ಒಂದೇ ರಾಶಿಯಲ್ಲಿ ಸೂರ್ಯ, ಮಂಗಳ, ಶುಕ್ರ ಗ್ರಹಗಳ ಸಂಯೋಜನೆ, ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸು

ಸೂರ್ಯನ ರಾಶಿಚಕ್ರ ಪರಿವರ್ತನೆ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಅದರೊಂದಿಗೆ ಮಂಗಳ  ಮತ್ತು ಶುಕ್ರಗಳಂತಹ  ಪ್ರಮುಖ ಗ್ರಹಗಳೊಂದಿಗೆ ಅದೇ ರಾಶಿಚಕ್ರದಲ್ಲಿ ಉಳಿಯುವುದು ಕೆಲವು ರಾಶಿಗಳಿಗೆ ವಿಶೇಷ ಫಲವನ್ನು ನೀಡಲಿದೆ. 

Written by - Ranjitha R K | Last Updated : Jul 12, 2021, 02:49 PM IST
  • ಕಟಕ ರಾಶಿಯಲ್ಲಿ ಮಂಗಳ, ಶುಕ್ರ ಮತ್ತು ಸೂರ್ಯನ ಸಂಯೋಜನೆ
  • ಜುಲೈ 16 ರಂದು ಕಟಕ ರಾಶಿ ಪ್ರವೇಶಿಸಲಿರುವ ಸೂರ್ಯ
  • ಸೂರ್ಯನ ರಾಶಿ ಪರಿವರ್ತನೆ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಯಶಸ್ಸು ತರಲಿದೆ
ಒಂದೇ ರಾಶಿಯಲ್ಲಿ ಸೂರ್ಯ, ಮಂಗಳ, ಶುಕ್ರ ಗ್ರಹಗಳ ಸಂಯೋಜನೆ, ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸು
ಕಟಕ ರಾಶಿಯಲ್ಲಿ ಮಂಗಳ, ಶುಕ್ರ ಮತ್ತು ಸೂರ್ಯನ ಸಂಯೋಜನೆ (photo zee news)

ನವದೆಹಲಿ :  ಮಂಗಳ ಮತ್ತು ಶುಕ್ರ ನಂತರ, ಎಲ್ಲಾ ಗ್ರಹಗಳ ರಾಜನೆಂದು ಪರಿಗಣಿಸಲ್ಪಟ್ಟ ಸೂರ್ಯ ಕೂಡ ಕಟಕ ರಾಶಿ ಪ್ರವೇಶಿಸಲಿದ್ದಾನೆ (Sun transit). ಜುಲೈ 16 ರಿಂದ ಆಗಸ್ಟ್ 17 ರವರೆಗೆ ಈ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಸೂರ್ಯನ ರಾಶಿಚಕ್ರ ಪರಿವರ್ತನೆ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಅದರೊಂದಿಗೆ ಮಂಗಳ (Mars) ಮತ್ತು ಶುಕ್ರಗಳಂತಹ (Venus) ಪ್ರಮುಖ ಗ್ರಹಗಳೊಂದಿಗೆ ಅದೇ ರಾಶಿಚಕ್ರದಲ್ಲಿ ಉಳಿಯುವುದು ಕೆಲವು ರಾಶಿಗಳಿಗೆ ವಿಶೇಷ ಫಲವನ್ನು ನೀಡಲಿದೆ.  ಗ್ರಹಗಳ ಈ ಸಂಯೋಜನೆಯು ಈ ರಾಶಿಚಕ್ರ ಚಿಹ್ನೆಗಳ ಜನರಿಗೆ ಕೆಲಸದಲ್ಲಿ ಅದ್ಭುತ ಯಶಸ್ಸನ್ನು ನೀಡುತ್ತದೆ.

Add Zee News as a Preferred Source

ವೃಷಭ ರಾಶಿ: ಸೂರ್ಯನ ಈ ರಾಶಿಚಕ್ರ (Sun trasit) ಬದಲಾವಣೆಯು  ವೃಷಭ  ರಾಶಿಯ ಜನರಿಗೆ ಬಹಳ ಶುಭಾವಾಗಲಿದೆ. ಈ ರಾಶಿಚಕ್ರದ ಉದ್ಯೋಗಿಗಳಿಗೆ ಉತ್ತಮ ಉದ್ಯೋಗ ಮತ್ತು ಬಡ್ತಿ ಪಡೆಯಲು ಉತ್ತಮ ಅವಕಾಶಗಳು ಒದಗಿ ಬರಲಿವೆ. ಳಿವೆ. ವರ್ಗಾವಣೆ ಬಯಸುವವರಿಗೂ ಸಮಯ ಕೂಡಿ ಬರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ಇದನ್ನೂ ಓದಿ : Benefits Of Wearing Pearl: ದೇವಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ಈ ಕೆಲಸ ಮಾಡಿ, ಹಣದ ಮುಗ್ಗಟ್ಟು ಎದುರಾಗುವುದಿಲ್ಲ

ಮಿಥುನ ರಾಶಿ : ಈ ರಾಶಿಚಕ್ರದ ಜನರು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಸಂಬಳ (Salary) ಹೆಚ್ಚಾಗಬಹುದು.

ಕನ್ಯಾರಾಶಿ : ಸೂರ್ಯನ ರಾಶಿ ಪರಿವರ್ತನೆ ಈ ರಾಶಿಚಕ್ರದ ಜನರಿಗೆ ಸಾಕಷ್ಟು ಹಣವನ್ನು ತರುತ್ತದೆ.  ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗ ಬದಲಾವಣೆಗೆ ಇದು ಉತ್ತಮ ಸಮಯ.

ತುಲಾ : ಈ ರಾಶಿಚಕ್ರದ ಜನರಿಗೆ, ಸೂರ್ಯನ ರಾಶಿಚಕ್ರ ಚಿಹ್ನೆಯ ಬದಲಾವಣೆಯು ಬಹಳ ಶುಭವಾಗಿದೆ. ಈ ಜನರು ಕೆಲಸದಲ್ಲಿ ಹೆಸರು ಮತ್ತು ಹಣ (money) ಎರಡನ್ನೂ ಪಡೆಯುತ್ತಾರೆ. ಉದ್ಯೋಗ ಹುಡುಕುತ್ತಿರುವ ಜನರಿಗೆ ಅವರು ಬಯಸಿದ ಕೆಲಸ ಸಿಗುತ್ತದೆ. ನಿಂತು ಹೋಗಿದ್ದ ಹಣ ಕೈ ಸೇರುವುದು.  

ಇದನ್ನೂ ಓದಿ :  ಬೆಳ್ಳಿಯ ಉಂಗುರ ಅದೃಷ್ಟವನ್ನೇ ಬದಲಿಸಿ ಬಿಡಬಹುದು, ಹೇಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News