ಜಮ್ಮು : ಜಮ್ಮು ಮತ್ತು ಕಾಶ್ಮೀರದ (Jammu-Kashmir) ಸಿಆರ್ಪಿಎಫ್ (CRPF) ಬಂಕರ್ ಮೇಲೆ ನಿನ್ನೆ ಸಂಜೆ ನಡೆದ ಭಯೋತ್ಪಾದಕ ದಾಳಿಯ ನಂತರ, ಜಮ್ಮು ವಿಮಾನ ನಿಲ್ದಾಣದ (Jammu Airport) ತಾಂತ್ರಿಕ ಪ್ರದೇಶದಲ್ಲಿ ತಡರಾತ್ರಿ ಎರಡು ಸ್ಫೋಟಗಳು (blast) ಸಂಭವಿಸಿವೆ. ವಿಧಿವಿಜ್ಞಾನ ತಂಡ ಮತ್ತು ತಜ್ಞರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಎರಡು ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಹೇಳಿಕೆ ಬಿಡುಗಡೆ ಮಾಡಿದ ವಾಯುಪಡೆ :
ನಿಲ್ದಾಣದಲ್ಲಿ ಎರಡು ಲಘು ಸ್ಫೋಟಗಳು (Blast) ಸಂಭವಿಸಿವೆ ಎಂದು ವಾಯುಪಡೆ ಟ್ವೀಟ್ (Airforce) ಮಾಡಿದೆ. ಒಂದು ಸ್ಫೋಟದಿಂದ ಛಾವಣಿಗೆ ಸಣ್ಣ ಮಟ್ಟದ ಹಾನಿಯುಂಟಾಗಿದೆ . ಎರಡನೇ ಸ್ಫೋಟವು ತೆರೆದ ಪ್ರದೇಶದಲ್ಲಿ ಸಂಭವಿಸಿದೆ. ಈ ಸ್ಫೋಟಗಳಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಈ ಸ್ಫೋಟಗಳನ್ನು ಡ್ರೋನ್ ಮೂಲಕ ನಡೆಸಲಾಗಿದೆ.
Two low intensity explosions were reported early Sunday morning in the technical area of Jammu Air Force Station. One caused minor damage to the roof of a building while the other exploded in an open area.
— Indian Air Force (@IAF_MCC) June 27, 2021
ಇದನ್ನೂ ಓದಿ : ಐದು ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲ್ಲಿಬಿಜೆಪಿಯಿಂದ ಮಹತ್ವದ ಸಭೆ
ಶಂಕಿತ ಸ್ಫೋಟದಿಂದಾಗಿ ತಾಂತ್ರಿಕ ಪ್ರದೇಶದೊಳಗೆ ಕೋಲಾಹಲ ಉಂಟಾಗಿದೆ. ಬಾಂಬ್ ಬಾಂಬ್ ನಿಷ್ಕ್ರೀಯ ದಳ, ವಿಧಿ ವಿಜ್ಞಾನ ತಂಡ (forensic team) ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದು ತಪಾಸಣೆ ನಡೆಸಿದ್ದಾರೆ.
Jammu and Kashmir: Explosion heard inside Jammu airport's technical area; forensic team reaches the spot
Details awaited pic.twitter.com/duWctZvCNx
— ANI (@ANI) June 27, 2021
ನಿನ್ನೆ ಸಂಜೆ ನಡೆದಿತ್ತು ದಾಳಿ :
ಶನಿವಾರ ಸಂಜೆ ಶ್ರೀನಗರದ ಬರ್ಬರ್ಶಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಸಲುವಾಗಿ ಭಯೋತ್ಪಾದಕರು ಸಿಆರ್ಪಿಎಫ್ (CRPF) ಬಂಕರ್ ಮೇಲೆ ಬಾಂಬ್ ಎಸೆದ ಘಟನೆ ನಡೆದಿತ್ತು. ಆದರೆ ಭಯೋತ್ಪಾದಕರ (Terrorist) ಗುರಿ ತಪ್ಪಿದ್ದು, ಬಾಂಬ್ ರಸ್ತೆಯಲ್ಲಿ ಸ್ಫೋಟಗೊಂಡಿದೆ. ಈ ದಾಳಿಯಲ್ಲಿ ಮೂವರು ದಾರಿಹೋಕರು ಗಾಯಗೊಂಡಿದ್ದು, ಅದರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಮೃತನನ್ನು ಹಾಜಿಗುಂಡ್ ಬದ್ಗಂ ನಿವಾಸಿ ಮದ್ಸಿರ್ ಅಹ್ಮದ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಲಸಿಕಾ ಕಾರ್ಯಕ್ರಮದಲ್ಲಿ ತ್ವರಿತತೆ ಕಾಪಾಡಿಕೊಳ್ಳಲು ಪ್ರಧಾನಿ ಮೋದಿ ಕರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.