ಶ್ರೀನಗರ್: Cloudburst Hits J&K - ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಹೊಂಜಾರ್ ಪ್ರದೇಶದ (Kishtwar Cloudbrust) ಗ್ರಾಮವೊಂದರಲ್ಲಿ ಮೋಡ ಸ್ಫೋಟದ ಘಟನೆ ಸಂಭವಿಸಿದ್ದು, ಸುಮಾರು ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸುಮಾರು 35 ರಿಂದ 39 ಜನರು ನಾಪತ್ತೆಯಾಗಿದ್ದಾರೆ ಎಂದೂ ಕೂಡ ವರದಿಯಾಗಿದೆ. ಭುಧವಾರ ಬೆಳಗ್ಗೆ ಸುಮಾರು 4.20ರ ಸುಮಾರಿಗೆ ಸಂಭವಿಸಿರುವ ಈ ಘಟನೆಯಲ್ಲಿ 6 ರಿಂದ 8 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ ಎನ್ನಲಾಗಿದೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಪೊಲೀಸ್ ಹಾಗೂ ಆಡಳಿತ ತಂಡಗಳು ಘಟನಾ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರದೇಶದ ಡಚ್ಚನ್ ಪ್ರಾಂತ್ಯದ ರಸ್ತೆ ಇಲ್ಲದ ಪ್ರದೇಶದಲ್ಲಿ ಸಂಭವಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಈ ಘಟನೆಯಲ್ಲಿ ಸುಮಾರು 6 ರಿಂದ 8 ಮನೆಗಳು ಸೇರಿದಂತೆ 1 ರಾಶನ್ ಡಿಪೋ ಸಂಪೂರ್ಣ ಹಾನಿಗೊಳಗಾಗಿವೆ. ಇನ್ನೊಂದೆಡೆ ಈ ಘಟನೆಯಲ್ಲಿ ನಾಲ್ವರು ಕುರುಬರು ಸೇರಿದಂತೆ 35 ಜನರು ನಾಪತ್ತೆಯಾಗಿದ್ದು, ಇದುವರೆಗೆ ಸುಮಾರು ನಾಲ್ವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.
ಇದೇ ವೇಳೆ ಮೋಡದ ಸ್ಫೋಟದಿಂದಾಗಿ ಕಿಶ್ತ್ವಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಾಲ್ಕು ಸೇತುವೆಗಳು ಕೊಚ್ಚಿ ಹೋಗಿವೆ. ಘಟನೆಯಲ್ಲಿ ಮೃತಪಟ್ಟವರನ್ನು ಸಜ್ಜಾ ಬೇಗಂ (65 ವರ್ಷ), ರಕಿತಾ ಬೇಗಂ (24 ವರ್ಷ), ಎ ಅಲೆಮಾರಿ, ಗುಲಾಮ್ ನಬಿ ತಾಂತ್ರೆ (42 ವರ್ಷ) ಮತ್ತು ಅಬ್ದುಲ್ ಮಜೀದ್ (42 ವರ್ಷ) ಎಂದು ಗುರುತಿಸಲಾಗಿದೆ.
ಸ್ಥಳೀಯ ಪೊಲೀಸರು ಹಾಗೂ ಹವಾಮಾನ ಇಲಾಖೆಯ ಮನವಿ
ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಪೊಲೀಸರು, ಕಿಶ್ತ್ವಾರಾದಲ್ಲಿ ಭಾರಿ ಮಳೆಯ ಹಿನ್ನೆಲೆ ವಿಪತ್ತಿನ ಸ್ಥಿತಿಯಲ್ಲಿ SSP ಕಿಶ್ತ್ವಾರಾ 9419119202, Adl.SP ಕಿಶ್ತ್ವಾರಾ 9 469181254, ಡೆಪ್ಯುಟಿ SP ಮುಖ್ಯಾಲಯ 9622640198, SDPO ಎಥೋಲಿ 9858512348 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದ್ದಾರೆ.
#KishtwarPoliceHelpDesk
In view of heavy rainfall in Kishtwar, In case of any emergency, people can contact the following officers.
