Modi Government Big Plan: ಬ್ಯಾಂಕ್ ಗ್ಯಾರಂಟಿಗೆ ಪರ್ಯಾಯವಾಗಿ Insurance Bond ತರಲು ಮೋದಿ ಸರ್ಕಾರದ ಸಿದ್ಧತೆ!

Modi Government Big Plan - ಸಾಮಾನ್ಯವಾಗಿ ಸಾಲ ನೀಡುವಾಗ ಬ್ಯಾಂಕ್ ಗಳ ವತಿಯಿಂದ ಗ್ಯಾರಂಟಿ ಕೇಳಲಾಗುತ್ತದೆ. ಅಡವಿಟ್ಟ ಆಸ್ತಿಯ ರೂಪದಲ್ಲಿ ಇದರ ಅವಶ್ಯಕತೆ ಬೀಳುತ್ತದೆ.

Written by - Nitin Tabib | Last Updated : Aug 25, 2021, 02:11 PM IST
  • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ.
  • ಈ ಬದಲಾವಣೆಯಿಂದ ಬ್ಯಾಂಕುಗಳಿಂದ ಸಾಲ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ.
  • ಬ್ಯಾಂಕ್ ಗ್ಯಾರಂಟಿಗಳಿಗೆ ಪರ್ಯಾಯವಾಗಿ ವಿಮಾ ಬಾಂಡ್‌ಗಳನ್ನು ಪರಿಚಯಿಸಲು ಸರ್ಕಾರ ಪರಿಗಣಿಸುತ್ತಿದೆ.
Modi Government Big Plan: ಬ್ಯಾಂಕ್ ಗ್ಯಾರಂಟಿಗೆ ಪರ್ಯಾಯವಾಗಿ Insurance Bond ತರಲು ಮೋದಿ ಸರ್ಕಾರದ ಸಿದ್ಧತೆ! title=
Modi Government Big Plan (File Photo)

Modi Government Big Plan - ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಸಿದ್ಧತೆ ನಡೆಸುತ್ತಿದೆ. ಇದರಿಂದ ಬ್ಯಾಂಕುಗಳಿಂದ ಸಾಲ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ. ಈ ಕುರಿತು ಮಾತನಾಡಿರುವ ಹಣಕಾಸು ಕಾರ್ಯದರ್ಶಿ(Finance Secretary) ಟಿ.ವಿ.ಸೋಮನಾಥನ್ (TV Somanathan), ಬ್ಯಾಂಕ್ ಗ್ಯಾರಂಟಿಗಳಿಗೆ ಪರ್ಯಾಯವಾಗಿ ವಿಮಾ ಬಾಂಡ್‌ಗಳನ್ನು (Insurance Bond) ಪರಿಚಯಿಸಲು ಸರ್ಕಾರ ಪರಿಗಣಿಸುತ್ತಿದೆ. ಸೋಮನಾಥನ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮತ್ತು ಉದ್ಯಮ ಮುಖ್ಯಸ್ಥರ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಸೀತಾರಾಮನ್ ಮುಂಬೈಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಆಗಸ್ಟ್ 25 ಹಣಕಾಸು ಸಚಿವರ ಭೇಟಿಯ ಎರಡನೇ ದಿನವಾಗಿದೆ.

