ಶ್ರಾವಣದಲ್ಲಿ ರುದ್ರಾಕ್ಷಿ ಬಳಸಿದರೆ ಎಲ್ಲವೂ ಶುಭಾವಾಗುತ್ತದೆಯಂತೆ, ಬಳಸುವ ವಿಧಾನ ಹೀಗಿರಲಿ

ರುದ್ರಾಕ್ಷಿ ಧರಿಸುವುದರಿಂದ ಸಕಾರಾತ್ಮಕ ಶಕ್ತಿ ಸಿಗುತ್ತದೆ. ರುದ್ರಾಕ್ಷಿಯಲ್ಲಿಯೂ ಅನೇಕ ಬಗೆಗಳಿವೆ.  ಯಾವ ಆಶಯಕ್ಕಾಗಿ, ಯಾವ ರುದ್ರಾಕ್ಷಿಯನ್ನು ಧರಿಸಬೇಕು ಎನ್ನವುದು ಕೂಡಾ ಹೆಚ್ಚಿನವರಿಗೆ ತಿಳಿದಿರುತ್ತದೆ.  

Written by - Ranjitha R K | Last Updated : Jul 13, 2021, 04:29 PM IST
  • ರುದ್ರಾಕ್ಷಿ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ
  • ರುದ್ರಾಕ್ಷಿ ದುರಾದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸುತ್ತದೆ
  • ಹದಿನಾಲ್ಕು ಮುಖಿ ರುದ್ರಾಕ್ಷಿ ಯಶಸ್ಸು ನೀಡುತ್ತದೆ
ಶ್ರಾವಣದಲ್ಲಿ ರುದ್ರಾಕ್ಷಿ ಬಳಸಿದರೆ ಎಲ್ಲವೂ ಶುಭಾವಾಗುತ್ತದೆಯಂತೆ, ಬಳಸುವ ವಿಧಾನ ಹೀಗಿರಲಿ  title=
ರುದ್ರಾಕ್ಷಿ ದುರಾದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸುತ್ತದೆ (photo zee news)

ನವದೆಹಲಿ : ಧರ್ಮ ಮತ್ತು ಜ್ಯೋತಿಷ್ಯ ಎರಡರಲ್ಲೂ ರುದ್ರಾಕ್ಷಿಗೆ (Rudraksha) ಬಹಳ ಮಹತ್ವವಿದೆ. ಪುರಾಣಗಳು ಮತ್ತು ನಂಬಿಕೆಗಳ ಪ್ರಕಾರ, ಶಿವನ ಕಣ್ಣೀರಿನಿಂದ ರುದ್ರಾಕ್ಷಿ (Tears Of Lord Shiva)  ಹುಟ್ಟಿಕೊಂಡಿತ್ತಂತೆ. ಶಿವ ರುದ್ರಾಕ್ಷಿಯ ಮಾಲೆಯನ್ನು ಧರಿಸುತ್ತಾನೆ. ರುದ್ರಾಕ್ಷಿ ಧರಿಸುವ ಭಕ್ತರಿಗೆ ದೇವರ  ಆಶೀರ್ವಾದವೂ ವಿಶೇಷವಾಗಿ ಸಿಗುತ್ತದೆಯಂತೆ. ರುದ್ರಾಕ್ಷಿ ಧರಿಸುವುದರಿಂದ ಸಕಾರಾತ್ಮಕ ಶಕ್ತಿ ಸಿಗುತ್ತದೆ. ರುದ್ರಾಕ್ಷಿಯಲ್ಲಿಯೂ ಅನೇಕ ಬಗೆಗಳಿವೆ.  ಯಾವ ಆಶಯಕ್ಕಾಗಿ, ಯಾವ ರುದ್ರಾಕ್ಷಿಯನ್ನು ಧರಿಸಬೇಕು ಎನ್ನವುದು ಕೂಡಾ ಹೆಚ್ಚಿನವರಿಗೆ ತಿಳಿದಿರುತ್ತದೆ.  

