Zydus Cadila 3 ಡೋಸ್ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರದ ಅನುಮತಿ

Zydus Cadila ಕೊವಿಡ್ ಲಸಿಕೆಯ ಹೆಸರು ZyCov-D. ಭಾರತದ ಔಷಧ ನಿಯಂತ್ರಕ  (DCGI)ನ ತಜ್ಞರ ಸಮಿತಿಯು ಶುಕ್ರವಾರ ತುರ್ತು ಬಳಕೆಗಾಗಿ ಈ ಲಸಿಕೆಯನ್ನು ಅನುಮೋದಿಸಿದೆ. ಈ ಲಸಿಕೆಯ 2 ಡೋಸ್‌ಗಳ ಪರಿಣಾಮದ ಬಗ್ಗೆ ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ.

Written by - Nitin Tabib | Last Updated : Aug 20, 2021, 10:16 PM IST
  • ಭಾರತದಲ್ಲಿ ಕೊವಿಡ್-19 ವಿರುದ್ಧ ಹೋರಾಟದಲ್ಲಿ ಮತ್ತೊಂದು ವ್ಯಾಕ್ಸಿನ್ ಸೇರ್ಪಡೆ.
  • ಜೈಡಸ್ ಕ್ಯಾಡಿಲಾ ಲಸಿಕೆಯಾಗಿರುವ ಜೈಕೊವ್ -ಡಿ ಲಸಿಕೆಯ ತುರ್ತು ಬಳಕೆಗೆ DCGI ಅನುಮೋದನೆ.
  • ಅನುಮೋದನೆ ಗೊಂಡ ಒಟ್ಟು ಐದು ಲಸಿಕೆಗಳಲ್ಲಿ ಇದು ಎರಡನೇ ಸಂಪೂರ್ಣ ಭಾರತದ ಸ್ವದೇಶಿ ಲಸಿಕೆಯಾಗಿದೆ.
Zydus Cadila 3 ಡೋಸ್ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರದ ಅನುಮತಿ title=
Emergency Use Approval To ZyCoV-D (File Photo)

ನವದೆಹಲಿ: Emergency Use Approval To ZyCoV-D - ಕರೋನಾ ಸಾಂಕ್ರಾಮಿಕ (Covid-19 Pandemic) ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಲಸಿಕಾಕರಣ ಕಾರ್ಯಕ್ರಮಕ್ಕೆ ಇದೀಗ  ಮತ್ತೊಂದು ಲಸಿಕೆಯನ್ನು ಸೇರಿಸಲಾಗಿದೆ. ಕೇಂದ್ರ ಸರ್ಕಾರವು ಫಾರ್ಮ ಕಂಪನಿ ಝೈಡಸ್ ಕ್ಯಾಡಿಲಾದ (Zydus Cadila) 3 ಡೋಸ್ ಕೊರೊನಾ ಲಸಿಕೆಯ ತುರ್ತುಬಳಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯ ಹೆಸರು ZyCov-D. ಭಾರತದ ಔಷಧ ನಿಯಂತ್ರಕ ಜನರಲ್‌ನ (DCGI) ತಜ್ಞರ ಸಮಿತಿಯು ಶುಕ್ರವಾರ ಈ ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಿದೆ. ಈ ಲಸಿಕೆಯ 2 ಡೋಸ್‌ಗಳ ಪರಿಣಾಮದ ಕುರಿತು ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ.

ಜೆನೆರಿಕ್ ಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ  ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ (Cadila Health Care Limited) ಜುಲೈ 1 ರಂದು ZyCoV-D ಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. 28 ಸಾವಿರ ಸ್ವಯಂಸೇವಕರ ಮೇಲೆ ನಡೆಸಿದ ಕೊನೆಯ ಹಂತದ ಪ್ರಯೋಗದ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಲಸಿಕೆಯ ಪರಿಣಾಮಕಾರಿತ್ವವು ಶೇ. 66.6 ರಷ್ಟಿದೆ  ಎಂದು ತಿಳಿದುಬಂದಿದೆ. ಈ ಲಸಿಕೆ 12 ರಿಂದ 18 ವಯೋಮಾನದವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಪ್ರಾಯೋಗಿಕ ಡೇಟಾವನ್ನು ಇನ್ನೂ ಪ್ಯಾರ್ ರಿವ್ಯೂ ಮಾಡಲಾಗಿಲ್ಲ.

