ಈ ದಿನದವರೆಗೆ ಮಾರುತಿ ನೀಡುತ್ತಿದೆ ಫ್ರೀ ಸರ್ವಿಸ್ ಮತ್ತು ಎಕ್ಸ್ ಟೆಂಡೆಡ್ ವಾರಂಟಿಯ ಲಾಭ

ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಫ್ರೀ ಸರ್ವಿಸ್, ಪ್ರೈಮರಿ ಮತ್ತು ಎಕ್ಸ್ ಟೆಂಡೆಡ್ ವಾರಂಟಿಯ ಅವಧಿಯನ್ನು ವಿಸ್ತರಿಸಿದೆ.   

ನವದೆಹಲಿ :  ಮಾರುತಿ ಸುಜುಕಿಯ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ನೀವು ಹೊಸ ಮಾರುತಿ ಕಾರನ್ನು ಖರೀದಿಸಿದ್ದರೆ ಮತ್ತು ಕಾರು ಫ್ರೀ ಸರ್ವಿಸಿಂಗ್ ದಿನಾಂಕ ಇತ್ತೀಚೆಗೆ ಮುಗಿದಿದ್ದರೆ ಯೋಚಿಸಬೇಕಿಲ್ಲ. ನೀವು 2021 ಜುಲೈ 31 ರವರೆಗೆ ಫ್ರೀ ಸರ್ವಿಸಿಂಗ್ ಲಾಭವನ್ನು ಪಡೆಯಬಹುದು. ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಫ್ರೀ ಸರ್ವಿಸ್, ಪ್ರೈಮರಿ ಮತ್ತು ಎಕ್ಸ್ ಟೆಂಡೆಡ್ ವಾರಂಟಿಯ ಅವಧಿಯನ್ನು ವಿಸ್ತರಿಸಿದೆ.   
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ಮೊದಲು ಫ್ರೀ ಸರ್ವಿಸಿಂಗ್ ಪಡೆಯಲು 30 ಜೂನ್ 2021 ಕೊನೆಯ ದಿನಾಂಕವಾಗಿತ್ತು. ಕರೋನಾ ಅವಧಿಯಲ್ಲಿ ತನ್ನ ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.  

2 /5

 ನಿಮ್ಮ ಕಾರಿನ  ಫ್ರೀ ಸರ್ವಿಸಿಂಗ್  ಮತ್ತು ವಾರಂಟಿ ಅವಧಿ  15 ಮಾರ್ಚ್ 2021 ರಿಂದ 30 ಜೂನ್ 2021 ರ ನಡುವೆ ಮುಗಿದಿದ್ದರೆ, ನೀವು ಈ ಎಕ್ಸ್ ಟೆಂಡೆಡ್ ಸೇವೆಯ ಲಾಭವನ್ನು ಪಡೆಯಬಹುದು.

3 /5

ನಿಮ್ಮ ಕಾರಿನ  ಫ್ರೀ ಸರ್ವಿಸಿಂಗ್  ದಿನಾಂಕವು ಮುಗಿದಿದ್ದರೆ, ಆ ಅವಧಿಯು  15 ಮಾರ್ಚ್ 2021 ರಿಂದ 30 ಜೂನ್ 2021 ರ ನಡುವೆ ಇದ್ದರೆ, ಈಗಲೂ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದು. ಇದರ ಅಡಿಯಲ್ಲಿ, ನಿಮ್ಮ ಕಾರನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಉಚಿತ ಟಾಪ್ ವಾಶ್ ಸಹ ನೀಡಲಾಗುತ್ತಿದೆ. ಲೇಬರ್ ಚಾರ್ಜ್ ಮೇಲೆ ಕೂಡ ಆಫರ್ ನೀಡುತ್ತಿದೆ.

4 /5

ಕಂಪನಿಯ ಅಧಿಕೃತ ವೆಬ್‌ಸೈಟ್ https://www.marutisuzuki.com/ ಗೆ ಭೇಟಿ ನೀಡುವ ಮೂಲಕ ಕಾರ್ ಸರ್ವಿಸ್ ಅನ್ನು  ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

5 /5

ವೋಕ್ಸ್‌ವ್ಯಾಗನ್ ಇಂಡಿಯಾ, ನಿಸ್ಸಾನ್ ಇಂಡಿಯಾ, ಟಾಟಾ ಮೋಟಾರ್ಸ್, ಎಂಜಿ ಮೋಟಾರ್ಸ್, ಹೋಂಡಾ ಕಾರ್ಸ್ ಇಂಡಿಯಾ ಮತ್ತು ಹ್ಯುಂಡೈ ಕಾರುಗಳ ಮೇಲಿನ ಫ್ರೀ ಸರ್ವಿಸ್ ಮತ್ತು ವಾರಂಟಿ  ಅವಧಿಯನ್ನು ವಿಸ್ತರಿಸಲಾಗಿದೆ. ಇದರಿಂದ ಗ್ರಾಹಕರು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