Papua Guinea - ವಿಶ್ವಾದ್ಯಂತ ಇರುವ ಹಲವು ದೇಶಗಳಲ್ಲಿ ವಿಭಿನ್ನ ಪದ್ಧತಿಗಳು ರೂಧಿಯಲ್ಲಿವೆ. ಹುಟ್ಟಿನಿಂದ ಸಾವಿನವರೆಗೆ ಕೆಲವು ವಿಶೇಷ ಸಂಪ್ರದಾಯಗಳಿವೆ, ಆದರೆ ಅನೇಕ ಸ್ಥಳಗಳಲ್ಲಿ ಈ ಸಂಪ್ರದಾಯಗಳು ಅತ್ಯಂತ ಕ್ರೂರ ಮತ್ತು ನೋವಿನಿಂದ ಕೂಡಿವೆ. ಅಂತಹ ಒಂದು ಸಂಪ್ರದಾಯವು ಇಂಡೋನೇಷ್ಯಾದ (Indonesia) ಪಪುವಾ ಗಿನಿಯಾ (Papua Guinea) ದ್ವೀಪದಲ್ಲಿ ವಾಸಿಸುವ 'ಡಾನಿ' ಬುಡಕಟ್ಟಿನ (Dani Tribe) ಜನಾಂಗದಲ್ಲಿಯೂ ಇದೆ, ಅದರ ಕುರಿತು ತಿಳಿದರೆ ನೀವೂ ಕೂಡ ಬೆಚ್ಚಿಬೀಳಬಹುದು.
ವಿಶ್ವದ ಅತ್ಯಂತ ಕ್ರೂರ ಹಾಗೂ ನೋವಿನಿಂದ ಕೂಡಿದ ಸಂಪ್ರದಾಯ
ಇಂಡೋನೇಷ್ಯಾದ ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ (Finger Cutting) ಬದುಕಲು ಒತ್ತಾಯಿಸಲಾಗುತ್ತದೆ. ಇದರ ಹಿಂದಿನ ಕಾರಣ ಎಂದರೆ ಹಳೆಯ ಸಂಪ್ರದಾಯ (Bizarre News). ಈ ಸಂಪ್ರದಾಯದ ಪ್ರಕಾರ, ಕುಟುಂಬದ ಮುಖ್ಯಸ್ಥನ ಸಾವಿನ ಬಳಿಕ ಸಂತಾಪ ಸೂಚಕವಾಗಿ (Mourning Practice) ಕುಟುಂಬದ ಮಹಿಳೆಯರ ಎರಡೂ ಕೈಗಳ ಬೆರಳುಗಳನ್ನು ಕತ್ತರಿಸಲಾಗುತ್ತದೆ.
ಇದನ್ನೂ ಓದಿ-ಈ ದೇಶದಲ್ಲಿ ಸ್ಥೂಲಕಾಯದ ಯುವತಿಯರಿಗೆ ಫುಲ್ ಡಿಮಾಂಡ್, ನೀಳಕಾಯದ ವಧು ಅಶುಭ ಅಂತೆ
ಆತ್ಮದ ಶಾಂತಿಗಾಗಿ ನೋವಿನಿಂದ ಕೂಡಿದ ಶಿಕ್ಷೆ
The Guardian ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇದು ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಶಾಂತಿ ನೀಡುತ್ತದೆ ಎಂಬುದು ಅಲ್ಲಿನ ಜನರ ಬಲವಾದ ನಂಬಿಕೆ. ಈ ಅವಧಿಯಲ್ಲಿ ಮಹಿಳೆಯರಿಗಾಗುವ ನೋವು ಯಾವುದೇ ವ್ಯಕ್ತಿಯ ಮನಸ್ಸು ಕಲಕುತ್ತದೆ. ಬೆರಳನ್ನು ಕತ್ತರಿಸುವ ಮೊದಲು, ಮಹಿಳೆಯರ ಬೆರಳುಗಳನ್ನು ಹಗ್ಗದಿಂದ ಕಟ್ಟಲಾಗುತ್ತದೆ. ಇದರಿಂದ ಬೆರಳುಗಳಿಗೆ ರಕ್ತದ ಹರಿವು ನಿಲ್ಲುತ್ತದೆ. ನಂತರ ಅವರ ಬೆರಳುಗಳನ್ನು ಕೊಡಲಿಯಿಂದ ಕತ್ತರಿಸಲಾಗುತ್ತದೆ.
ಇದನ್ನೂ ಓದಿ-OMG! ನಾಲಿಗೆಯಿಂದ ತನ್ನ ಹಣೆಯನ್ನೇ ಮುಟ್ಟಿಸೋ ವ್ಯಕ್ತಿ ಬಗ್ಗೆ ಗೊತ್ತಾ?
ಈ ಅವಧಿಯಲ್ಲಿ ಕೆಳಕ್ಕೆ ಬೀಳುವ ಬೆರಳುಗಳ ತುಂಡುಗಳನ್ನು ಸುಟ್ಟು ಬೂದಿ ಮಾಡಲಾಗುತ್ತದೆ ಅಥವಾ ಅವುಗಳನ್ನು ವಿಶೇಷ ಸ್ಥಾನದಲ್ಲಿ ಇಡಲಾಗುತ್ತದೆ. ಆದರೆ, ಪಪುವಾ ಗಿನಿಯಾದಲ್ಲಿ ಪ್ರಸ್ತುತ ಈ ಆಚರಣೆಯನ್ನು ನಿರ್ಬಂಧಿಸಲಾಗಿದೆ. ಆದರೆ, ಬುಡಕಟ್ಟು ಜನಾಂಗದ ಕೆಲ ಮಹಿಳೆಯರಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಕೂಡ ಗಮನಿಸಬಹುದಾಗಿದೆ ಮತ್ತು ಇಂದಿಗೂ ಕೂಡ ಕಡಿತಗೊಂಡ ಬೆರಳಿನಿಂದ ಅವರು ಜೀವಿಸುತ್ತಿದ್ದಾರೆ.
ಇದನ್ನೂ ಓದಿ-Viral: ಕುಡಿದ ಅಮಲಿನಲ್ಲಿ ಜೀವಂತ ಹಾವು ನುಂಗಿ ವ್ಯಕ್ತಿ ಸಾವು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