OMG: ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ..!

ಚಿಕ್ಕಮಗಳೂರಿನಲ್ಲಿ ಹಸುವಿನ ಹೊಟ್ಟೆಯಿಂದ 21 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆಯಲಾಗಿದೆ.

Written by - Puttaraj K Alur | Last Updated : Jul 20, 2021, 05:59 PM IST
  • ಚಿಕ್ಕಮಗಳೂರಿನ ಕಡೂರಿನಲ್ಲಿ ಹಸುವಿನ ಹೊಟ್ಟೆಯಿಂದ 21KG ಪ್ಲಾಸ್ಟಿಕ್ ಹೊರತೆಗೆದ ಪಶವೈದ್ಯರು
  • ಬೀದಿ ಬೀದಿಗಳಲ್ಲಿ ತ್ಯಾಜ್ಯ ಸೇವಿಸುತ್ತಿದ್ದ ಹಸು ಪ್ಲಾಸ್ಟಿಕ್ ತಿನ್ನುವುದನ್ನು ರೂಢಿಸಿಕೊಂಡಿತ್ತು
  • ಪರಿಸರ ಮಾಲಿನ್ಯಕ್ಕೆ & ಪ್ರಾಣಿಗಳ ಜೀವಕ್ಕೆ ಕುತ್ತಾಗುವ ಪ್ಲಾಸ್ಟಿಕ್ ಬಳಕೆ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕಾಗಿದೆ
OMG: ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ..!  title=
ಹುಸುವಿನ ಹೊಟ್ಟೆಯಲ್ಲಿತ್ತು 21 ಕೆಜಿ ಪ್ಲಾಸ್ಟಿಕ್

ಚಿಕ್ಕಮಗಳೂರು: ದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದ್ದರೂ ಅದರ ಬಳಕೆ ಮಾತ್ರ ಇನ್ನೂ ನಿಂತಿಲ್ಲ. ಭೂಮಿಯಲ್ಲಿ ಕರಗದ ಈ ಪ್ಲಾಸ್ಟಿಕ್ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ಮನೆ, ಅಂಗಡಿ, ಕೈಗಾರಿಕೆಗಳಿಂದ ಹೊರಬೀಳುವ ಪ್ಲಾಸ್ಟಿಕ್ ಕೇವಲ ಪರಿಸರ ಮಾಲಿನ್ಯವನ್ನಷ್ಟೇ ಉಂಟು ಮಾಡುವುದಿಲ್ಲ. ಅದು ಪ್ರಾಣಿಗಳ ಜೀವಕ್ಕೂ ಅಪಾಯ ತಂದೊಡ್ಡುತ್ತದೆ.