ರುದ್ರಾಕ್ಷಿ ವಿಧಗಳು :
ರುದ್ರಾಕ್ಷಿಯಲ್ಲಿ (Rudraksha) ಏಕಮುಖದಿಂದ ಹದಿನಾಲ್ಕು ಮುಖದವರೆಗೆ ಇರುತ್ತದೆ. ಪ್ರತಿಯೊಂದು ರುದ್ರಾಕ್ಷಿಯನ್ನು ವಿಭಿನ್ನ (types of rudraksha) ದೇವತೆಗಳ ರೂಪವೆಂದು ಪರಿಗಣಿಸಲಾಗುತ್ತದೆ. ಅಂದರೆ ಏಕ ಮುಖಿ ರುದ್ರಾಕ್ಷಿ ಭಗವಾನ್ ಶಿವ, ಎರಡು ಮುಖದ ರುದ್ರಾಕ್ಷಿ ಶ್ರೀ ಗೌರಿ-ಶಂಕರ್, ತ್ರಿ-ಮುಖಿ ತೇಜೋಮಯ್ ಅಗ್ನಿ, ನಾಲ್ಕು-ಮುಖಿ ಶ್ರೀ ಪಂಚದೇವ್, ಆರು-ಮುಖಿ ಭಗವಾನ್ ಕಾರ್ತಿಕೇಯ, ಏಳು-ಮುಖಿ ಭಗವಾನ್ ಅನಂತ್, ಅಷ್ಟ-ಮುಖಿ ಭಗವಾನ್ ಶ್ರೀ ಗಣೇಶ್, ಒಂಬತ್ತು-ಮುಖಿ ಭಗವತಿ ದೇವಿ ದುರ್ಗಾ, ಹತ್ತು-ಮುಖಿ ಶ್ರೀ ಹರಿ ವಿಷ್ಣು, ಹದಿಮೂರು-ಮುಖಿ ಶ್ರೀ ಇಂದ್ರ ಮತ್ತು ಹದಿನಾಲ್ಕು-ಮುಖಿ ಶ್ರೀ ಇಂದ್ರ ಮತ್ತು ಹದಿನಾಲ್ಕು ಮುಖಿ ಹನುಮಾನ್ ರೂಪ ಎಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ : Dream Interpretation: ಯಾವ ಸಮಯದಲ್ಲಿ ಬೀಳುವ ಕನಸು ಎಷ್ಟು ದಿನಗಳ ನಂತರ ಫಲ ನೀಡಲಿದೆ ಗೊತ್ತಾ!

ರುದ್ರಾಕ್ಷಿ ಮತ್ತು ಅದರಿಂದಾಗುವ ಪ್ರಯೋಜನ : 
ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಲು :  ಇದಕ್ಕಾಗಿ, ಒಂದು ಮುಖದಿಂದ ಹದಿನಾಲ್ಕು ಮುಖದ ರುದ್ರಾಕ್ಷಿಯನ್ನು ಬಳಸಬೇಕಾಗುತ್ತದೆ. ಎಲ್ಲಾ ರುದ್ರಾಕ್ಷಿಗಳನ್ನು ದಾರದಲ್ಲಿ ಪೋಣಿಸುವ ಮೂಲಕ ಧರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಶಿವನ (lord shiva)  ಕೃಪೆಯು ಸಂಪೂರ್ಣ ಪ್ರಮಾಣದಲ್ಲಿ ಇದ್ದು ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆಯಂತೆ. 

ಬಡತನ ನಿವಾರಣೆಗೆ :  ರುದ್ರಾಕ್ಷಿ ಅನೇಕ ರೀತಿಯ ಗ್ರಹಗಳ ದೋಷಗಳನ್ನು ನಿವಾರಿಸುತ್ತದೆ. ಬಡತನವನ್ನು ಹೋಗಲಾಡಿಸಲು ಗೌರಿ-ಶಂಕರ್ (Gowri shankar) ಅಂದರೆ ಎರಡು ಮುಖಡ ರುದ್ರಾಕ್ಷಿಯನ್ನು ಧರಿಸಬೇಕು. ಇದನ್ನು ಧರಿಸುವುದರಿಂದ ಸಾಲ-ಬಡತನ ನಿರ್ಮೂಲವಾಗುತ್ತದೆಯಂತೆ. 

ಪರೀಕ್ಷೆ-ಇಂಟರ್ವ್ಯೂನಲ್ಲಿ ಯಶಸ್ಸು ಪಡೆಯಲು : ನೀವು ನಿರ್ದಿಷ್ಟ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸಿದರೆ ಅಥವಾ ಪ್ರಮುಖ ಸಂದರ್ಶನದಲ್ಲಿ ಉತ್ತೀರ್ಣರಾಗುವ ಮೂಲಕ ದೊಡ್ಡ ಹುದ್ದೆಯನ್ನು ತಲುಪಲು ಬಯಸಿದರೆ, ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ ಏಕ ಮುಖಿ ರುದ್ರಾಕ್ಷಿಯನ್ನು ಧರಿಸಿ. ಇದರಿಂದ ನಿಮ್ಮ ಅದೃಷ್ಟವೂ ಬದಲಾಗುತ್ತದೆ. ಏಕ ಮುಖಿ ರುದ್ರಾಕ್ಷಿಯನ್ನು ಸಿಗುವುದು ಬಹಳ ಕಷ್ಟ. ಆದ್ದರಿಂದ ಏಕ ಮುಖಿ ರುದ್ರಾಕ್ಷಿ ಸಿಗದೇ ಹೋದರೆ ಗಣೇಶ ರುದ್ರಾಕ್ಷವನ್ನು ಕೂಡಾ ಧರಿಸಬಹುದು. ಗಣೇಶ್ ರುದ್ರಾಕ್ಷಾ ಬುದ್ಧಿವಂತಿಕೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ : ಒಂದೇ ರಾಶಿಯಲ್ಲಿ ಸೂರ್ಯ, ಮಂಗಳ, ಶುಕ್ರ ಗ್ರಹಗಳ ಸಂಯೋಜನೆ, ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News