ಈ ದೇಶದಲ್ಲಿ ಸೈನ್ಯಕ್ಕೆ ಸೇರುವ ಮಹಿಳೆಯೆರಿಗೆ ಮಾಡಲಾಗುತ್ತೆ Virginity Test : ಈ ಬದಲಾವಣೆಗೆ ಮುಂದಾದ ಸರ್ಕಾರ

ಸೇನೆಗೆ ಸೇರಲು ಇಚ್ಛಿಸುವ ಮಹಿಳೆಯರಿಗೆ ಇನ್ನು ಮುಂದೆ ಕನ್ಯತ್ವ ಪರೀಕ್ಷೆ ಇರುವುದಿಲ್ಲ ಎಂದು ಇಂಡೋನೇಷಿಯಾದ ಸೇನಾ ಮುಖ್ಯಸ್ಥರು ಹೇಳಿದ್ದಾರೆ. 

Written by - Channabasava A Kashinakunti | Last Updated : Aug 11, 2021, 10:08 PM IST
  • ಅನಾದಿಕಾಲದಿಂದಲೂ ಇಂಡೋನೇಷ್ಯಾದ ಸೇನಾ ನೇಮಕಾತಿಯಲ್ಲಿ ಮಹಿಳೆಯರ ತಾರತಮ್ಯ
  • ಸೇನೆಗೆ ಸೇರಲು ಇಚ್ಛಿಸುವ ಮಹಿಳೆಯರಿಗೆ ಇನ್ನು ಮುಂದೆ ಕನ್ಯತ್ವ ಪರೀಕ್ಷೆ
  • ಇನ್ನು ಮುಂದೆ ಕನ್ಯತ್ವ ಪರೀಕ್ಷೆ ಇರುವುದಿಲ್ಲ ಎಂದು ಸೇನಾ ಮುಖ್ಯಸ್ಥ
ಈ ದೇಶದಲ್ಲಿ ಸೈನ್ಯಕ್ಕೆ ಸೇರುವ ಮಹಿಳೆಯೆರಿಗೆ ಮಾಡಲಾಗುತ್ತೆ Virginity Test : ಈ ಬದಲಾವಣೆಗೆ ಮುಂದಾದ ಸರ್ಕಾರ title=

ನವದೆಹಲಿ : ಅನಾದಿಕಾಲದಿಂದಲೂ ಇಂಡೋನೇಷ್ಯಾದ ಸೇನಾ ನೇಮಕಾತಿಯ ಹೆಸರಿನಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಮತ್ತು ದೌರ್ಜನ್ಯಗಳು ನಡೆಯುತ್ತಿದ್ದವು. ಆದರೆ ಈಗ ಬದಲಾಗುತ್ತಿರುವ ಕಾಲದೊಂದಿಗೆ, ಈ ಪ್ರವೃತ್ತಿಯಲ್ಲೂ ದೊಡ್ಡ ಬದಲಾವಣೆಯಾಗಿದೆ. ಸೇನೆಗೆ ಸೇರಲು ಇಚ್ಛಿಸುವ ಮಹಿಳೆಯರಿಗೆ ಇನ್ನು ಮುಂದೆ ಕನ್ಯತ್ವ ಪರೀಕ್ಷೆ ಇರುವುದಿಲ್ಲ ಎಂದು ಇಂಡೋನೇಷಿಯಾದ ಸೇನಾ ಮುಖ್ಯಸ್ಥರು ಹೇಳಿದ್ದಾರೆ. 

ಈ ಸೈನ್ಯದ ಪ್ರಕ್ರಿಯೆಯನ್ನು ಇಂಡೋನೇಷ್ಯಾದಲ್ಲಿ 'ಎರಡು-ಬೆರಳು ಪರೀಕ್ಷೆ'(Two-Finger Test) ಎಂದು ಕರೆಯಲಾಗುತ್ತದೆ, ಏಕೆಂದರೆ ವೈದ್ಯರು ಪರೀಕ್ಷೆಯ ಸಮಯದಲ್ಲಿ ಮಹಿಳೆಯ ಯೋನಿಯೊಳಗೆ ಎರಡು ಬೆರಳುಗಳನ್ನು ಹಾಕಿ ಆಕೆಯ ಕನ್ಯಾಪೋರೆ ಇದೆಯೇ ಅಥವಾ ಹರಡಿದೆಯಾ ಎಂದು ಪರೀಕ್ಷಿಸುತ್ತಿದ್ದರು. ತನಿಖೆಯ ಸಮಯದಲ್ಲಿ, ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಹಿಳೆಯರನ್ನು ಸೇನೆಯಲ್ಲಿ ನೇಮಕಾತಿಗೆ ಅರ್ಹರೆಂದು ಪರಿಗಣಿಸಲಾಗುತ್ತಿತ್ತು.

