Palmistry: ಮಹಿಳೆಯರ ಕೈಗಳಲ್ಲಿನ ಈ ಚಿಹ್ನೆಗಳು ಶುಭ ಸಂಕೇತಗಳನ್ನು ಸೂಚಿಸುತ್ತವೆ

Palmistry - ಹಸ್ತ ಸಾಮುದ್ರಿಕ (Hastrekha Shastra) ಶಾಸ್ತ್ರದಲ್ಲಿ ಕೈಗಳಲ್ಲಿನ ರೇಷಗಳ ಹೊರತಾಗಿ, ಬೆರಳುಗಳ ಆಕಾರ ಹಾಗೂ ಕೈಗಳ ಮೇಲಿನ ಕಲೆಗಳದ್ದೂ ಕೂಡ ವಿಶೇಷ ಮಹತ್ವವಿದೆ. ಈ ಗುರುತುಗಳು ಅಥವಾ ಚಿಹ್ನೆಗಳು (Palm Marks) ಹಲವು ರೀತಿಯ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ.

Palmistry -  ಹಸ್ತ ಸಾಮುದ್ರಿಕ (Hastrekha Shastra) ಶಾಸ್ತ್ರದಲ್ಲಿ ಕೈಗಳಲ್ಲಿನ ರೇಷಗಳ ಹೊರತಾಗಿ, ಬೆರಳುಗಳ ಆಕಾರ ಹಾಗೂ ಕೈಗಳ ಮೇಲಿನ ಕಲೆಗಳದ್ದೂ ಕೂಡ ವಿಶೇಷ ಮಹತ್ವವಿದೆ. ಈ ಗುರುತುಗಳು ಅಥವಾ ಚಿಹ್ನೆಗಳು (Palm Marks) ಹಲವು ರೀತಿಯ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ. ಕೆಲವು ರೇಷೆಗಳು ಮಹಿಳೆಯರಿಗೆ ಮತ್ತು ಪುರುಷರಿಗೆ ವಿಭಿನ್ನ ಮುನ್ಸೂಚನೆಗಳನ್ನು ನೀಡುವಂತೆಯೇ, ಈ ಗುರುತು ಅಥವಾ ಚಿಹ್ನೆಗಳು ಮಹಿಳೆ ಮತ್ತು ಪುರುಷರಲ್ಲಿ ವಿಭಿನ್ನ ಪ್ರಾಮುಖ್ಯತೆಗಳನ್ನು ಹೊಂದಿವೆ.  ಹಾಗಾದರೆ ಬನ್ನಿ ಮಹಿಳೆಯರ (Female Palm) ಅಂಗೈಯಲ್ಲಿ (Palmistry) ಇರುವ ಗುರುತುಗಳ ಬಗ್ಗೆ ತಿಳಿದುಕೊಳ್ಳೋಣ. ಇವು ಮೆಹಿಲೆಯರಲ್ಲಿ ಧನ (Money), ಸುಖ-ಸಮೃದ್ಧಿ ಹಾಗೂ ಅವರ ಸಂಗಾತಿಯ ಕುರಿತು ಹೇಳುತ್ತವೆ.

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಸೂಚನೆಗಳು ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿವೆ. ಝೀ ಹಿಂದುಸ್ತಾನ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Garuda Purana: ಗರುಡ ಪುರಾಣದ ಪ್ರಕಾರ ಇವುಗಳನ್ನು ಕಂಡರೆ ಸಾಕು ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ದೊಡ್ಡ ಅಧಿಕಾರಿಯ ಜೊತೆಗೆ ವಿವಾಹ ಯೋಗ - ಯಾವ ಮಹಿಳೆ ಅಥವಾ ಯುವತಿಯ ಕೈಗಳಲ್ಲಿ ಧ್ವಜ ಹಾಗೂ ರಥದ ಚಿಹ್ನೆ ಇರುತ್ತದೆಯೋ ಅವರ ವಿವಾಹ ದೊಡ್ಡ ಅಧಿಕಾರಿಯ ಜೊತೆ ನಡೆಯುತ್ತದೆ ಅಥವಾ ವಿವಾಹದ ಬಳಿಕ ಅವರ ಪತಿ ಉನ್ನತ ಹುದ್ದೆ ಅಲಂಕರಿಸುತ್ತಾರೆ.

2 /5

2. ಇವರ ಪತಿ ದೊಡ್ಡ ಉದ್ಯಮಿಯಾಗಿರುತ್ತಾರೆ - ಬಲ ಅಂಗೈಯಲ್ಲಿ ತಕ್ಕಡಿಯ ಗುರುತು ಅಥವಾ ಆಕಾರ ಇದ್ದರೆ, ಅಂತಹ ಮಹಿಳೆಯರ ಪತಿ ದೊಡ್ಡ ಉದ್ಯಮಿ ಇರುತ್ತಾರೆ. ಎಡ ಅಂಗೈಯಲ್ಲಿ ಆನೆ ಅಥವಾ ನಂದಿಯ ಗುರುತು ಇರುವುದು ಕೂಡ ಇದೇ ರೀತಿಯ ಯೋಗವನ್ನು ಹೊಂದಿರುತ್ತಾರೆ.

3 /5

3. ಸಂತಾನಕ್ಕೆ ಉನ್ನದ ಹುದ್ದೆಯ ಯೋಗ - ಯಾವ ಮಹಿಳೆಯರ ಕೈಯಲ್ಲಿ ಶಂಖ ಹಾಗೂ ಚಕ್ರದ ಚಿಹ್ನೆಗಳಿರುತ್ತವೆಯೋ ಅವರು ಸಂತಾನದ  (ಪುತ್ರ /ಪುತ್ರಿ) ವಿಷಯದಲ್ಲಿ ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ. ಅವರ ಪುತ್ರ ಅಥವಾ ಪುತ್ರಿ ಉನ್ನತ ಹುದ್ದೆ ಅಲಂಕರಿಸುವುದರ ಜೊತೆಗೆ ತುಂಬಾ ವೈಭವೋಪೇತ ಜೀವನ ಕಳೆಯುತ್ತಾರೆ.

4 /5

4. ಈ ಮಹಿಳೆಯರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಪ್ರಾಪ್ತಿಯಾಗುತ್ತದೆ - ಅಂಗೈಯಲ್ಲಿ ಕಮಲದ ಚಿಹ್ನೆಯನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರ ಅಂಗೈಯಲ್ಲಿ ಕಮಲ ಅಥವಾ ಮೀನಿನಂತಹ ಆಕೃತಿ ಇದ್ದರೆ, ಅವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಲಭಿಸುತ್ತದೆ.

5 /5

5. ಈ ಮಹಿಳೆಯರ ಮನೆಯಲ್ಲಿ ಧನವೃಷ್ಟಿ - ಮಹಿಳೆಯರ ಅಂಗೈ ಗುಲಾಬಿಯಾಗಿರುವುದರ ಜೊತೆಗೆ ಅವರ ಕೈಯಲ್ಲಿ ಸ್ವಸ್ತಿಕ ಚಿಹ್ನೆ ನಿರ್ಮಾಣಗೊಂಡಿದ್ದರೆ, ಅವರ ಮನೆಯಲ್ಲಿ ಧನವೃಷ್ಟಿಯಾಗುತ್ತದೆ. ಇದಲ್ಲದೆ ಅವರು ವರಿಸಿ ಹೋಗುವ ಮನೆಯಲ್ಲಿಯೂ ಕೂಡ ಹಣಕಾಸಿನ ಮುಗ್ಗಟ್ಟು ಎಂದಿಗೂ ಎದುರಾಗುವುದಿಲ್ಲ .