ಇದನ್ನೂ ಓದಿ-Coronavirus Vaccine: ಮಹಿಳೆಯರ ಫಲವತ್ತತೆಯ ಮೇಲೆ Corona Vaccine ಪ್ರಭಾವ! ತಜ್ಞರು ಹೇಳುವುದೇನು?

ಜೈಡಸ್ ಕ್ಯಾಡಿಲಾ ಸೇರಿದಂತೆ ಭಾರತದ ಬಳಿ ಇದೀಗ ಐದು ಲಸಿಕೆಗಳು
ತುರ್ತು ಬಳಕೆಯ ನಂತರ ಈ ಲಸಿಕೆ ಸಂಪೂರ್ಣವಾಗಿ ಅನುಮೋದನೆಗೊಂಡರೆ. ಇದು ಭಾರತದ ಎರಡನೇ ಸ್ವದೇಶಿ ಲಸಿಕೆಯಾಗಿದೆ. ಈ ಹಿಂದೆ ಭಾರತ್ ಬಯೋಟೆಕ್ ಮತ್ತು ICMR ಒಟ್ಟಾಗಿ COVAXIN ಎಂಬ ಮೊದಲ ಸ್ವದೇಶಿ ಕರೋನಾ ಲಸಿಕೆಯನ್ನು (Corona Vaccine) ಅಭಿವೃದ್ಧಿಗೊಳಿಸಿವೆ ಎಂಬುದು ಇಲ್ಲಿ ಗಮನಾರ್ಹ. ಈಗಾಗದೆ ದೇಶದಲ್ಲಿ ಒಟ್ಟು 4 ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್, ಕೋವಾಕ್ಸಿನ್, ಸ್ಪುಟ್ನಿಕ್, ಮಾಡರ್ನಾ. ಇದೀಗ ಜೈಡಸ್ ಲಸಿಕೆ ಈ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ, ಈ ಸಂಖ್ಯೆ ಐದಕ್ಕೆ ಏರಿಕೆಯಾದಂತಾಗಿದೆ.

ಇದನ್ನೂ ಓದಿ-Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?

ICMR ಹಾಗೂ ಬಯೋಟೆಕ್ನಾಲಾಜಿ ವಿಭಾಗದ ಬೆಂಬಲದೊಂದಿಗೆ ಈ ಲಸಿಕೆ ಅಭಿವೃದ್ಧಿಗೊಂಡಿದೆ
ಇದಕ್ಕೂ ಮೊದಲು ಈ ಕುರಿತು ಹೇಳಿಕೆ ನೀಡಿದ್ದ ಜೈಡಸ್ ಕ್ಯಾಡಿಲಾ, ತನ್ನ ಲಸಿಕೆಗೆ ಅನುಮೋದನೆ ದೊರೆತ ಎರಡು ತಿಂಗಳಲ್ಲಿ ಲಸಿಕೆಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.  ಜೈಕೋವ್-ಡಿ ಲಸಿಕೆಯನ್ನು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬೆಂಬಲದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.  ಈ ಲಸಿಕೆಯನ್ನು ಸಾಮಾನ್ಯ ಫ್ರೀಜರ್‌ನಲ್ಲಿ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬಹುದು.

ಇದನ್ನೂ ಓದಿ-Corona Vaccination Latest Update: ಸೂರಿಲ್ಲದ ಭಿಕ್ಷುಕರ Vaccinationಗಾಗಿ ಕೇಂದ್ರ ಸರ್ಕಾರದ ಪ್ಲಾನ್, ರಾಜ್ಯಗಳಿಗೆ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News