SSP Kishtwar 9419119202
Adl.SP Kishtwar9469181254
Dy.SP Hqrs9622640198
SDPO Atholi9858512348@JmuKmrPolice @ZPHQJammu @Shafqat23962567 @kishtwari099 pic.twitter.com/pG3anopvI4— DISTRICT POLICE KISHTWAR (@SSPKishtwar) July 27, 2021
ಹವಾಮಾನ ಇಲಾಖೆಯ (IMD) ಪ್ರಕಾರ ಸದ್ಯ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ಮೋಡ ಕವಿದಿದ್ದು, ಪೂಂಚ್, ರಾಜೌರಿ, ರಿಯಾಸಿ ಹಾಗೂ ಅಕ್ಕಪಕ್ಕದ ಕೆಲ ಸ್ಥಾನಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ (Heavy Rain). ಜುಲೈ 30 ರವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಕೆಲ ಕಡೆಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಇದರಿಂದ ಆಕಸ್ಮಿಕವಾಗಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇದಲ್ಲದೆ ಭೂಕುಸಿತದ (Landslide) ಘಟನೆ ಸಂಭವಿಸುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಲ್ಲರಿಗೂ ಎಚ್ಚರಿಕೆಯಿಂದಿರಲು ಸೂಚನೆ ನೀಡಿದೆ.
ಇದನ್ನೂ ಓದಿ-Indian Railways:ಈಗ train miss ಆಗುವ ಭಯವಿಲ್ಲ, ರೈಲ್ವೆ ನೀಡಿದೆ ಹೊಸ ಸೌಲಭ್ಯ
LG-ಗೃಹ ಸಚಿವರಿಂದ ಸೂಚನೆ
ಇನ್ನೊಂದೆಡೆ ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಕಿಶ್ತ್ವಾರ್ನಲ್ಲಿ ಮೋಡ ಸ್ಫೋಟದ ಬಗ್ಗೆ ನಾನು ಜಮ್ಮು ಮತ್ತು ಕಾಶ್ಮೀರದ LG ಮತ್ತು DGP ಅವರೊಂದಿಗೆ ಮಾತನಾಡಿದ್ದೇನೆ. SDRF, ಸೇನೆ ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, NDRF ಕೂಡ ಅಲ್ಲಿಗೆ ತಲುಪಲಿದೆ ಸಾಧ್ಯವಾದಷ್ಟು ಜೀವಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿದ್ದು, ದುಃಖಿತ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ." ಎಂದಿದ್ದಾರೆ.
ಇದನ್ನೂ ಓದಿ- Automatic Cash Delivery: ಎಟಿಎಂನಿಂದ ಇದ್ದಕ್ಕಿದ್ದಂತೆ 500-500 ನೋಟುಗಳು ಹೊರಬಂದಾಗ...!
किश्तवार (J&K) में बादल फटने के संबंध में मैंने जम्मू-कश्मीर के LG और DGP से बात की है। SDRF, सेना और स्थानीय प्रशासन बचाव कार्य में लगा हुआ है, NDRF भी वहाँ पहुँच रही है। अधिक से अधिक लोगों की जान बचाना हमारी प्राथमिकता है। शोकाकुल परिवारों के प्रति संवेदना व्यक्त करता हूँ।
— Amit Shah (@AmitShah) July 28, 2021
ಇದಲ್ಲದೆ ಘಟನೆಯ ಕುರಿತು ಹೇಳಿಕೆ ನೀಡಿರುವ LG ಮನೋಜ್ ಸಿನ್ಹಾ 'ಹಿರಿಯ ಅಧಿಕಾರಿಗಳು ಮತ್ತು ಕಿಶ್ತ್ವಾರ್ ಜಿಲ್ಲಾಡಳಿತದೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದ್ದು, ಜನರನ್ನು ರಕ್ಷಿಸಲು ಮತ್ತು ಕಾಣೆಯಾದವರನ್ನು ಪತ್ತೆಹಚ್ಚಲು ಸೇನೆ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾನು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ-ನೂತನ ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ, ಅಮಿತ್ ಶಾ ಅಭಿನಂದನೆ: ಬಿಎಸ್ವೈ ಬಗ್ಗೆ ಹೊಗಳಿಕೆ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