ಇದನ್ನೂ ಓದಿ : OMG ! ಈ ದೇಶದಲ್ಲಿ Ladies Fingerಗಳನ್ನು ಬೆಂಡೆಯಂತೆ ಕತ್ತರಿಸಿ ಸುಡುತ್ತಾರಂತೆ !

ನ್ಯೂಯಾರ್ಕ್ ಮೂಲದ ಹ್ಯೂಮನ್ ರೈಟ್ಸ್ ವಾಚ್ (HRW) ಪ್ರಕಾರ, ಎರಡು ಬೆರಳುಗಳ ಪರೀಕ್ಷೆಯು ಅತ್ಯಂತ ಅವಮಾನಕರ ಮತ್ತು ಕ್ರೂರ ವಿಧಾನವಾಗಿದೆ. ಈ ಸಂಸ್ಥೆಯು ಇದನ್ನು 2014 ರಲ್ಲಿ ತನಿಖೆ ಮಾಡಿತು ಮತ್ತು 2017 ರಲ್ಲಿ ಅದನ್ನು ತೊಡೆದುಹಾಕಲು ಹೊಸ ಅಭಿಯಾನವನ್ನು ಆರಂಭಿಸಿತು.

ನೇಮಕಾತಿಗಾಗಿ ನೈತಿಕತೆಯನ್ನು ಪರೀಕ್ಷಿಸಲು ಈ ಪ್ರಕ್ರಿಯೆ ಅಗತ್ಯ ಎಂದು ಇಂಡೋನೇಷಿಯಾ(Indonesia)ದ ಸೇನೆಯು ಈ ಹಿಂದೆ ಹೇಳಿತ್ತು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಈ ಪರೀಕ್ಷೆಗಳು ಯಾವುದೇ ವೈಜ್ಞಾನಿಕ ಮೌಲ್ಯವನ್ನು ಹೊಂದಿಲ್ಲ ಮತ್ತು ಹೈಮೆನ್ ಇರುವಿಕೆ ಅಥವಾ ಅನುಪಸ್ಥಿತಿಯು ಮಹಿಳೆ ಕನ್ಯೆಯೋ ಅಲ್ಲವೋ ಎಂಬುದನ್ನು ಸಾಬೀತುಪಡಿಸುವುದಿಲ್ಲ.

ಈ ರೀತಿಯ ಪರೀಕ್ಷೆಯನ್ನು ಇನ್ನು ಮುಂದೆ ಸೇನೆಯಲ್ಲಿ ಮಾಡಲಾಗುವುದಿಲ್ಲ ಎಂದು ಇಂಡೋನೇಷಿಯಾದ ಸೇನಾ ಮುಖ್ಯಸ್ಥ(Army Chife) ಆಂಡಿಕಾ ಪೆರ್ಕಾಸ ಮಂಗಳವಾರ ಹೇಳಿದ್ದಾರೆ. ಇದು ಹಿಂದೆ ಪರೀಕ್ಷೆಯ ಭಾಗವಾಗಿತ್ತು ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ : Corona Vaccine: ಈ ದೇಶದಲ್ಲಿ ಲಸಿಕೆ ಪಡೆಯದವರಿಗೆ ರೈಲು ಪ್ರಯಾಣ ನಿಷೇಧ

ಸೇನೆಯ ಮುಖ್ಯಸ್ಥರು ಕೆಲವು ದಿನಗಳ ಹಿಂದೆ ಪುರುಷರು ಮತ್ತು ಮಹಿಳೆಯರಿಗೆ ಸೇನೆಯ ಆಯ್ಕೆ ಪ್ರಕ್ರಿಯೆ ಒಂದೇ ರೀತಿ ಇರಬೇಕು ಎಂದು ಹೇಳಿದ್ದರು. ನೇಮಕಾತಿ(Recruits)ಯ ಸಮಯದಲ್ಲಿ ಯಾರ ವಿರುದ್ಧವೂ ತಾರತಮ್ಯ ಮಾಡುವುದು ಸರಿಯಲ್ಲ. ಸೇನೆಯ ಈ ನಿರ್ಧಾರವನ್ನು ಸ್ವಾಗತಿಸಿದ ಮಾನವ ಹಕ್ಕುಗಳ ಕಾರ್ಯಕರ್ತರು ಇಂತಹ ಪರೀಕ್ಷೆಗಳು ಮಹಿಳೆಯರ ಮೇಲಿನ ದೌರ್ಜನ್ಯದ ಸಾಧನ ಎಂದು ಹೇಳಿದರು. ಸೈನ್ಯವನ್ನು ಹೊರತುಪಡಿಸಿ, ಇಂಡೋನೇಷ್ಯಾದ ನೌಕಾಪಡೆ ಮತ್ತು ವಾಯುಪಡೆಯೂ ಈ ಪರೀಕ್ಷೆಯನ್ನು ಮಾಡುವುದನ್ನು ನಿಲ್ಲಿಸಿವೆ, ಅದರ ಬಗ್ಗೆ ಇನ್ನೂ ಏನೂ ಸ್ಪಷ್ಟವಾಗಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News