ಬೆಂಗಳೂರು: ದೇವತೆಗಳು ಮತ್ತು ಅಸುರರು ಒಟ್ಟಾಗಿ ಕ್ಷೀರಸಾಗರವನ್ನು ಮಥಿಸಿದಾಗ, ಅದರಿಂದ ಹೊರಬಂದ 14 ರತ್ನಗಳಲ್ಲಿ ಶಂಖವೂ ಒಂದು. ಸನಾತನ ಧರ್ಮದಲ್ಲಿ, ಬಹುತೇಕ ಎಲ್ಲ ದೇವತೆಗಳನ್ನು ಪೂಜಿಸುವಾಗ ಶಂಖ ಊದಲಾಗುತ್ತದೆ. ಶಂಖದ ಶಬ್ದವು ಇಡೀ ವಾತಾವರಣವನ್ನು ಸಕಾರಾತ್ಮಕತೆಯಿಂದ ತುಂಬುತ್ತದೆ. ಮಾತಾ ಲಕ್ಷ್ಮಿ ಶಂಖದ ಧ್ವನಿಯನ್ನು ತುಂಬಾ ಇಷ್ಟಪಡುತ್ತಾಳೆ, ಆದರೆ ಅವಳು ವಿಶೇಷವಾಗಿ ದಕ್ಷಿಣವರ್ತಿ ಶಂಖವನ್ನು (Dakshinavarty Shankh) ಇಷ್ಟಪಡುತ್ತಾಳೆ. ದಕ್ಷಿಣವರ್ತಿ ಶಂಖ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಶಂಖವನ್ನು ಹೇಗೆ ಇಡುವುದು?
ಬಡತನವನ್ನು ತೊಡೆದುಹಾಕಲು ಅಥವಾ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು, ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಶಂಖವನ್ನು ಇರಿಸುವಂತೆ ಸೂಚಿಸಲಾಗುತ್ತದೆ. ಇದರಿಂದಾಗಿ ಸಂಪತ್ತಿನ ದೇವಿಯ ಅನುಗ್ರಹ ಸದಾ ನಿಮ್ಮ ಮನೆಯ ಮೇಲೆ ಇರಲಿದೆ. ಈ ದಕ್ಷಿಣವರ್ತಿ ಶಂಖವನ್ನು (Dakshinavarty Shankh) ಮನೆಯಲ್ಲಿ ಇಡುವ ಮೊದಲು ಅದನ್ನು ಶುದ್ಧೀಕರಿಸಿ. ನಂತರ ಅದನ್ನು ನಿಯಮಗಳ ಪ್ರಕಾರ ಪೂಜಿಸಿ ಪೂಜಾ ಮನೆಯಲ್ಲಿ ಸ್ಥಾಪಿಸಿ. ಪ್ರತಿದಿನ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಶಂಖವನ್ನು ಸಹ ಪೂಜಿಸಬೇಕು.
ಇದನ್ನೂ ಓದಿ- Tulsi Plant: ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ
ದಕ್ಷಿಣವರ್ತಿ ಶಂಖದ ಪ್ರಯೋಜನಗಳು:
ವ್ಯವಹಾರದಲ್ಲಿ ಯಶಸ್ಸು- ವ್ಯವಹಾರದಲ್ಲಿ ತೊಂದರೆ ಇದ್ದರೆ, ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ಉಳಿಯದಿದ್ದರೆ ನಿಮ್ಮ ಕೆಲಸದ ಸ್ಥಳದಲ್ಲಿ ಭಗವಾನ್ ವಿಷ್ಣುವಿನ (Lord Vishnu) ಫೋಟೋದ ಜೊತೆಗೆ ಶಂಖವನ್ನು ಇರಿಸಿ. ದೇವರು ಮತ್ತು ಶಂಖವನ್ನು ಪ್ರತಿದಿನ ಪೂಜಿಸಿ, ನಂತರ ಗಂಗಾಜಲವನ್ನು ಶಂಖದಲ್ಲಿ ತುಂಬಿಸಿ ಇಡೀ ಅಂಗಡಿ ಅಥವಾ ಕಚೇರಿಯಲ್ಲಿ ಸಿಂಪಡಿಸಿ.
ವಿವಾಹಿತರ ಜೀವನದಲ್ಲಿ ಮಾಧುರ್ಯಕ್ಕಾಗಿ- ವೈವಾಹಿಕ ಜೀವನದಲ್ಲಿನ ಯಾವುದೇ ರೀತಿಯ ಸಮಸ್ಯೆಗಳನ್ನು ನಿವಾರಿಸಲು ನಿಮ್ಮ ಹಾಸಿಗೆಯ ಬಳಿ ಸೀಸದಿಂದ ಮಾಡಿದ ಬಟ್ಟಲಿನಲ್ಲಿ ಸಣ್ಣ ಶಂಖವನ್ನು ಇರಿಸಿ. ಹೀಗೆ ಮಾಡುವುದರಿಂದ ಈ ಕೋಣೆಯಲ್ಲಿನ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಮತ್ತು ಸಂಬಂಧದಲ್ಲಿ ಮಾಧುರ್ಯ ಬರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Dream Interpretation: ಯಾವ ಸಮಯದಲ್ಲಿ ಬೀಳುವ ಕನಸು ಎಷ್ಟು ದಿನಗಳ ನಂತರ ಫಲ ನೀಡಲಿದೆ ಗೊತ್ತಾ!
ರೋಗವನ್ನು ತಪ್ಪಿಸಲು- ಮನೆಯ ಸದಸ್ಯರು ಸದಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಮನೆಯಲ್ಲಿ ಅನಗತ್ಯ ಜಗಳ ನಡೆಯುತ್ತಿದ್ದರೆ, ಶಂಖವನ್ನು ಪೂಜಿಸಿ ಅದರಿಂದ ತುಳಸಿಗೆ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮನೆಯ ಸಮಸ್ಯೆ ನಿವಾರಣೆಯಾಗುತ್ತದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.