SBI ಗ್ರಾಹಕರೇ ಗಮನಿಸಿ: ಎರಡು ದಿನ ಸ್ಥಗಿತಗೊಳ್ಳಲಿದೆ ಈ ಪ್ರಮುಖ ಸೇವೆಗಳು, ಇಲ್ಲಿದೆ ವಿವರ

ನಿರ್ವಹಣೆ ಕಾರ್ಯಗಳಿಂದಾಗಿ ಜುಲೈ 10 ಮತ್ತು 11 ರ ರಾತ್ರಿ ತನ್ನ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟ್ವೀಟ್ ಮಾಡುವ ಮೂಲಕ ಎಸ್‌ಬಿಐ  (SBI)  ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಪೂರ್ಣ ಸುದ್ದಿ ಓದಿ.

Written by - Yashaswini V | Last Updated : Jul 10, 2021, 10:10 AM IST
  • ಜುಲೈ 10 ಮತ್ತು 11 ರ ರಾತ್ರಿ ಎಸ್‌ಬಿಐ ಬ್ಯಾಂಕಿಂಗ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ
  • ಎಸ್‌ಬಿಐ ಬ್ಯಾಂಕ್ ಈ ಮಾಹಿತಿಯನ್ನು ಟ್ವೀಟ್ ಮೂಲಕ ತಿಳಿಸಿದೆ
  • ಇಂಟರ್ನೆಟ್ ಬ್ಯಾಂಕಿಂಗ್, ಯೋನೊ, ಯುಪಿಐ ಮತ್ತು ಯೋನೊ ಲೈಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ
SBI ಗ್ರಾಹಕರೇ ಗಮನಿಸಿ: ಎರಡು ದಿನ ಸ್ಥಗಿತಗೊಳ್ಳಲಿದೆ ಈ ಪ್ರಮುಖ ಸೇವೆಗಳು, ಇಲ್ಲಿದೆ ವಿವರ  title=
ಎಸ್‌ಬಿಐ ಎಚ್ಚರಿಕೆ! ಜುಲೈ 10, 11 ರಂದು ಸ್ಥಗಿತಗೊಳ್ಳಲಿವೆ ಈ ಪ್ರಮುಖ ಸೇವೆಗಳು

ನವದೆಹಲಿ: SBI Bank Alert- ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಗ್ರಾಹಕರಾಗಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದೆ. ಎಸ್‌ಬಿಐನ ಕೆಲವು ಸೇವೆಗಳು (SBI Services Affected) ಜುಲೈ 10 ಮತ್ತು 11 ರಂದು ಸ್ಥಗಿತಗೊಳ್ಳಲಿದೆ ಎಂದು ಎಸ್‌ಬಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಹಾಗಾಗಿ ಬ್ಯಾಂಕಿಂಗ್ ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳನ್ನು ಶೀಘ್ರವೇ ಮುಗಿಸಿ.

ಮಾಹಿತಿ ನೀಡಿರುವ ಬ್ಯಾಂಕ್:
ವಾಸ್ತವವಾಗಿ, ನಿರ್ವಹಣೆ ಚಟುವಟಿಕೆಯಿಂದಾಗಿ  (Maintenance Activity)  ಜುಲೈ 10 ರಂದು ರಾತ್ರಿ 10.45 ರಿಂದ ಜುಲೈ 11 ರಂದು ಬೆಳಿಗ್ಗೆ 12.15 ರವರೆಗೆ ಬ್ಯಾಂಕಿನ ಅನೇಕ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಸ್‌ಬಿಐ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ. ಇದು ಇಂಟರ್ನೆಟ್ ಬ್ಯಾಂಕಿಂಗ್ (Internet Banking), ಯೋನೊ (YONO), ಯುಪಿಐ (UPI) ಮತ್ತು ಯೋನೊ ಲೈಟ್ (YONO Lite) ಸೇವೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ- Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!

ಬ್ಯಾಂಕ್ ಎರಡು ಟ್ವೀಟ್ ಮಾಡಿದೆ:
ಎಸ್‌ಬಿಐ (SBI) ತನ್ನ ಎರಡನೇ ಟ್ವೀಟ್‌ನಲ್ಲಿ ಗ್ರಾಹಕರಿಗೆ ತಮ್ಮ ಪಾಸ್‌ವರ್ಡ್‌ಗಳನ್ನು ನಿರಂತರವಾಗಿ ಬದಲಾಯಿಸುವಂತೆ ಮನವಿ ಮಾಡಿದೆ. ಬ್ಯಾಂಕ್ ಪ್ರಕಾರ, ಆನ್‌ಲೈನ್‌ನಲ್ಲಿ ಪಾಸ್‌ವರ್ಡ್ ಬದಲಾಯಿಸುವುದು ವೈರಸ್ ವಿರುದ್ಧದ ಲಸಿಕೆಯಂತಿದೆ. ಅಂತಹ ಪರಿಸ್ಥಿತಿಯಲ್ಲಿ, ಸೈಬರ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮ್ಮ ಪಾಸ್‌ವರ್ಡ್ ಅನ್ನು ನಿರಂತರವಾಗಿ ಬದಲಾಯಿಸುತ್ತಿರಿ ಎಂದು ಬ್ಯಾಂಕ್ ಸಲಹೆ ನೀಡಿದೆ.

ಇದನ್ನೂ ಓದಿ- Paytm Postpaid: ಗ್ರಾಹಕರಿಗೆ ನಿಮಿಷಗಳಲ್ಲಿ ಸಿಗಲಿದೆ 60,000 ರೂಪಾಯಿಗಳ ಸಾಲ..!

ಎಸ್‌ಬಿಐ ಗ್ರಾಹಕರ ಮೇಲೆ ಚೀನೀ ಹ್ಯಾಕರ್ಸ್ ಕಣ್ಣು !
ಎಸ್‌ಬಿಐ ಗ್ರಾಹಕರ ಸೈಬರ್ ಭದ್ರತಾ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಚೀನಾದ ಹ್ಯಾಕರ್‌ಗಳು ಎಸ್‌ಬಿಐ ಗ್ರಾಹಕರ ಖಾತೆಗಳಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ. ಫಿಶಿಂಗ್ ಹಗರಣಗಳನ್ನು ಹೊಂದಿರುವ ಚೀನೀ ಮೂಲದ ಹ್ಯಾಕರ್‌ಗಳು ವಿಶೇಷ ವೆಬ್‌ಸೈಟ್ ಲಿಂಕ್‌ಗಳನ್ನು ಬಳಸಿಕೊಂಡು ತಮ್ಮ ಕೆವೈಸಿಯನ್ನು ನವೀಕರಿಸಲು ಬ್ಯಾಂಕ್ ಬಳಕೆದಾರರನ್ನು ಕೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ 50 ಲಕ್ಷ ರೂ.ಗಳ ಉಡುಗೊರೆಯನ್ನು ನೀಡುವುದಾಗಿ ಆಮಿಷ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News