ಅನಧಿಕೃತ ಹೇಳಿಕೆಯೊಂದರ ಪ್ರಕಾರ, "ಬ್ಯಾಂಕ್ ಗ್ಯಾರಂಟಿಗಳಿಗೆ (Bank Gurantee) ಪರ್ಯಾಯವಾಗಿ ವಿಮಾ ಬಾಂಡ್‌ಗಳನ್ನು ಪರಿಚಯಿಸಲು ಸರ್ಕಾರವು (Modi Government) ಯೋಚಿಸುತ್ತಿದೆ." ಸಾಮಾನ್ಯವಾಗಿ ಸಾಲ ನೀಡುವಾಗ ಬ್ಯಾಂಕ್ ಗಳ ವತಿಯಿಂದ ಗ್ಯಾರಂಟಿ ಕೇಳಲಾಗುತ್ತದೆ. ಅಡಮಾನ ಆಸ್ತಿಯ ರೂಪದಲ್ಲಿ ಇದರ ಅವಶ್ಯಕತೆ ಬೀಳುತ್ತದೆ. ವಿಮಾ ಬಾಂಡ್ ಕೂಡ ಗ್ಯಾರಂಟಿಯಂತೆ ಆದರೆ ಇದಕ್ಕೆ  ಯಾವುದೇ ಕೋಲ್ಯಾಟರಲ್ ಅವಶ್ಯಕತೆ ಬೀಳುವುದಿಲ್ಲ. ಕಳೆದ ವರ್ಷದ ವರದಿಯ ಪ್ರಕಾರ, ವಿಮಾ ನಿಯಂತ್ರಕ IRDAI ಕೂಡ ರಸ್ತೆ ಯೋಜನೆಗಳಿಗಾಗಿ ವಿಮಾ ಕಂಪನಿಗಳ ವತಿಯಿಂದ ಭದ್ರತಾ ಬಾಂಡ್‌ಗಳನ್ನು ಪರಿಚಯಿಸುವ ಆಯ್ಕೆಯನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ-DICGC Amendment Bill 2021: ಬ್ಯಾಂಕ್ ದಿವಾಳಿಯಾಗಲಿ ಅಥವಾ ಬಂದ್ ಆಗಲಿ, 90 ದಿನಗಳೊಳಗೆ ಗ್ರಾಹಕರಿಗೆ 5 ಲಕ್ಷ ರೂ. ವಿಮಾ ಮೊತ್ತ ಸಿಗಲಿದೆ

ಭರವಸೆಯ ಪಾಲಸಿಗೆ ಬದ್ಧತೆ
ಉದ್ಯಮದ ಮುಖ್ಯಸ್ಥರೊಂದಿಗಿನ ನಡೆದ ಸಭೆಯಲ್ಲಿ, ಸೀತಾರಾಮನ್ ಸರ್ಕಾರವು ನೀತಿಗಳ ವಿಷಯದಲ್ಲಿ ಖಚಿತತೆ ಮತ್ತು ವಿಶ್ವಾಸಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ನಿಯಂತ್ರಕರು ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೇಳಿಕೆಯ ಪ್ರಕಾರ, ಈ ಮಹತ್ವದ ವಿಚಾರದಲ್ಲಿ ಸರ್ಕಾರವು ನಿಯಂತ್ರಕರೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, ಇಲಾಖೆಯು ಸ್ಟಾರ್ಟಪ್‌ಗಳ ತೆರಿಗೆ ಸಂಬಂಧಿತ ಸಮಸ್ಯೆಗಳ ಕುರಿತು ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಅದು ಉದ್ಯಮ ಕ್ಷೇತ್ರದ ಸಲಹೆಗಳನ್ನು ಅಹ್ವಾನಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-SC Notice To Centre: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಶುಲ್ಕದ ಮಾನದಂಡಗಳ ಕುರಿತು ಕೇಂದ್ರಕ್ಕೆ ಸುಪ್ರೀಂ ನೋಟೀಸ್

ಆರ್ಥಿಕತೆಯು ಕ್ರಮೇಣವಾಗಿ ಬ್ಯಾಂಕ್ ಆಧಾರಿತ ಸಾಲ ಮಾದರಿಯಿಂದ ಮಾರುಕಟ್ಟೆ ಆಧಾರಿತ ಹಣಕಾಸು ಮಾದರಿಗೆ ಬದಲಾಗುತ್ತಿದೆ ಎಂದು ಹಣಕಾಸು ಸಚಿವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಯೋಜನೆಗಳ ದೀರ್ಘಾವಧಿಯ ಸಾಲವನ್ನು ಅಭಿವೃದ್ಧಿ ಹಣಕಾಸು ಸಂಸ್ಥೆಗಳ (DFI) ಮೂಲಕ ಖಾತ್ರಿಪಡಿಸಲಾಗುವುದು. ಮುಂಬರುವ ದಿನಗಳಲ್ಲಿ DFI ಬ್ಯಾಂಕುಗಳ ಸ್ಪರ್ಧೆಯನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Swiss Bankನಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣ ಎಷ್ಟು? ನಿಜಾಂಶ ಹೊರಹಾಕಿದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News