೆಲವು ವಾರಗಳನ್ನು ಅಲ್ಲಿ ಕಳೆಯುವ ನಿರೀಕ್ಷೆಯಿದೆ. ಜುಲೈ 8 ರಂದು ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಇದನ್ನೂ ಓದಿ: ಬೆಳ್ಳಿತೆರೆಗೆ ಬರಲಿದೆ ಭಾರತದ ಕ್ರಿಕೆಟ್ ಮಹಾಗೋಡೆ ದ್ರಾವಿಡ್ ಬಯೋಪಿಕ್..!
ರಜನಿಕಾಂತ್ ತಮ್ಮ ಮುಂಬರುವ ಚಿತ್ರ ಅನ್ನಾಥೆ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸುಮಾರು ಒಂದು ವರ್ಷ ತಡವಾಗಿದ್ದ ಈ ಚಿತ್ರದಲ್ಲಿ ತಮ್ಮ ಭಾಗಗಳನ್ನು ಪೂರ್ಣಗೊಳಿಸಲು ರಜನಿಕಾಂತ್ 35 ದಿನಗಳ ಕಾಲ ತಡೆರಹಿತ ಚಿತ್ರೀಕರಣ ನಡೆಸಿದರು. ಡಿಸೆಂಬರ್ 2020 ರಲ್ಲಿ, ಅನೇಕ ಸಿಬ್ಬಂದಿ ಸದಸ್ಯರು ಕರೋನವೈರಸ್ಗೆ ಒಳಗಾದ ನಂತರ ಶೂಟಿಂಗ್ ಹಠಾತ್ತನೆ ಸ್ಥಗಿತಗೋಳಿಸಲಾಗಿತ್ತು.ಶಿವ ನಿರ್ದೇಶನ ಮತ್ತು ಬರೆದ ಅನ್ನಾಥೆಯಲ್ಲಿ ಖುಷ್ಬು, ನಯನತಾರಾ, ಕೀರ್ತಿ ಸುರೇಶ್, ಜಾಕಿ ಶ್ರಾಫ್, ಜಗಪತಿ ಬಾಬು, ಪ್ರಕಾಶ್ ರಾಜ್ ಮತ್ತು ವೇಲಾ ರಾಮಮೂರ್ತಿ ನಟಿಸಿದ್ದಾರೆ. ಇದನ್ನು ಈ ವರ್ಷ ನವೆಂಬರ್ 4 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
Love You Thalaiva...#Thalaivar 🤘#Rajinikanth #BinaryPost pic.twitter.com/pJY1wzLPRO
— Binary Post (@BinaryPost001) June 19, 2021
ಇದನ್ನೂ ಓದಿ: ಫೋಟೋ ಶೂಟ್ ಮೂಲಕ ಇಂಟರ್ನೆಟ್ ಗೆ ಕಿಚ್ಚು ಹಚ್ಚಿದ ರಾಹುಲ್-ಅತಿಯಾ ಜೋಡಿ
ಮೇ ತಿಂಗಳಲ್ಲಿ, ರಜನಿಕಾಂತ್ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿಯಾದರು, ಎರಡನೇ ಅಲೆಯ ಕರೋನವೈರಸ್ ವಿರುದ್ಧ ಹೋರಾಡುವ ರಾಜ್ಯದ ಪ್ರಯತ್ನಕ್ಕೆ ಬೆಂಬಲವನ್ನು ನೀಡಿದರು. ಸೂಪರ್ ಸ್ಟಾರ್ ತಮಿಳುನಾಡು ಮುಖ್ಯಮಂತ್ರಿಯ ಪರಿಹಾರ ನಿಧಿಗೆ 50 ಲಕ್ಷ ರೂ ಗಳ ನೆರವು ನೀಡಿದರು.'ಸರ್ಕಾರವು ನಿಗದಿಪಡಿಸಿದ ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ನಾನು ಜನರನ್ನು ವಿನಂತಿಸುತ್ತೇನೆ. ಆಗ ಮಾತ್ರ ನಾವು ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಸಾಧ್ಯವಾಗುತ್ತದೆ ”ಎಂದು ರಜನಿಕಾಂತ್ ಮುಖ್ಯಮಂತ್ರಿಯನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.