ಹೌದು, ಪ್ಲಾಸ್ಟಿಕ್(Plastic) ಪ್ರಾಣಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಪ್ರತಿದಿನ ಬೀದಿಗಳಲ್ಲಿ ಎಸೆಯುವ ಹಣ್ಣು, ತರಕಾರಿ ತ್ಯಾಜ್ಯದ ಜೊತೆಗೆ ಪ್ರಾಣಿಗಳು ಪ್ಲಾಸ್ಟಿಕ್ ಸೇವಿಸುತ್ತವೆ. ಹೀಗೆ ಪ್ಲಾಸ್ಟಿಕ್ ಸೇವಿಸುವುದನ್ನು ರೂಢಿಸಿಕೊಳ್ಳುವ ಹಸುಗಳು ನಂತರ ತಮ್ಮ ಆಹಾರ ಸೇವಿಸುವುದನ್ನೇ ನಿಲ್ಲಿಸುತ್ತವೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಪ್ಲಾಸ್ಟಿಕ್ ಸೇವನೆಯು ಹಸುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಅವುಗಳ ಆಂತರಿಕ ಅಂಗಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದು ದೇಹದೊಳಗೆ ಸೇರಿದಂತೆ ಹಸು ಹಾಲು ನೀಡುವುದನ್ನೇ ನಿಲ್ಲಿಸಬಹುದು. ಒಂದು ವೇಳೆ ನೀಡಿದರೂ ಹಾಲು ವಿಷಕಾರಿ ಅಂಶಗಳಿಂದ ಕೂಡಿರುತ್ತದೆ.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯವಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಮನಷ್ಯರಾದ ನಾವು ಪರಿಸರವನ್ನು ಎಷ್ಟು ಹಾಳುಮಾಡುತ್ತಿದ್ದೇವೆಂಬುದಕ್ಕೆ ಸ್ಪಷ್ಟ ನಿದರ್ಶನದಂತಿದೆ. ಜುಲೈ 15ರಂದು ಕಡೂರಿನಲ್ಲಿ ಪಶುವೈದ್ಯರೊಬ್ಬರು ಹಸು(Cow)ವಿನ ಹೊಟ್ಟೆಯಿಂದ ಬರೋಬ್ಬರಿ 21 ಕೆಜಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದಿದ್ದಾರೆ. ಬೀದಿ ಬೀದಿಗಳಲ್ಲಿ ತ್ಯಾಜ್ಯ ಸೇವಿಸುತ್ತಿದ್ದ ಹಸು ಪ್ಯಾಸ್ಟಿಕ್ ತಿನ್ನುವುದುನ್ನು ರೂಢಿಸಿಕೊಂಡಿದೆ. ಇತ್ತೀಚೆಗೆ ಅದರ ಆರೋಗ್ಯದಲ್ಲಿ ಏರು-ಪೇರಾಗಿದ್ದನ್ನು ಗಮನಿಸಿದ ಅದರ ಮಾಲೀಕರು ಪಶುವೈದ್ಯರಿಗೆ ತೋರಿಸಿದ್ದರು.

3-4 ವರ್ಷದ ಆಕಳಿನ ಆರೋಗ್ಯ ಪರಿಶೀಲಿಸಿದ ಪಶುವೈದ್ಯರು(Vet) ನಿರಂತರವಾಗಿ 4 ಗಂಟೆಗಳ ಕಾಲ ಸರ್ಜರಿ ನಡೆಸಿ ಹಸುವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಕಂಡ ಹಸು ಮಾಲೀಕರೆ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ಪಶುವೈದ್ಯ ಡಾ.ಬಿ.ಇ.ಅರುಣ್, ಯಾವುದೇ ಹಸು ಪ್ಲಾಸ್ಟಿಕ್ ಸೇವಿಸಿದ ಬಳಿಕ ಅದನ್ನು ಹೊರಗೆಹಾಕಲು ಸಾಧ್ಯವಾಗುವುದಿಲ್ಲ. ಪ್ಲಾಸ್ಟಿಕ್ ಜೀರ್ಣವಾಗದೆ ಹಸುವಿನ ಹೊಟ್ಟೆಯಲ್ಲಿಯೇ ಉಳಿದುಕೊಳ್ಳುತ್ತದೆ. ತಾಪಮಾನ ಹೆಚ್ಚಾದಾಗ ಪ್ಲಾಸ್ಟಿಕ್ ಸ್ವಲ್ಪ ಕರಗುತ್ತದೆ. ಹೀಗಾಗಿ ಹಸು ಇತರ ಆಹಾರವನ್ನು ಮುಟ್ಟುವುದಿಲ್ಲ. ಇದು ಹಸುವಿನ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: KRS ಗೋಡೆ ಕುಸಿತದ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತುವೆ: ಸುಮಲತಾ ಅಂಬರೀಶ್

ಪ್ರಾಣಿಗಳ ಜೀವಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಅನ್ನು ಬೀದಿಗಳಲ್ಲಿ ಎಸೆಯಬಾರದು, ತ್ಯಾಜ್ಯದಲ್ಲಿ ಕೂಡಿಸಬಾರದು. ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಬೇಕು. ಪರಿಸರ ಮಾಲಿನ್ಯ(Environmental pollution)ದ ಜೊತೆಗೆ ಪ್ರಾಣಿಗಳ ಜೀವಕ್ಕೆ ಕುತ್ತು ತರುವ ಪ್ಲಾಸ್ಟಿಕ್ ಬಳಕೆ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕೆಂದು ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News